ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ: ಬಿಜೆಪಿ ಹರ್ಷೋತ್ಸವ

KannadaprabhaNewsNetwork |  
Published : May 08, 2026, 02:45 AM IST
ಫೋಟೋ: 5ಪಿಟಿಆರ್-ಹರ್ಷಪಂಚರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಪಡೆದಿರುವುದಕ್ಕೆ ಪುತ್ತೂರಿನಲ್ಲಿ ಹರ್ಷೋತ್ಸವ ಆಚರಿಸಲಾಯಿತು.  | Kannada Prabha

ಸಾರಾಂಶ

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಒಳ್ಳೆಯ ಸಾಧನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳ ಗೂಂಡಾ ರಾಜಕ್ಕೆ ಅಲ್ಲಿನ ಮತದಾರರು ಬಿಜೆಪಿಯನ್ನು ಗೆಲ್ಲಿಸುವ ಹಿಂದುತ್ವದ ನೆಲೆಯಲ್ಲಿ ಅಭಿವೃದ್ದಿ ಮಾಡುವ ಸಂದೇಶ ನೀಡಿದೆ. ಹೀಗೆ ಕಾಂಗ್ರೆಸ್ ಪಕ್ಷ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಉತ್ತರ ಕೊಡುವ ಕೆಲಸ ಆಗಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರು: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಒಳ್ಳೆಯ ಸಾಧನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ 15 ವರ್ಷಗಳ ಗೂಂಡಾ ರಾಜಕ್ಕೆ ಅಲ್ಲಿನ ಮತದಾರರು ಬಿಜೆಪಿಯನ್ನು ಗೆಲ್ಲಿಸುವ ಹಿಂದುತ್ವದ ನೆಲೆಯಲ್ಲಿ ಅಭಿವೃದ್ದಿ ಮಾಡುವ ಸಂದೇಶ ನೀಡಿದೆ. ಹೀಗೆ ಕಾಂಗ್ರೆಸ್ ಪಕ್ಷ ಮತ್ತು ಕಮ್ಯುನಿಸ್ಟ್ ಪಕ್ಷಕ್ಕೆ ಉತ್ತರ ಕೊಡುವ ಕೆಲಸ ಆಗಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪಂಚರಾಜ್ಯದ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ಪುತ್ತೂರು ಬಿಜೆಪಿಯಿಂದ ಮೇ 4ರಂದು ಸಂಜೆ ಬಿಜೆಪಿ ಕಚೇರಿ ಮುಂದೆ ಹರ್ಷಾಚರಣೆಯಲ್ಲಿ ಅವರು ಮಾತನಾಡಿದರು.

ಕೇರಳದಲ್ಲಿ ಯುಡಿಎಫ್ ಬಂದಿದೆ. ದಾವಣಗೆರೆಯಲ್ಲೂ ಕಾಂಗ್ರೆಸ್ ಗೆಲುವಾಗಿದೆ. ಓಟ್ ಚೋರಿ ಎನ್ನುವವರು ಮರು ಮತದಾನಕ್ಕೆ ಹೋಗಬಹುದಿತ್ತಲ್ಲ. ಇನ್ನಾದರೂ ಸುಮ್ಮನೆ ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ನಿಲ್ಲಿಸಿ, ಚುನಾವಣ ಆಯೋಗದ ಕುರಿತು ಅಪಪ್ರಚಾರ ಮಾಡುವ ಕೆಲಸವನ್ನೂ ನಿಲ್ಲಿಸಿ, ಇನ್ನಾದರೂ ಕಾಂಗ್ರೆಸ್ ಅಪಪ್ರಚಾರ ಮಾಡುವುದು ಬಿಡಲಿ ಎಂದು ಮಠಂದೂರು ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ಮಾತನಾಡಿ ಪಂಚರಾಜ್ಯ ಚುನಾವಣೆ ಹಿಂದುತ್ವದ ಪಥದಲ್ಲಿ ಅಭಿವೃದ್ಧಿಯ ಮಂತ್ರ ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು.

ಬಿಜೆಪಿ ಕಾರ್ಯಕರ್ತ ರತ್ನಾಕರಪ್ರಭು ಅವರು ಚರುಂಬುರಿ ತಂದು ಸ್ಥಳದಲ್ಲೇ ಚುರಂಬುರಿ ಮಾಡಿ ಕಾರ್ಯಕರ್ತರಿಗೆ ಹಂಚಿದರು. ಈ ಸಂದರ್ಭ ಸಿಹಿ ತಿಂಡಿ ಹಂಚಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಬಳಿಕ ಬಸ್ ನಿಲ್ದಾಣದ ಬಳಿ, ದರ್ಬೆ, ಮತ್ತು ಪುರುಷರಕಟ್ಟೆಯಲ್ಲಿ ಪಟಾಕಿ ಸಿಡಿಸಿ ಸಿಹಿತಿಂಡಿಯನ್ನು ಹಂಚಿ ಸಂಭ್ರಮಿಸಿದರು

.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಆರ್.ಸಿ.ನಾರಾಯಣ್, ಜಿಲ್ಲಾ ಫಲಾನುಭವಿಗಳ ಪ್ರಮುಖ್ ನಿತೀಶ್ ಕುಮಾರ್ ಶಾಂತಿವನ, ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಹರಿಪ್ರಸಾದ್ ಯಾದವ್, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಹಿರಿಯರಾದ ಎಸ್ ಅಪ್ಪಯ್ಯ ಮಣಿಯಾಣಿ, ಉದ್ಯಮಿ ಉಜ್ವಲ್ ಪ್ರಭು, ವಸಂತಲಕ್ಷ್ಮೀ, ಸ್ವರ್ಣಲತಾ ಹೆಗ್ಡೆ, ಶಶಿಕಲಾ ಸಿ.ಎಸ್, ಜಯಲಕ್ಷ್ಮೀ ಶಗ್ರಿತ್ತಾಯ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ಮಂಡಲದ ಪ್ರಧಾನ ಕಾರ್ಯದರ್ಶಿ ಲೊಕೇಶ್ ಚಾಕೋಟೆ, ಭಾಸ್ಕರ್ ರೈ ಕಟ್ಟಪುಣಿ, ಭಾಮಿ ಜಗದೀಶ್ ಶೆಣೈ, ಅಚ್ಚುತ ನಾಯಕ್, ಯುವ ಉದ್ಯಮಿ ಉಜ್ವಲ್ ಪ್ರಭು, ವಿರೂಪಕ್ಷಾ ಭಟ್, ರಫೀಕ್ ದರ್ಬೆ, ಹರೀಶ್ ದೋಳ್ಪಾಡಿ, ನಿತೇಶ್ ಕಲ್ಲೇಗ, ಯತೀಶ್ ದೇವ, ಸುರೇಶ್ಚಂದ್ರ ರೈ, ರಾಜೇಶ್ ಬನ್ನೂರು, ಅಭಿಜಿತ್ ಕೊಡಿಪ್ಪಾಡಿ, ಸುನಿಲ್ ದಡ್ಡು, ರಾಜೇಶ್ ರೈ ಪರ್ಪುಂಜ, ಅಣ್ಣಪ್ಪ ಕಾರೆಕ್ಕಾಡು, ನಾಗೇಶ್ ಟಿ.ಎಸ್, ನಾಗೇಂದ್ರ ಬಾಳಿಗ, ಅಜಿತ್ ಕುಮಾರ್ ರೈ, ದಿನೇಶ್ ಪಂಜಿಗ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಳೇದಗುಡ್ಡ ಪುರಸಭೆ : ₹7.22 ಲಕ್ಷ ಉಳಿತಾಯ ಬಜೆಟ್ ಅಂಗೀಕಾರ
ನಾಗೂರು ಕೆರೆ ನಿರ್ಮಾಣವಾಗುತ್ತಾ? ಜವಳಿ ಪಾರ್ಕ್‌ ಬರುತ್ತಾ?