ಶಿರಾ ನಗರಸಭೆಯಿಂದ ಜಾಜಮ್ಮನಕಟ್ಟೆ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ

KannadaprabhaNewsNetwork |  
Published : Nov 05, 2026, 01:15 AM IST
೪ಶಿರಾ೧: ಶಿರಾ ನಗರದ ಜಾಜಮ್ಮನ ಕಟ್ಟೆಯ ಬಳಿ ಒತ್ತುವರಿಯಾಗಿದ್ದ ಜಾಗವನ್ನು ನಗರಸಭೆ ಪೌರಾಯುಕ್ತರು ಬುಧವಾರ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಾಯದಿಂದ ಸುಮಾರು ₹೨೦ ಲಕ್ಷ ವೆಚ್ಚದಲ್ಲಿ ಜಾಜಮ್ಮನ ಕಟ್ಟೆಯ ಹೂಳು ತೆಗೆಸಲಾಗಿದ್ದು, ಪ್ರಸ್ತುತ ಶಿರಾ ಯೋಜನಾ ಪ್ರಾಧಿಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಜಾಜಮ್ಮನ ಕಟ್ಟೆಯ ಅಕ್ಕಪಕ್ಕ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಕಟ್ಟಡ ಹಾಗೂ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಶಿರಾ: ನಗರದ ಜಾಜಮ್ಮನ ಕಟ್ಟೆಯ ಬಳಿ ಒತ್ತುವರಿಯಾಗಿದ್ದ ಜಾಗವನ್ನು ನಗರಸಭೆ ಪೌರಾಯುಕ್ತರು ಬುಧವಾರ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಾಯದಿಂದ ಸುಮಾರು ₹೨೦ ಲಕ್ಷ ವೆಚ್ಚದಲ್ಲಿ ಜಾಜಮ್ಮನ ಕಟ್ಟೆಯ ಹೂಳು ತೆಗೆಸಲಾಗಿದ್ದು, ಪ್ರಸ್ತುತ ಶಿರಾ ಯೋಜನಾ ಪ್ರಾಧಿಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಜಾಜಮ್ಮನ ಕಟ್ಟೆಯ ಅಕ್ಕಪಕ್ಕ ಅನಧಿಕೃತವಾಗಿ ಕಟ್ಟಿಕೊಂಡಿದ್ದ ಕಟ್ಟಡ ಹಾಗೂ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶಿರಾ ಯೋಜನಾ ಪ್ರಾಧಿಕಾರದ ಆಯುಕ್ತರಾದ ರಂಗಸ್ವಾಮಿ, ಪೌರಾಯುಕ್ತ ರುದ್ರೇಶ್.ಕೆ., ನಗರಸಭೆ ಸದಸ್ಯ ಅಜಯ್ ಕುಮಾರ್, ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್ ಸೇರಿ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ