ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಮಾಹಿತಿ । ಸ್ವಚ್ಛ ಪಟ್ಟಣಕ್ಕಾಗಿ ಜನರು ಸಹಕರಿಸಲಿ
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಇನ್ಮುಂದೆ ನಡೆಯುವ ವಿವಿಧ ಬಗೆಯ ಖಾಸಗಿ ಸಭೆ, ಸಮಾರಂಭಗಳ ಕಸ ವಿಲೇವಾರಿ ಮಾಡದೆ ಸಾರ್ವಜನಿಕ ಸ್ಥಳಗಳಲ್ಲಿ ಸುರಿದರೆ ಪುರಸಭೆ ದಂಡ ವಿಧಿಸುತ್ತದೆ. ಸಮಾರಂಭಗಳ ಬಗ್ಗೆ ಅನುಮತಿ ಪಡೆದು, ಶುಲ್ಕ ಭರಿಸಿದರೆ ಪುರಸಭೆಯೇ ಕಸ ವಿಲೇವಾರಿ ಮಾಡಲು ಚಿಂತನೆ ನಡೆಸಿದೆ.
ಪಟ್ಟಣದಲ್ಲಿ ಖಾಸಗಿ ಸಭೆ, ಸಮಾರಂಭ ನಡೆಸಿದ ಬಳಿಕ ಊಟೋಪಚಾರದ ಬಾಳೆ ಎಲೆ, ಪ್ಲಾಸ್ಟಿಕ್ ಬಾಟಲ್/ಲೋಟ, ಟೇಬಲ್ ಗೆ ಹಾಕುವ ಪ್ಲಾಸ್ಟಿಕ್ ಹಾಗೂ ಕಾಗದದ ರೋಲ್ ಗಳನ್ನು ನಾಗರಿಕರು ಸರ್ಕಾರಿ ಅಥವಾ ಖಾಸಗಿ ಸಾರ್ವಜನಿಕ ಸ್ಥಳದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ.ಒಣ ಕಸ ಮತ್ತು ಹಸಿ ಕಸ ಟನ್ ಗಟ್ಟಲೇ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಬಗೆಯ ಕಸ ಸಾರ್ವಜನಿಕ ಸ್ಥಳದಲ್ಲಿ ಸುರಿದು ಹೋದರೆ ಹಂದಿ, ನಾಯಿಗಳು ಚೆಲ್ಲಾ ಪಿಲ್ಲಿ ಮಾಡಿದರೆ ಕಸ ಚರಂಡಿಗೋ ರಸ್ತೆಗೆ ಬರುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಕಸ ವಿಲೇವಾರಿ ಮಾಡದೆ ಇದ್ದರೆ ಸೊಳ್ಳೆ ಕುಳಿತು ರೋಗ ಹರಡುವ ಸಾದ್ಯತೆ ಇದೆ ಎಂಬ ಸಾರ್ವಜನಿಕರ ಸಲಹೆ ಮತ್ತು ದೂರಿನ ಹಿನ್ನಲೆ ಪುರಸಭೆ ಖಾಸಗಿ ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ ಮಾಡಲೊರಟಿದೆ.
ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕನ್ನಡಪ್ರಭದೊಂದಿಗೆ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಖಾಸಗಿ ಸಭೆ, ಸಮಾರಂಭಗಳ ಬಳಿಕ ಬಹುತೇಕರು ಸಾರ್ವಜನಿಕ ಸ್ಥಳಗಳಲ್ಲಿ ವಿಲೇವಾರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಪುರಸಭೆ ವ್ಯಾಪ್ತಿಯಲ್ಲಿ ಖಾಸಗಿ ಸಭೆ, ಸಮಾರಂಭ ನಡೆಸಲು ಪುರಸಭೆಯ ಆರೋಗ್ಯ ವಿಭಾಗದಿಂದ ಅನುಮತಿ ಪಡೆದು, ನಿಗದಿತ ಶುಲ್ಕ ಪುರಸಭೆಗೆ ಕಟ್ಟಿದರೆ ಪುರಸಭೆ ಕಸ ಸಾಗಿಸುವ ವಾಹನದಲ್ಲೇ ಒಣ ಕಸ, ಹಸಿ ಕಸ ಬೇರ್ಪಡಿಸಿ ಘನ ತ್ಯಾಜ್ಯ ಜಾಗಕ್ಕೆ ಸಾಗಿಸುತ್ತೇವೆ ಎಂದರು.ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ಸಭೆ, ಸಮಾರಂಭಗಳ ಬಳಿಕ ಊಟೋಪಚಾರದ ಕಸ ಹಾಕುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆ ದಂಡ ಹಾಕಲಾಗಿದೆ. ಇನ್ಮುಂದೆ ಪುರಸಭೆಯೊಂದಿಗೆ ಸಹಕರಿಸಿದರೆ ಸ್ವಚ್ಛ ಸುಂದರ ಪಟ್ಟಣವಾಗಲಿದೆ.
ಸಾವಿರ ರು. ದಂಡ ಹಾಕಿದ ಪುರಸಭೆ:ಪಟ್ಟಣದ ಕೆಎಸ್‌ಎನ್ ಬಡಾವಣೆಯ ನಿವಾಸಿ ರಾಜು ಖಾಸಗಿ ಕಾರ್ಯಕ್ರಮದ ನಂತರ ಊಟೋಪಚಾರದ ಬಳಿಕ ಉತ್ಪತ್ತಿಯಾದ ಕಸವನ್ನು ಖಾಲಿ ನಿವೇಶನದಲ್ಲಿ ಸುರಿದಿದ್ದಕ್ಕೆ ಸಾವಿರ ರು. ದಂಡ ಹಾಕಲಾಗಿದೆ