ಹಗರಿಬೊಮ್ಮನಹಳ್ಳಿ: ಜಾನಪದ ಕಲೆಯು ಭಾರತೀಯ ಸಂಸ್ಕೃತಿಯ ಕಿರೀಟವಾಗಿದ್ದು, ಬಾಯಿಂದ ಬಾಯಿಗೆ ಹರಿದು ಬಂದ ಶತಮಾನಗಳ ಅನುಭವದ ಕಾವ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ ಅಭಿಪ್ರಾಯಪಟ್ಟರು.
ಗ್ರಾಮೀಣ ಜನಪದ ಕಲೆಗಳ ಉಳಿವು ಇಂದಿನ ಯುವಕರಿಂದ ಸಾಧ್ಯವಿದ್ದು, ಇಂತಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಪರಂಪರೆ ರಕ್ಷಿಸಲು ಕೋರಿದರು.
ಗ್ರಾಪಂ ಮಾಜಿ ಸದಸ್ಯ ಎಚ್.ಬಿ.ಮೈಲಪ್ಪ, ಮುಖಂಡ ಎಸ್. ನಾಗಭೂಷಣ ಮಾತನಾಡಿದರು. ಸಭೆಯ ಅಧ್ಯಕ್ಷತೆ ಮಾಜಿ ಗ್ರಾಪಂ ಅಧ್ಯಕ್ಷ ಬಣಕಾರ ಕರಿಬಸವರಾಜ ವಹಿಸಿದ್ದರು. ಮಾಜಿ ಗ್ರಾಪಂ ಸದಸ್ಯ ಬಿ.ಸಿ. ಬಸವರಾಜ, ತಂಬ್ರಹಳ್ಳಿ ಠಾಣೆ ಎ.ಎಸ್.ಐ ರೇವಪ್ಪ, ಮುಖಂಡ ಎಂ.ಎ. ಗವಿಸಿದ್ದಯ್ಯ, ಬಿ.ಎಚ್.ಮಯೂರ, ಕೆ.ಎಂ. ಮಹದೇವಯ್ಯ, ತೋಟಯ್ಯ, ಮಹೇಶ್ವರಯ್ಯ ಹಾಗೂ ಹಿಂದೂ ಮಹಾಗಣಪತಿ ಸಮಿತಿಯ ಮೃತ್ಯುಂಜಯ, ಹಾಲಸ್ವಾಮಿ ಸೇರಿ ಅನೇಕ ಯುವಕರು ಭಾಗವಹಿಸಿದ್ದರು.ಎಚ್.ಎಂ. ನಾಗಭೂಷಣ, ಫಕ್ಕೀರಸ್ವಾಮಿ ಹಾಗೂ ಎಂ.ತಿಮ್ಮಪ್ಪ ನಿರ್ವಹಿಸಿದರು.