- ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಯುವನಿಧಿ ಕಾರ್ಯಕ್ರಮ- - - ದಾವಣಗೆರೆ: ರಾಜ್ಯದಲ್ಲಿ ವಿದ್ಯಾರ್ಥಿಗಳ ಕುರಿತು ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದೆ. ಇದು ಯುವಸಮೂಹಕ್ಕೆ ಆರ್ಥಿಕ ಬಲ ತಂದಿದೆ ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಾಮನೂರು ಟಿ.ಬಸವರಾಜು ಅಭಿಪ್ರಾಯಪಟ್ಟರು.
ಯುವಜನರು ಡಿಪ್ಲೊಮಾ ಹಾಗೂ ಪದವಿ ಶಿಕ್ಷಣ ಪೂರೈಸಿ, ಉದ್ಯೋಗ ಸಿಗಲಾರದೇ ಸಂದರ್ಶನಗಳಿಗೆ ಹಾಜರಾಗಲು ಹಣಕಾಸಿನ ತೊಂದರೆಗಳ ಎದುರಿಸುವ ಸಂದರ್ಭಗಳು ಸರ್ಕಾರ ಗಮನಿಸಿದೆ. ಅಂತಹ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಯುವನಿಧಿ ಯೋಜನೆ ಜಾರಿಗೆ ತಂದಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಸ್ಫರ್ಧಿಗಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಹಣಕಾಸಿನ ಅವಶ್ಯಕತೆ ತುಂಬಾ ಮುಖ್ಯ. ಹಾಗಾಗಿ, ಈ ಯೋಜನೆ ಎಲ್ಲರೂ ಸಮರ್ಪಕವಾಗಿ ಬಳಸಿ, ಬದುಕು ಸಾರ್ಥಕಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಡಿ.ರವೀಂದ್ರ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ನಂಜನಾಯ್ಕ, ಅನಿಶ್ ಪಾಷ, ಸದಸ್ಯರಾದ ಶಿವಶಂಕರ ಕೈದಾಳೆ, ಡೋಲಿ ಚಂದ್ರು, ಎಸ್.ಎಸ್. ಗಿರೀಶ್, ಕಾಲೇಜಿನ ಪ್ರಾಚಾರ್ಯೆ ಪ್ರೊ. ಕಮಲ ಸೊಪ್ಪಿನ್, ಉಪನ್ಯಾಸಕರಾದ ಪಾರ್ವತಿ ಅಲ್ಲೊಳ್ಳಿ, ಆರ್.ಆರ್. ಶಿವಕುಮಾರ್, ಉಷಾ ಎಂ.ಆರ್., ಡಾ. ಆರ್.ಜಿ. ಕವಿತಾಮ ಅನ್ವರ್ ಬೆಟಗೇರಿ, ಡಾ.ರಣಧೀರ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಎಸ್.ಮಲ್ಲಿಕಾರ್ಜುನ, ಬಿ.ಎನ್.ಧನಂಜಯ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.- - - -29ಕೆಡಿವಿಜಿ35.ಜೆಪಿಜಿ:
ದಾವಣಗೆರೆ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಯುವನಿಧಿ ಯೋಜನೆ ಅರಿವು ಕಾರ್ಯಕ್ರಮವನ್ನು ಶಾಮನೂರು ಟಿ.ಬಸವರಾಜ ಉದ್ಘಾಟಿಸಿದರು.