ಮೊದಲು ನಮ್ಮ ಹಕ್ಕು ಅರಿತುಕೊಳ್ಳಿ: ನ್ಯಾ. ಅಕ್ಷತಾ

KannadaprabhaNewsNetwork |  
Published : Dec 11, 2025, 02:45 AM IST
ಮುಂಡಗೋಡ: ಪಟ್ಟಣದ ನೆಹರುನಗರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸಂವಿಧಾನ ಸಂರಕ್ಷಕರ ಪಡೆ, ತಾಲ್ಲೂಕಾ ಉಚಿತ ಕಾನೂನು ನೆರವು  ಪ್ರಾಧಿಕಾರ ಮುಂಡಗೋಡ, ಸಾಧನಾ  ಮಹಿಳಾ ಸಾಂತ್ವನ ಕೇಂದ್ರ ಮುಂಡಗೋಡ, ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾನವ ದಿನಾಚರಣೆಯ ಅಂಗವಾಗಿ ಯುವತಿಯರಿಗೆ ಪೊಕ್ಸೊ ಕಾಯಿದೆ ಜಾಗೃತಿ ಮತ್ತು ಸಂವಿಧಾನನದ ಮಹತ್ವ ಹಾಗೂ ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳನ್ನು ಅರಿತುಕೊಳ್ಳುವುದು ನಮ್ಮ ಮೊದಲ ಕರ್ತವ್ಯ ಆಗಬೇಕು.

ಪೋಕ್ಸೋ ಕಾಯಿದೆ ಜಾಗೃತಿ, ಸಂವಿಧಾನದ ಮಹತ್ವ-ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮುಂಡಗೋಡ

ಸಂವಿಧಾನ ನಮಗೆ ಕೊಟ್ಟಿರುವ ಹಕ್ಕುಗಳನ್ನು ಅರಿತುಕೊಳ್ಳುವುದು ನಮ್ಮ ಮೊದಲ ಕರ್ತವ್ಯ ಆಗಬೇಕು ಎಂದು ಮುಂಡಗೋಡ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಸಿ.ಆರ್. ಅಕ್ಷತಾ ಹೇಳಿದರು.

ಪಟ್ಟಣದ ನೆಹರು ನಗರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಸಂವಿಧಾನ ಸಂರಕ್ಷಕರ ಪಡೆ, ತಾಲೂಕಾ ಉಚಿತ ಕಾನೂನು ನೆರವು ಪ್ರಾಧಿಕಾರ ಮುಂಡಗೋಡ, ಸಾಧನಾ ಮಹಿಳಾ ಸಾಂತ್ವನ ಕೇಂದ್ರ ಮುಂಡಗೋಡ, ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾನವ ದಿನಾಚರಣೆಯ ಅಂಗವಾಗಿ ಯುವತಿಯರಿಗೆ ಪೋಕ್ಸೋ ಕಾಯಿದೆ ಜಾಗೃತಿ ಮತ್ತು ಸಂವಿಧಾನದ ಮಹತ್ವ ಹಾಗೂ ಸಂರಕ್ಷಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ಕೂಡ ಮಾನವ ಹಕ್ಕುಗಳ ಮತ್ತು ಮೂಲಭೂತ ಹಕ್ಕು ಅರಿತು ಬದುಕನ್ನು ರೂಪಿಸುವ ಪ್ರಯತ್ನ ಮಾಡಬೇಕು ಎಂದರು.

ಕಸಾಪ ಅಧ್ಯಕ್ಷ ವಸಂತ ಎಸ್.ಕೊಣಸಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆ ದಾರಿ ತಪ್ಪಲು ಸಂಸ್ಕಾರದ ಕೊರತೆ ಮತ್ತು ಮೊಬೈಲ್‌ ಕಾರಣ. ಕೂಡು ಕುಟುಂಬದ ಮಾನ್ಯತೆ ಕಡಿಮೆ ಆಗುತ್ತಾ ಇರುವುದು ಸಹ, ಮಕ್ಕಳು ಬಾಲ್ಯದಲ್ಲೇ ದಾರಿ ತಪ್ಪಲು ಕಾರಣವಾಗಿದೆ ಎಂದರು.

ಮಹಿಳಾ ಸಾಂತ್ವನ ಕೇಂದ್ರ ಮುಖ್ಯಸ್ಥೆ ಡಾ. ಇಸಬೆಲಾ ಝೇವಿಯರ್, ಸಂವಿಧಾನದ ಪಿಠೀಕೆಯನ್ನು ವಿವರಿಸುತ್ತಾ ಭಾರತವು ಸುಂದರ ಮನಗಳ, ಹಲವಾರು ಧರ್ಮ ಮತ್ತು ಜಾತಿಯಿಂದ ಕೂಡಿದ ವಿಭಿನ್ನತೆಯಲ್ಲಿ ಐಕ್ಯತೆ ಸಾರುವ ದೇಶವಾಗಿದೆ. ಈ ದೇಶದ ಧರ್ಮ ಗ್ರಂಥ ಸಂವಿಧಾನವಾಗಿದೆ. ಇಂದು ಸಂವಿಧಾನದಿಂದಲೇ ನಾವೆಲ್ಲ ಇಲ್ಲಿ ಒಂದಾಗಿದೇವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗ ಜಿ. ಸುಮಾ, ಆದಿ ಜಾಂಬವ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್ ಫಕೀರಪ್ಪ, ಸಮಾಜ ಕಲ್ಯಾಣ ಇಲಾಖೆ ಸಾಹಾಯಕ ನಿರ್ದೇಶಕ ಅಶೋಕ ಪವಾರ, ವಕೀಲ ಸುಜೀತ ಸದಾನಂದ, ರೂಪಾ ಅಂಗಡಿ, ವಸತಿ ನಿಲಯದ ಮೇಲ್ವಿಚಾರಕರಾದ ಶೀವಲಿಲಾ ಘಂಟಾಮಠ, ವಿನಾಯಕ ಶೇಟ್, ಎಸ್.ಡಿ. ಮುಡೆಣ್ಣವರ, ಜ್ಯೋತಿ ಕೊರವರ ಸಂಗಪ್ಪ. ಕೋಳೂರು, ಎಸ್.ಬಿ. ಹೂಗಾರ, ಎಸ್.ಕೆ. ಬೋರಕರ, ಎಚ್.ಎನ್. ತಪೇಲಿ, ಜ್ಯೋತಿ, ಆನಂದ, ಹೊಸೂರು, ಮಂಗಳಾ ಮೊರೆ, ಗೌರಮ್ಮ ಕೊಳ್ಳಾನವರ, ಅಕ್ಷತಾ ಬುದ್ನಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭ
ರೈತರು, ಕಾರ್ಮಿಕರು ಮತ್ತು ಕೂಲಿಕಾರರ ವಿರೋಧಿ ನೀತಿ: ಮಂಜುಳಾ