ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಹೊರಹೊಮ್ಮಲು ಬಿಲ್ಲು ವಿದ್ಯೆ ಪ್ರವೀಣ ಏಕಲವ್ಯನಂತೆ ಏಕಾಗ್ರತೆಯನ್ನು ಹೊಂದಬೇಕು ಹಾಗೂ ಜೀವನದಲ್ಲಿ ನಿಶ್ಚಲ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಹೊಳಲ್ಕೆರೆ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಜೆ.ಸಿ.ಮಂಜುನಾಥ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ವಿದ್ಯಾರ್ಥಿಗಳು ಪ್ರತಿಭಾನ್ವಿತರಾಗಿ ಹೊರಹೊಮ್ಮಲು ಬಿಲ್ಲು ವಿದ್ಯೆ ಪ್ರವೀಣ ಏಕಲವ್ಯನಂತೆ ಏಕಾಗ್ರತೆಯನ್ನು ಹೊಂದಬೇಕು ಹಾಗೂ ಜೀವನದಲ್ಲಿ ನಿಶ್ಚಲ ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ಹೊಳಲ್ಕೆರೆ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಜೆ.ಸಿ.ಮಂಜುನಾಥ ಅಭಿಪ್ರಾಯಪಟ್ಟರು.
ಇಲ್ಲಿನ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದವರು ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ನಿಶ್ಚಲ ಗುರಿ ಮುಖ್ಯ. ನಾವು ಜೀವನದಲ್ಲಿ ಏನನ್ನು ಸಾಧಿಸಬೇಕೆಂದುಕೊಂಡಿದ್ದೇವೆಯೋ ಅದೇ ಯಶಸ್ಸು. ಯಶಸ್ಸನ್ನು ಕಾಣಲು ಸತತ ಪ್ರಯತ್ನ, ಅಭ್ಯಾಸ, ಸಮಯದ ಸದ್ಬಳಕೆ ಪ್ರಮುಖವಾಗುತ್ತದೆ ಎಂದರು. ಸೋಲೇ ಗೆಲುವಿನ ಸೋಪಾನ ಎಂದರು.
ಏಕಲವ್ಯನ ಏಕಾಗ್ರತೆ, ಜಗತ್ತಿನ ಮೇರು ಪರ್ವತ ಮೌಂಟ್ ಎವರೆಸ್ಟ್ ಏರಿದ ತೇನ್‌ಸಿಂಗ್ ನಾರ್ಕೆ ಹಾಗೂ ಎಡ್ಮಂಡ್ ಹಿಲರಿಯ ಸತತ ಪ್ರಯತ್ನ, ದಿವ್ಯಾಂಗ ಕ್ರೀಡಾಪಟು ಕೈಯನ್ನು ಕಳೆದುಕೊಂಡ ಮೇಲೂ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸಂಭ್ರದ ಯಶಸ್ಸು, ರಾಜಸ್ಥಾನದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಸಗುಡಿಸುವ ಮಹಿಳೆ ಆಶಾ ಕಾಂಗ್ರ ಅವರು ಇಂದು ಐ.ಎ.ಎಸ್. ಪರೀಕ್ಷೆಯಲ್ಲಿ ರ‍್ಯಾಂಕ್‌ಗಳಿಸಿ ರಾಜಸ್ಥಾನದ ಜೈಪುರದ ಹಿರಿಯ ಕೇಡರ್‌ನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಗತಿಗಳು ನಮಗೆ ಮಾರ್ಗದರ್ಶಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪ ಪ್ರಾಚಾರ್ಯ ಕೆ.ಈ. ಬಸವರಾಜಪ್ಪ, ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ೧೨ ಆದರ್ಶಗಳನ್ನು ಪಾಲಿಸಬೇಕು ಎಂದರು. ವಿದ್ಯಾರ್ಥಿಗಳು ೨೪೦ ದಿನ ಸಂತೋಷದಿಂದ ಶಾಲೆಗೆ ಹಾಜರಾಗುವುದು. ಶಿಕ್ಷಕರ ಪಾಠವನ್ನು ಏಕಾಗ್ರತೆ, ಶ್ರದ್ಧೆ ಹಾಗು ಅಸಕ್ತಿಯಿಂದ ಆಲಿಸಬೇಕು. ಸಮಯದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
೨೦೨೫-೨೬ ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿ ಕು. ಓ.ಎಲ್. ಗಾಯಿತ್ರಿ (ಪ್ರಥಮ) ಎಸ್.ವಿ. ಸಮನ್ವಿತ (ದ್ವಿತೀಯ) ಹಾಗೂ ಕೆ.ಎಸ್. ಸರಸ್ವತಿ (ತೃತೀಯ) ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇವರಿಗೆ ಶಿಕ್ಷಕರ ಪ್ರೋತ್ಸಾಹ ನಿಧಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಹಾಗೂ ದಾನಿಗಳಿಂದ ದತ್ತಿ ನಗದು ಬಹುಮಾನವನ್ನು ನೀಡಲಾಯಿತು. ೮ ಮತ್ತು ೯ ನೇ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಸ್ಥಳೀಯ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ.ಜಿ.ಬಸವನಗೌಡ, ಸದಸ್ಯ ಜಮ್ಮೇನಹಳ್ಳಿ ಮಹೇದೇವಪ್ಪ, ಅಧ್ಯಾಪಕ ಕಾರ್ಯದರ್ಶಿ ಬಿ.ಎಸ್.ಅರುಣ್ ಕುಮಾರ್, ಸಹ ಕಾರ್ಯದರ್ಶಿ ಜಿ.ಎನ್.ರವಿಕುಮಾರ್, ಹಿರಿಯ ಶಿಕ್ಷಕ ಯು.ಚಂದ್ರಪ್ಪ, ಬಿ.ಎಸ್.ಮರುಳಸಿದ್ದಯ್ಯ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಿ.ಅಮೃತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಂದಿನಿ ಸ್ವಾಗತಿಸಿದರು. ಯು.ಜಯಕಿರಣ ವಂದಿಸಿದರು. ಪೂರ್ಣಿಮಾ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.