ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಯ್ಯನಹಟ್ಟಿ ಗ್ರಾಮ ಹಾಗೂ ಪಳನಿ ಮೇಡು ಮಾರ್ಗ ಮಧ್ಯದಲ್ಲಿ ಗೋಶಾಲೆಗೆ ಮೇವು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ.
ಗೋಶಾಲೆಗೆ ತಲುಪಬೇಕಿದ್ದ ಮೇವು:ತಾಲೂಕಿನ ಕುರಟ್ಟಿ ಹೊಸೂರು ಚೆನೂರು ಹಾಗೂ ಎನ್ಎಸ್ ದೊಡ್ಡಿ ಗ್ರಾಮದ ಗೋಶಾಲೆ ತೆರಳುತ್ತಿದ್ದ ಲಾರಿ ಆಕಸ್ಮಿಕವಾಗಿ ಮಾರ್ಗ ಮಧ್ಯದಲ್ಲಿ ಜೋತುಬಿದ್ದು ತಳಮಟ್ಟದಲ್ಲಿದ್ದ ವಿದ್ಯುತ್ ತಂತಿಗೆ ತಗಲಿ ಮೇವು ಸಮೇತ ಲಾರಿ,ಕೆಲ ನಿಮಿಷಗಳಲ್ಲೇ ಸುಟ್ಟು ಸಂಪೂರ್ಣವಾಗಿ ಭಸ್ಮವಾಗಿದೆ. ಅಧಿಕಾರಿಗಳು ಭೇಟಿ : ವಿವಿಧ ಗ್ರಾಮಗಳಲ್ಲಿರುವ ಗೋಶಾಲೆಗಳಿಗೆ ಮೇವು ಸಾಗಣೆ ಮಾಡುತ್ತಿದ್ದ ವಾಹನ ಬೆಂಕಿಗಾಹುತಿಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ವಾಹನ ಸಮೇತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಸಂಪೂರ್ಣವಾಗಿ ವಾಹನ ಸುಟ್ಟು ಭಸ್ಮವಾಗಿತ್ತು. ಈ ಸಂಬಂಧ ಘಟನಸ್ಥಳಕ್ಕೆ ರಾಮಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗುರುಪ್ರಸಾದ್ ತಹಸೀಲ್ದಾರ್ ಹನೂರು ತಾಲೂಕು