- ಅನಧಿಕೃತ ಫ್ಲೆಕ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆದೇಶ ಸ್ಪಷ್ಟ ಉಲ್ಲಂಘನೆ
10ರಿಂದ 20 ಅಡಿವರೆಗಿನ ಬೋರ್ಡ್‍ಗಳ ಅಳವಡಿಕೆಯಿಂದ ಅಂಗಡಿ ಮುಂಗಟ್ಟುಗಳು ಜನರಿಗೆ ಗೋಚರವಾಗದಂತಾಗಿವೆ. ಈಗಾಗಲೇ ಲಾಭದಾಯಕ ವ್ಯಾಪಾರವೇ ಇಲ್ಲ ಎಂದು ಹೋಟೆಲ್, ಕಿರಾಣಿ, ಬಟ್ಟೆ ಮತ್ತಿತರೆ ವರ್ತಕರು ಬೇಸರದಲ್ಲಿದ್ದಾರೆ. ಈಗ ದೊಡ್ಡ ದೊಡ್ಡ ಫ್ಲೆಕ್ಸ್ ಬೋರ್ಡ್‌ಗಳಿಂದಾಗಿ ಇನ್ನಷ್ಟು ಆರ್ಥಿಕ ನಷ್ಟ ಕಾಣಬೇಕಾದ ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆ ಮಧ್ಯದ ವಿದ್ಯುತ್ ಕಂಬ, ರಸ್ತೆ ಬದಿಯ ಮರಗಳನ್ನೂ ಬಿಡದೇ ಫ್ಲೆಕ್ಸ್ ಹಾಕಲಾಗಿದೆ. ಇದರಿಂದ ಸಹಜವಾಗಿ ನಗರ ಸೌಂದರ್ಯಕ್ಕೆ ಅಡ್ಡಿಯಾಗಿದೆ. ಈ ಬೋರ್ಡ್‌ಗಳಿಂದಾಗಿ ಮುಂದೆ, ಹಿಂದೆ ಯಾವ ವಾಹನಗಳು ಬರುತ್ತಿವೆ ಎಂಬುದು ಚಾಲಕರಿಗೆ, ಪಾದಚಾರಿಗಳಿಗೆ ಗೋಚರವಾಗದೇ ಕಿರಿಕಿರಿ ಆಗುತ್ತಿದೆ. ರಸ್ತೆಗಳ ತಿರುವುಗಳ ಮಧ್ಯದಲ್ಲಿ ಅಳವಡಿಸಿರುವ ಬೋರ್ಡ್‍ಗಳ ಅಂಚುಗಳು, ಕಟ್ಟಿಗೆಯು ವಾಹನ ಸವಾರರ ಕಣ್ಣು, ತಲೆಗೆ ನೇರವಾಗಿ ತಾಕುವಂತಿವೆ. ಜೊತೆಗೆ ರಸ್ತೆಯಿಂದ ಮುಂದೆ ಸಾಗುವಾಗ ಎದುರುಗಡೆಯಿಂದ ಬರುವ ವಾಹನಗಳು ಗೋಚರಿಸದಂತಾಗಿ ಜನರು ಕೈಯಲ್ಲಿ ಪ್ರಾಣ ಹಿಡಿದುಕೊಂಡು ಸಾಗುವಂತಾಗಿದೆ.ಜಾತ್ರೆಗೆ ಶುಭಾಶಯ, ಸ್ವಾಗತ ಕೋರುವಂಥ ಫ್ಲೆಕ್ಸ್ ಬೋರ್ಡ್‍ಗಳ ಪೈಕಿ ಕೆಲವು ಜನಸಾಮಾನ್ಯರದಾಗಿದ್ದರೆ, ಬಹುತೇಕ ಬೋರ್ಡ್‍ಗಳು ರಾಜಕಾರಣಿಗಳು, ಪ್ರಭಾವಿಗಳದ್ದಾಗಿವೆ. ಕೆಲವರಂತೂ ತಮಗೆ ಸೇರಿದ ಬೋರ್ಡ್‍ಗಳನ್ನು ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ನಗರದ ತುಂಬ ಅಳವಡಿಸಿದ್ದಾರೆ. ಅನಧಿಕೃತ ಫ್ಲೆಕ್ಸ್‌ಗಳಿಂದಾಗಿ ನಗರಸಭೆಗೆ ಲಕ್ಷಾಂತರ ರು. ಆದಾಯ ನಷ್ಟವಾಗುತ್ತಿದೆ.
ವಾರದ ಹಿಂದೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ಅವರು ನಗರಸಭೆಯಲ್ಲಿ ನಡೆಸಿದ ಅಭಿವೃದ್ಧಿ ಸಭೆಯಲ್ಲಿ ಅನಧಿಕೃತ ಫ್ಲೆಕ್ಸ್ ಬೋರ್ಡ್‌ಗಳವಿರುದ್ಧ ದೂರು ದಾಖಲಿಸಿಕೊಳ್ಳಲು, ಅನಧಿಕೃತ ಫ್ಲೆಕ್ಸ್ ಕಂಡಲ್ಲಿ ಎಫ್‍ಐಆರ್ ದಾಖಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಡಿಸಿ ಸೂಚನೆಗೆ ಹರಿಹರದಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬಂತಾಗಿದೆ. ನಗರಸಭಾ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
- - -
ಜಾತ್ರೆ ನೆಪದಲ್ಲಿ ಹರಿಹರ ನಗರದ ತುಂಬ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಕೆಲವರು ಫ್ಲೆಕ್ಸ್ ನೋಡುತ್ತಾ ರಸ್ತೆಯಲ್ಲಿ ನಿಂತು ಬಿಡುತ್ತಾರೆ. ಅನೇಕ ಫ್ಲೆಕ್ಸ್‌ಗಳಿಂದಾಗಿ ರಸ್ತೆಯ ಹಿಂದಿರುವವರು ಗೊತ್ತಾಗುವುದಿಲ್ಲ. ಹಠಾತ್ತನೆ ರಸ್ತೆಯ ಮುಂದೆ ಬರುತ್ತಾರೆ. ಆಗ ಆಕ್ಸಿಡೆಂಟ್ ಆಗುವ ಸಂಭವ ಇರುತ್ತದೆ. ರಸ್ತೆಯ ಅಕ್ಕಪಕ್ಕದ ಲೈಟು ಕಂಬ, ಮುಂತಾದವುಗಳಿಗೆ ಮನಬಂದಂತೆ ಫ್ಲೆಕ್ಸ್‌ಗಳನ್ನು ಕಟ್ಟಿದ್ದಾರೆ, ಇಂಥ ಫ್ಲೆಕ್ಸ್ ಅಳವಡಿಕೆಗೆ ಅನುಮತಿಸಬಾರದು - ಮಾರುತಿ ಅಗಡಿ, ಆಟೊ ಚಾಲಕ, ಹರಿಹರ
ಹರಿಹರದ ಶಿವಮೊಗ್ಗ ಹೆದ್ದಾರಿಯಲ್ಲಿ ಜನರಿಗೆ ಹಾಗೂ ವಾಹನ ಸವಾರರಿಗೆ ತೊಡಕುಂಟಾಗುವಂತೆ ಅಳವಡಿಸಿರುವ ಫ್ಲೆಕ್ಸ್ ಬೋರ್ಡ್‍ಗಳು.