ಆಳಂದ: ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ ಪಡೆಯುವುದರ ಜೊತೆಗೆ ಆರೋಗ್ಯಕರ ಆಹಾರ ಉತ್ಪಾದನೆಗೆ ಸಾವಯವ ಕೃಷಿ ಅತ್ಯಂತ ಮಹತ್ವದ್ದಾಗಿದೆ ಎಂದು ಪರಮಪೂಜ್ಯ ಸವಿತಾನಂದನಾಥ ಸ್ವಾಮಿಗಳು ಹೇಳಿದರು.
ಸಾವಯವ ಕೃಷಿಯ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದರೊಂದಿಗೆ ಕೃಷಿ ವೆಚ್ಚ ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಆಹಾರ ಉತ್ಪಾದಿಸಬಹುದು. ಕೃಷಿಯಲ್ಲಿ ನೈಸರ್ಗಿಕ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರ ಕೃಷಿಗೆ ಆದ್ಯತೆ ನೀಡಬೇಕು ಎಂದರು.
ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರ ಅನುಭವ ಹಂಚಿಕೆ ಹಾಗೂ ಕೃಷಿ ಪದ್ಧತಿಗಳ ಕುರಿತು ಚರ್ಚಿಸಲು ಕಾರ್ಯಕ್ರಮ ವೇದಿಕೆಯಾಯಿತು.ಸಾವಯವ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಸಂವಾದ ಹಿರಿಯ ರೈತ ಕಲ್ಯಾಣರಾವ್ ಪಾಟೀಲ್, ತಡಕಲದ ದತ್ತರಾಜ ಗುತ್ತೇದಾರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಮಹಾದೇವ ಗುಂಡುರೆ, ಸುಲ್ತಾನಪ್ಪ ಹಳ್ಳಿ ಸಲಗರ, ಗುಂಡಪ್ಪ ಪಟ್ನಾ ಹಾಗೂ ದೇಗಾಂವ ಗ್ರಾಮದ ರೈತರಾದ ಲಿಂಗರಾಜ ಸಾಹು, ಧರ್ಮರಾವ ಪಾಟೀಲ್, ಬಸವರಾಜ ಕಿಣಗಿ, ದವಲತ್ತರಾವ್ ಬಿರಾದಾರ, ಜಗದೇವಪ್ಪ ಪಟ್ಟೆ, ದೇವಿಂದ್ರಪ್ಪ ಅಷ್ಟಗಿ, ಮಹಾದೇವಪ್ಪ ಲಾರಾ, ಪಂಡಿತ ಬಿರಾದಾರ, ಮಹಾಂತೇಶ್ ಅಣ್ಣಮನಿ ಮಲ್ಲಿಕಾರ್ಜುನ ಅಛಲೇರಿ, ಸಿದ್ರಾಮಪ್ಪ ನಿಂಬಾಜಿ ಮತ್ತು ಕಲ್ಯಾಣರಾವ್ ಬಿರಾದಾರ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.