ಸರ್ಕಾರಿ ನೌಕರರ ಸಂಘಕ್ಕೆ ಪ್ರಥಮ ಸ್ಥಾನ

KannadaprabhaNewsNetwork |  
Published : Jul 15, 2026, 02:30 AM IST
ಸ | Kannada Prabha

ಸಾರಾಂಶ

ಪೆನ್ನು ಹಿಡಿಯುವ ಪತ್ರಕರ್ತರು, ಲಾಠಿ ಹಿಡಿಯುವ ಪೊಲೀಸರು ಹಾಗೂ ಸರ್ಕಾರಿ ನೌಕರರು ಸೇರಿ ಕ್ರಿಕೆಟ್ ಆಡುತ್ತಿರುವುದು ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು.

ಕೂಡ್ಲಿಗಿ: ಸಮಾಜದ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುವಂಥ ಪೊಲೀಸರು, ಪತ್ರಕರ್ತರ ಕಾರ್ಯವು ಯಾವಾಗಲೂ ಒತ್ತಡದಿಂದ ಕೂಡಿರುತ್ತದೆ. ತಮ್ಮ ಕಾರ್ಯಗಳು ವೈರುಧ್ಯವಾಗಿದ್ದರೂ ಗುರಿ ಮಾತ್ರ ಒಂದೇ. ಹೀಗಾಗಿ ಪತ್ರಕರ್ತರು, ಪೊಲೀಸರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪೊಲೀಸರು, ಪತ್ರಕರ್ತರು ಒತ್ತಡದಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಲಿದೆ ಎಂದು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ತಿಳಿಸಿದರು.ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆ ಅಂಗವಾಗಿ ಪಟ್ಟಣದ ಮಹದೇವ ಮೈಲಾರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಪೆನ್ನು ಹಿಡಿಯುವ ಪತ್ರಕರ್ತರು, ಲಾಠಿ ಹಿಡಿಯುವ ಪೊಲೀಸರು ಹಾಗೂ ಸರ್ಕಾರಿ ನೌಕರರು ಸೇರಿ ಕ್ರಿಕೆಟ್ ಆಡುತ್ತಿರುವುದು ತಾಲೂಕಿನ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು. ಇಂಥ ಕ್ರೀಡೆಗಳ ಆಯೋಜನೆಯಿಂದ ತಂಡಗಳ ಸೋಲು, ಗೆಲುವು ಮುಖ್ಯವಾಗದೇ ಪರಸ್ಪರ ಉತ್ತಮ ಬಾಂಧವ್ಯ ಬೆಸೆಯುವುದಕ್ಕೆ ವೇದಿಕೆಯಾಗಲಿದೆ. ಆ ನಿಟ್ಟಿನಲ್ಲಿ ಉತ್ತಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಮಾಜದ ಒಡನಾಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ್ ಮಾತನಾಡಿ, ಕ್ರೀಡಾಕೂಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಸಹಕಾರಿಯಾಗಿದೆ. ಕಾರ್ಯಭಾರದ ಒತ್ತಡದಲ್ಲಿರುವ ಸರ್ಕಾರಿ ನೌಕರರು, ಪೊಲೀಸರು ಹಾಗೂ ಪತ್ರಕರ್ತರು ಕ್ರಿಕೆಟ್ ಆಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಕೆಯುಡಬ್ಲ್ಯುಜೆ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭೀಮಣ್ಣ ಗಜಾಪುರ, ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ ಮಾತನಾಡಿದರು.

ಸಿಪಿಐಗಳಾದ ಕೂಡ್ಲಿಗಿ ಪ್ರಲ್ಹಾದ್ ಆರ್.ಚನ್ನಗಿರಿ, ಕೊಟ್ಟೂರಿನ ದುರುಗಪ್ಪ, ಹಗರಿಬೊಮ್ಮನಹಳ್ಳಿಯ ವಿಕಾಸ್ ಲಮಾಣಿ, ಪಿಎಸ್ ಐಗಳಾದ ಕೂಡ್ಲಿಗಿ ಸಿ.ಪ್ರಕಾಶ್, ಕಾನಹೊಸಹಳ್ಳಿ ಸಿದ್ರಾಮ ಬಿದರಾಣಿ, ಗುಡೇಕೋಟೆ ಜಿ.ಸುಬ್ರಹ್ಮಣ್ಯಂ, ಕೊಟ್ರೇಶ್ ಚಿಮ್ನಳ್ಳಿ, ಹೊಸಹಟ್ಟಿ ಅಂಜಿನಪ್ಪ, ಸೂಲದಹಳ್ಳಿ ಹಂಪಣ್ಣ, ಮುಖಂಡರಾದ ಎಸ್.ಸುರೇಶ್, ಕೆ.ಎಚ್.ಎಂ.ಸಚಿನ್ ಕುಮಾರ್, ಕೆಯುಡಬ್ಲ್ಯುಜೆ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಜೆ.ಲಿಂಬ್ಯಾನಾಯ್ಕ, ತಾಲೂಕು ಉಪಾಧ್ಯಕ್ಷ ಕೆ.ನಾಗರಾಜ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಗುದ್ದಿ ಅಜಯ್, ಕಾರ್ಯದರ್ಶಿ ದಯಾನಂದ ಸಜ್ಜನ್, ಖಜಾಂಚಿ. ನಾಗರಾಜ ಭರಮಪ್ಪನವರ್, ಸದಸ್ಯರಾದ ಭೀಮಸಮುದ್ರ ರಂಗನಾಥ, ಸಿದ್ದಾಪುರ ಡಿ.ಎಂ.ಈಶ್ವರಪ್ಪ, ಹುಡೇಂ ಎಚ್.ಮಂಜುನಾಥ, ನಾಗರಹುಣಿಸೆ ದುರುಗೇಶ್, ಮಾರೇಶ್ ತಿಪ್ಪೇಹಳ್ಳಿ, ಕೆ.ಶಿವಕುಮಾರ್ ಸೇರಿ ಅಧಿಕಾರಿಗಳು ಇದ್ದರು.

ಬಾಕ್ಸ್:

ಸರ್ಕಾರಿ ನೌಕರರ ತಂಡ ಪ್ರಥಮ:

ಕೂಡ್ಲಿಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪೊಲೀಸ್ ಇಲಾಖೆ, ಸರ್ಕಾರಿ ನೌಕರರ ಸಂಘ, ಸರ್ಕಾರಿ ಜೂನಿಯರ್ ಕಾಲೇಜು ಉಪನ್ಯಾಸಕರು ಹಾಗೂ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅವರ ಆಪ್ತ ಬಳಗದವರ ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಸರ್ಕಾರಿ ನೌಕರರ ಸಂಘದ ತಂಡ (ಪ್ರಥಮ), ಪೊಲೀಸ್ ಇಲಾಖೆ (ದ್ವಿತೀಯ), ಪತ್ರಕರ್ತರ ಸಂಘ (ತೃತೀಯ) ಸ್ಥಾನ ಗಳಿಸಿದವು. ಎನ್‌ಟಿಎಸ್ ಬಳಗ ಹಾಗೂ ಉಪನ್ಯಾಸಕರ ತಂಡಗಳು ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿವೆ. ತೀರ್ಪುಗಾರರಾಗಿ ಶಿವಕುಮಾರ್, ನಾಗರಾಜ್ ಕಾರ್ಯ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಹಂಗಾಮಿನಲ್ಲೇ ಬರಿದಾದ ಚೆಕ್‌ ಡ್ಯಾಂಗಳು
15ನೇ ಹಣಕಾಸು ಅನುದಾನ ವಿಳಂಬ: ಸಂಕಷ್ಟದಲ್ಲಿ ಗ್ರಾಮ ಪಂಚಾಯಿತಿಗಳು