ಕನ್ನಡಪ್ರಭ ವಾರ್ತೆ ಕಟಪಾಡಿ
ಇಲ್ಲಿನ ಅಂಬಾಡಿ ವೇದವ್ಯಾಸ ಭಜನಾ ಮಂದಿರದ ವಠಾರದಲ್ಲಿ ವಿಶೇಷ ಪೋಕ್ಸೋ ಅಭಿಯೋಜಕರಾದ ವೈ.ಟಿ. ರಾಘವೇಂದ್ರ ರಾವ್ ಅವರು ಜಾಥಾವನ್ನು ಉದ್ಘಾಟಿಸಿ ಮಕ್ಕಳಿಗೆ ಗ್ರಂಥಾಲಯದ ಮಹತ್ವವನ್ನು ವಿವರಿಸಿದರು.
ಚಂಡೆವಾದನದೊಂದಿಗೆ ಸಾರ್ವಜನಿಕರಲ್ಲಿ ಗ್ರಂಥಾಲಯದ ಬಗ್ಗೆ ಜಾಗೃತಿ ಮೂಡಿಸಿ, ಈ ಜಾಥಾದ ನಂತರ ಪಂಚಾಯಿತಿ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ ಕ್ಯಾಥರೀನ್ ರೋಡಿಗ್ರಾಸ್, ಮಕ್ಕಳಿಗೆ ಗ್ರಂಥಾಲಯಗಳನ್ನು ಬಳಸಿಕೊಳ್ಳುವಂತೆ ಹಿತವಚನವನ್ನು ನೀಡಿದರು.ಮಾನ್ಯ ಫೌಂಡೇಶನ್ ಸಂಸ್ಥಾಪಕರಾದ ಶಿವಾನಂದ ಕೋಟ್ಯಾನ್ ಅವರು ಗ್ರಂಥಾಲಯದಿಂದ ಸಿಗುವ ಜ್ಞಾನದ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭ ರೋಟರಿ ಕ್ಲಬ್‌ನ ಜಗನ್ನಾಥ ಕೋಟೆ, ಸಾಹಿತಿ ಶಿಕ್ಷಕಿ ಪ್ರಜ್ವಲಾ ಶೆಣೈ, ಭಜನಾ ಮಂದಿರದ ಅಧ್ಯಕ್ಷರಾದ ಕಮಲಾಕ್ಷ ಪಿ. ಪೂಜಾರಿ, ಗ್ರಂಥಾಲಯದ ಮೇಲ್ವಿಚಾರಕಿ ಸುಜಾತ, ಮಜಲು ಮನೆ ಸುಂದರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಅಶ್ವತ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ಜಯಕರ ಕಟಪಾಡಿ ವಂದಿಸಿದರು.