ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮದ್ದೂರು ತಾಲೂಕಿನ ಹೊನ್ನಾಯಕನಹಳ್ಳಿ ಶ್ರೀಮಂಟೇಸ್ವಾಮಿ ಕ್ಷೇತ್ರದಲ್ಲಿ 7ನೇ ವರ್ಷದ ವರಮಹಾಲಕ್ಷ್ಮಿ ಹಬ್ಬದ ಆಚರಣೆಯು ವಿಜೃಂಭಣೆಯಿಂದ ಜರುಗಿದ್ದು ಧಾರ್ಮಿಕ ಕಾರ್ಯಕ್ರಮ ಯಶಸ್ಸಿಗಾಗಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಧನ ಸಹಾಯ ವಿತರಿಸಲಾಯಿತು.
ಕೆ.ಎಂ ದೊಡ್ಡಿ:
ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮದ್ದೂರು ತಾಲೂಕಿನ ಹೊನ್ನಾಯಕನಹಳ್ಳಿ ಶ್ರೀಮಂಟೇಸ್ವಾಮಿ ಕ್ಷೇತ್ರದಲ್ಲಿ 7ನೇ ವರ್ಷದ ವರಮಹಾಲಕ್ಷ್ಮಿ ಹಬ್ಬದ ಆಚರಣೆಯು ವಿಜೃಂಭಣೆಯಿಂದ ಜರುಗಿದ್ದು ಧಾರ್ಮಿಕ ಕಾರ್ಯಕ್ರಮ ಯಶಸ್ಸಿಗಾಗಿ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಸದಸ್ಯರು ಹಾಗೂ ಸಮಾಜ ಸೇವಕ ಕದಲೂರು ರವಿ ಧನ ಸಹಾಯ ವಿತರಿಸಿದರು.
ಈ ವೇಳೆ ಮಾತನಾಡಿದ ರವಿ ಅವರು, ಕ್ಷೇತ್ರದ ಗ್ರಾಮಗಳಲ್ಲಿ ಜರುಗುವ ಸಾರ್ವಜನಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ನಮ್ಮ ಟ್ರಸ್ಟ್ ಸದಾ ಬೆಂಬಲಿಸುತ್ತಾ ಬಂದಿದೆ ಎಂದರು.
ಪವಾಡ ಪ್ರಸಿದ್ಧ ಶ್ರೀಮಂಟೇಸ್ವಾಮಿ ಕ್ಷೇತ್ರದಲ್ಲಿ ಶ್ರೀವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ವಿಜೃಂಭಣೆ ಮತ್ತು ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಈ ವೇಳೆ ಮುಖಂಡರಾದ ಮಹೇಂದ್ರ , ವಿಜಯ್ ಕುಮಾರ್, ಪುನೀತ್ ಕುಮಾರ್, ನವೀನ, ಕೆಂಪೇಗೌಡ, ಯೋಗಾನಂದ, ಕುಳ್ಳಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರಮಹಾಲಕ್ಷ್ಮಿ ಹಬ್ಬ ವೈಭವದಿಂದ ಆಚರಣೆ
ಹಲಗೂರು: ಮುತ್ತೈದೆಯರಿಂದ ಭಕ್ತಿ ಭಾವ ಪೂರಕವಾಗಿ ವರಲಕ್ಷ್ಮಿ ಹಬ್ಬವನ್ನು ಶುಕ್ರವಾರ ಆಚರಿಸಲಾಯಿತು.
ಗೃಹಿಣಿ ಪೂಜಾ ಸಚಿನ್ ಮಾತನಾಡಿ, ಶ್ರಾವಣ ಮಾಸದ 2ನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಲಕ್ಷ್ಮೀದೇವಿಗೆ ಹೊಸ ಸೀರೆಯನ್ನು ತೊಡಿಸಿ, ಚಿನ್ನಾಭರಣಗಳಿಂದ ಶೃಂಗರಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ಭಕ್ತಿ ಭಾವಪೂರ್ವಕವಾಗಿ ಪೂಜೆ ನಡೆಸಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡುವ ಮುಖಾಂತರ ಹಬ್ಬವನ್ನು ಆಚರಿಸಿದ್ದೇವೆ ಎಂದರು.
ವಿದ್ಯಾಗಣಪತಿ ಗ್ರಾಮ ದೇವತೆ ಪಟ್ಟಲದಮ್ಮ, ಕಾಳಿಕಾಂಬ, ಸೋಮೇಶ್ವರ, ಶಂಭುಲಿಂಗೇಶ್ವರ, ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಪುನಸ್ಕಾರಗಳನ್ನು ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.