ಸಮಾನತೆ ಹಂಬಲಕ್ಕಿಂತ ಮಾನ್ಯತೆಯತ್ತ ಮನಸು ಮಾಡಿ

KannadaprabhaNewsNetwork |  
Published : Mar 11, 2026, 02:30 AM IST
ಕಕಕಕಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಮಹಿಳೆ ಮಕ್ಕಳಿಗೆ ನಾಗರಿಕ ಶಿಷ್ಟಾಚಾರ ಕಲಿಸುವ ಮೂಲಕ ಉತ್ತಮ ಸಾಮಾಜಿಕ ಪರಿಸರಕ್ಕೆ ನಾಂದಿ ಹಾಡಬೇಕು ಎಂದು ರಬಕವಿಯ ವೈದ್ಯೆ ಅನಂತಮತಿ ಯಂಡೋಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಹಿಳೆ ಮಕ್ಕಳಿಗೆ ನಾಗರಿಕ ಶಿಷ್ಟಾಚಾರ ಕಲಿಸುವ ಮೂಲಕ ಉತ್ತಮ ಸಾಮಾಜಿಕ ಪರಿಸರಕ್ಕೆ ನಾಂದಿ ಹಾಡಬೇಕು ಎಂದು ರಬಕವಿಯ ವೈದ್ಯೆ ಅನಂತಮತಿ ಯಂಡೋಳಿ ಹೇಳಿದರು.

ಪಟ್ಟಣದ ಟೊಣಪಿನಾಥ ಸಮುದಾಯ ಭವನದಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣಾದವಳು ಗಂಡಿಗೆ ಸಮಾನಳಾಗಿ ಎಲ್ಲವನ್ನೂ ಮಾಡುತ್ತೇನೆ ಎಂದು ಎಲ್ಲೆ ಮೀರುವುದರಿಂದ ಸಮಾನತೆ ಬರುವುದಿಲ್ಲ. ಬದಲಾಗಿ ಹೆಣ್ಣಾಗಿ ತನ್ನ ಪಾಲಿನ ಕರ್ತವ್ಯ ಮತ್ತು ಜವಾಬ್ದಾರಿ ನಿಭಾಯಿಸುವ ನಿಯತ್ತು ತೋರಿದರೆ ಮಾನ್ಯತೆ ಗಳಿಸಬಹುದು. ಮಹಿಳೆ ಪುರುಷನಿಗೆ ಸಮಾನಳಾಗುವ ಹಂಬಲಕ್ಕಿಂತ ಮಾನ್ಯಳಾಗುವತ್ತ ಮನಸು ಮಾಡಬೇಕು ಎಂದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸಪನಾ ಅನಿಗೋಳ ಮಾತನಾಡಿ, ಕಪಾಟಿನಲ್ಲಿ ಹೆಚ್ಚು ಬಟ್ಟೆ, ಮೈಮೇಲೆ ಹೆಚ್ಚು ಬಂಗಾರ ಹೊಂದಿರುವ ಮತ್ತು ಮನೆಯಲ್ಲಿ ಹೆಚ್ಚು ಮಾತಾಡುವ ಮಹಿಳೆ ಮಕ್ಕಳಲ್ಲಿ ಸಂಸ್ಕಾರ ಮೂಡಿಸಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಕೂಡ ಹೆಚ್ಚು ಜವಾಬ್ದಾರಿ ಹೊಂದಿರಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪ್ರೀತಿ ಅಂಗಡಿ, ಸಂಜನಾ ಹೊಸೂರ ಭರತನಾಟ್ಯ ಪ್ರರ್ಶಿಸಿದರು. ಮಹಿಳೆಯರು ಮರಾಠಿ, ಮಾರ್ವಾಡಿ, ಕೊಡಗು, ಉತ್ತರಕರ್ನಾಟಕ ಸೇರಿದಂತೆ ನಾಡಿನ ನಾನಾ ಸಂಸ್ಕೃತಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ತಂಡೋಪತಂಡವಾಗಿ ರ್‍ಯಾಂಪ್‌ ವಾಕ್ ಮಾಡುವ ಮೂಲಕ ವಸ್ತ್ರ ವೈವಿಧ್ಯತೆ ಸಾರಿದರು. ಭರಪೂರ ವೇದಿಕೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಎಲ್ಲ ಮಹಿಳೆಯರು ಸಾಮೂಹಿಕ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.

ಈ ವೇಳೆ ಬಣಜಿಗ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಅವರಾದಿ, ಉಪಾಧ್ಯಕ್ಷೆ ಶೈಲಾ ಶೆಟ್ಟರ, ಕಾರ್ಯದರ್ಶಿ ಪಲ್ಲವಿ ಘಟ್ನಟ್ಟಿ, ಸದಸ್ಯರಾದ ಭಾರತಿ ಮುಂಗರವಾಡಿ, ಶಿವಲೀಲಾ ವಜ್ಜರಮಟ್ಟಿ, ಸೀಮಾ ಬಂಡಿ, ವಾಣಿಶ್ರೀ ಪಟ್ಟೇದ, ಚಿನ್ನಮ್ಮ ಕುಳ್ಳೋಳಿ, ಸ್ನೇಹಲ್ ಅಂಗಡಿ, ಮಹಾದೇವಿ ಹಾವೇರಿ, ಸಾವಿತ್ರಿ ಟೆಂಗಿನಕಾಯಿ, ಸರೋಜಿನಿ ಅನಿಗೋಳ, ವಿಜಯಲಕ್ಷ್ಮೀ ಕುಳ್ಳೋಳಿ ಸೇರಿದಂತೆ ಇತರರಿದ್ದರು. ಶಿಕ್ಷಕಿ ಪ್ರೀತಿ ಕಲ್ಯಾಣಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಂಪನ್ನ
ಸ್ತ್ರೀಯರ ಸಾಧನೆಗೆ ಪ್ರೋತ್ಸಾಹಿಸಿ: ಅರುಣಾ ಗುಜ್ಜರಿ