ಹಾನಗಲ್ಲ:ಆರ್ಥಿಕ ಶಿಸ್ತು ಸಹಕಾರವಿದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಯಶಸ್ಸು ಮತ್ತು ದೀರ್ಘಕಾಲದ ಉಳಿವು ಸಾಧ್ಯ ಎಂದು ಅಕ್ಕಿಆಲೂರಿನ ಗುರು ಚೆನ್ನವೀರೇಶ್ವರ ವಿರಕ್ತ ಮಠದ ಶಿವಬಸವ ಸ್ವಾಮೀಜಿ ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸಹಕಾರ ಹಾಲು ಮಹಾಮಂಡಳದ ನಿರ್ದೇಶಕ ಚಂದ್ರಪ್ಪ ಜಾಲಗಾರ, ಸಹಕಾರಿ ಕ್ಷೇತ್ರಕ್ಕೆ ಸರ್ಕಾರವನ್ನು ಆಳುವ ಶಕ್ತಿಯಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು. ಸರ್ವರೂ ಸಮಾನರೆಂಬ ಭಾವನೆಯಿದ್ದರೆ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸದಾನಂದ ಮೆಳ್ಳಿಹಳ್ಳಿ ಮಾತನಾಡಿ, ಹಾನಗಲ್ಲ ತಾಲೂಕಿಗೆ ಈ ವರ್ಷ ೩೦ ಕೋಟಿ ರು. ಮಾಧ್ಯಮಿಕ ಸಾಲ ಹಾಗೂ ಶೂನ್ಯ ಬಡ್ಡಿದರದಲ್ಲಿ ೭ ಕೋಟಿ ರು. ಸಾಲ ನೀಡಲಾಗಿದೆ. ಇನ್ನೊಂದು ವರ್ಷದಲ್ಲಿ ಹಾವೇರಿ ಜಿಲ್ಲೆಗೆ ಸೀಮಿತವಾಗಿ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಸ್ಥಾಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.ಅಕ್ಕಿಆಲೂರು ಮುತ್ತಿನಕಂತಿಮಠ ಗುರು ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಷಣ್ಮುಖಪ್ಪ ಮುಚ್ಚಂಡಿ ಅಧ್ಯಕ್ಷತೆವಹಿಸಿದ್ದರು. ಸಹಕಾರ ಸಂಘಗಳ ಹಾವೇರಿ ಜಿಲ್ಲಾ ನಿರ್ದೇಶಕ ಮಧುಶ್ರೀನಿವಾಸ, ಸವಣೂರು ಉಪವಿಭಾಗದ ಸಹಾಯಕ ನಿಬಂಧಕ ಎಸ್.ಜಿ. ಸುಣಗಾರ, ನೇತಾಜಿ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಈಳಿಗೇರ, ಶಿಕ್ಷಕ ವಿಷ್ಣು ಪಟಗಾರ ಮಾತನಾಡಿದರು.
ಸವಿತಾ ಹಿರೇಮಠ ಸ್ವಾಗತಿಸಿದರು, ಕಿರಣ ಹೂಗಾರ ನಿರೂಪಿಸಿದರು. ಮಂಜುನಾಥ ಅರ್ಕಚಾರ ವಂದಿಸಿದರು.