ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿರವರ ಬೆಂಗಳೂರಿನ ಮನೆ ಮತ್ತು ಕಚೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಇಡಿ ದಾಳಿಗೆ ಬಿಜೆಪಿ ಮುಖಂಡ ಸಿ.ಮುನಿರಾಜು ಕಾರಣರಾಗಿದ್ದು, ತಮ್ಮ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಶಾಸಕ ಸುಬ್ಬಾರೆಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.2025ರ ಜೂನ್ 5ರಂದು ನನ್ನ ಸ್ನೇಹಿತರರೊಬ್ಬರ ವಾಟ್ಸ್ ಆ್ಯಪ್ ಮೂಖಾಂತರ ಕೆಲ ದಾಖಲೆಗಳನ್ನು ತಮಗೆ ಕಳುಹಿಸಿದ್ದು ಅದರಲ್ಲಿ ರಾಮಸ್ವಾಮಿ ವೀರನ್ ಎಂಬವರ ಹೆಸರಿನಲ್ಲಿರುವ ಖಾಸಗಿ ಕಂಪನಿಯವರು ಮಲೇಶಿಯಾ, ಹಾಂಕ್ ಕಾಂಗ್ ಇತರೆ ದೇಶಗಳ ದಾಖಲೆಗಳಾಗಿದ್ದು ಆ ದಾಖಲೆಗಳಲ್ಲಿ ಅರ್ಥವಾಗದ ಭಾಷೆಯಲ್ಲಿ ತಮ್ಮ ಮತ್ತು ತಮ್ಮ ಧರ್ಮಪತ್ನಿಯ ಹೆಸರು ಬಳಕೆ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಶಾಸಕರು ತಿಳಿಸಿದ್ದಾರೆ.
ಕಾರಿನ ನಕಲಿ ದಾಖಲೆಜರ್ಮನಿಯಲ್ಲಿ ನನ್ನ ಹೆಸರಿನಲ್ಲಿ ಬಿಎಂಡ್ಲ್ಯೂ ವಾಹನ ಖರೀದಿ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಟಿಯ ಜೊತೆಗೆ ಸಿಂಗಪುರದ ಒಸಿಬಿಸಿ ಬ್ಯಾಂಕಾಕ್‌ನಲ್ಲಿ ಖಾತೆಯಲ್ಲಿ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ದಾಖಲೆ ಸೃಷ್ಠಿಸಿರುವುದು ಅಲ್ಲದೆ 16 ಪುಟಗಳ ದಾಖಲೆಗಳನ್ನು ಪರಿಶೀಲಿಸಿದಾಗ ಎಲ್ಲಾ ಇ ಮೇಲ್ ಐಡಿಗಳು ಅನಾಮದೇಯ ಹೆಸರುಗಳು ಎಂಬುದು ಕಂಡುಬಂದಿರುವುದಾಗಿ ಸುಬ್ಬಾರೆಡ್ಡಿ ದೂರಿನಲ್ಲಿ ವಿವರಿಸಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಪ್ರತಿಸ್ಪರ್ಧಿಯಾಗಿ ಸ್ಪಧಿಸಿ ಪರಾಜಿತರಾಗಿದ್ದ ಸಿ.ಮುನಿರಾಜು ಹೈಕೋರ್ಟ್‌ನಲ್ಲಿ ನನ್ನ ವಿರುದ್ದ ಚುನಾವಣೆ ತಕರಾರು ದಾವೆ ಹೂಡಿದ್ದು ತಮ್ಮ ಅಫಡೆವಿಟ್ನಲ್ಲಿ ಕೆಲ ದೋಷಗಳಿರುವುದಾಗಿ ಮತ್ತು ಆಸ್ತಿ ಮರೆಮಾಚಿರುವುದಾಗಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈಗ ಅದನ್ನು ಸತ್ಯ ಮಾಡಬೇಕೆಂಬ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವ ಬಗ್ಗೆ ಅನುಮಾನ ಬಂದಿದ್ದು ಸಿ.ಮುನಿರಾಜು ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಶಾಸಕರು ಪೊಲೀಸರನ್ನು ಕೋರಿದ್ದಾರೆ.ಮುನಿರಾಜು ವಿರುದ್ಧ ಎಫ್‌ಐಆರ್
ಈ ಸಂಬಂಧ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಪೊಲೀಸರಿಗೆ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಇಲ್ಲಿನ ಪೊಲೀಸರು ಬಿಜೆಪಿ ಮುಖಡ ಸಿ.ಮುನಿರಾಜು ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.19ಬಿಜಿಪಿ-1: ಶಾಸಕ ಸುಬ್ಬಾರೆಡ್ಡಿ.
19ಬಿಜಿಪಿ-2: ಬಿಜೆಪಿಯ ಮುನಿರಾಜು.