ಗಣರಾಜ್ಯೋತ್ಸವದಂದು ಏಳು ಅಂಗವಿಕಲರಿಗೆ ಧನ ಸಹಾಯ

KannadaprabhaNewsNetwork |  
Published : Jan 28, 2026, 02:00 AM IST
27ಎಚ್ಎಸ್ಎನ್20 :  | Kannada Prabha

ಸಾರಾಂಶ

ಹುಡಾ ಕಚೇರಿ ಎದುರು ಕುವೆಂಪು ರಸ್ತೆ ಬಳಿ ಇರುವ ಹಾಸನ ಲಯನ್ಸ್ ಕ್ಲಬ್ ವತಿಯಿಂದ ದೇಶದ 77ನೇ ಗಣರಾಜ್ಯೋತ್ಸವವನ್ನು ಭಕ್ತಿ, ಗೌರವ ಮತ್ತು ಸಂಭ್ರಮದೊಂದಿಗೆ ಏಳು ಜನ ಅಂಗವಿಕಲರಿಗೆ ಧನ ಸಹಾಯ ಮಾಡುವ ಮೂಲಕ ಆಚರಿಸಲಾಯಿತು. ಪ್ರತಿಯೊಬ್ಬ ನಾಗರಿಕನು ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ತನ್ನ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಬೇಕು ಎಂದು ಕರೆ ನೀಡಿದರು. ದೇಶದ ಪ್ರಗತಿಗೆ ಶ್ರಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹುಡಾ ಕಚೇರಿ ಎದುರು ಕುವೆಂಪು ರಸ್ತೆ ಬಳಿ ಇರುವ ಹಾಸನ ಲಯನ್ಸ್ ಕ್ಲಬ್ ವತಿಯಿಂದ ದೇಶದ 77ನೇ ಗಣರಾಜ್ಯೋತ್ಸವವನ್ನು ಭಕ್ತಿ, ಗೌರವ ಮತ್ತು ಸಂಭ್ರಮದೊಂದಿಗೆ ಏಳು ಜನ ಅಂಗವಿಕಲರಿಗೆ ಧನ ಸಹಾಯ ಮಾಡುವ ಮೂಲಕ ಆಚರಿಸಲಾಯಿತು.ಕ್ಲಬ್ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಾರತಾಂಬೆ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶ್ರದ್ಧಾಭಾವದ ಚಾಲನೆ ನೀಡಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಚ್. ರಮೇಶ್ ಅವರು, ಗಣರಾಜ್ಯೋತ್ಸವದ ಇತಿಹಾಸ, ಅದರ ಉದ್ದೇಶ ಮತ್ತು ಮಹತ್ವವನ್ನು ವಿವರವಾಗಿ ವಿವರಿಸಿದರು. ಭಾರತೀಯ ಸಂವಿಧಾನವು ದೇಶದ ಏಕತೆ, ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕನು ಸಂವಿಧಾನ ನೀಡಿರುವ ಹಕ್ಕುಗಳ ಜೊತೆಗೆ ತನ್ನ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಬೇಕು ಎಂದು ಕರೆ ನೀಡಿದರು. ದೇಶದ ಪ್ರಗತಿಗೆ ಶ್ರಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ. ಶಿವಸ್ವಾಮಿ ಮಾತನಾಡಿ, ಸಮಾಜ ಸೇವೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಲಯನ್ಸ್ ಕ್ಲಬ್‌ಗಳ ಪಾತ್ರವನ್ನು ವಿವರಿಸಿದರು. ಹಿರಿಯ ಸದಸ್ಯರಾದ ಹೆಚ್.ಆರ್. ಚಂದ್ರೇಗೌಡ (ಡಿಸಿಎಸ್), ಹೆಚ್.ಪಿ. ಅಶೋಕ್ ಕುಮಾರ್ (ಎಸಿಟಿ), ಬಿ.ವಿ. ಹೆಗಡೆ (ಪಿಡಿಜಿ) ಮಾಲತಿ ಹೆಗಡೆ, ಜಯರಮೇಶ್, ಮಾಜಿ ಅಧ್ಯಕ್ಷ ಐ.ಜಿ. ರಮೇಶ್, ಸೋಮಶೇಖರ್, ಕಿರಣ್, ಸೇರಿದಂತೆ ಹಲವಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ