ಜನಪದ ಸಾಹಿತ್ಯ ಜೀವನದ ಉಸಿರು

KannadaprabhaNewsNetwork |  
Published : Jul 18, 2024, 01:40 AM IST
13ಸಿಡಿಎನ್‌1: ತಾಲೂಕಿನ ನಿವರಗಿ ಗ್ರಾಮದಲ್ಲಿ ಬೆಂಗಳೂರು ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತು  ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಚಡಚಣ ಇವರ ಸಂಯುಕ್ತ ಆಶ್ರಯದಲ್ಲಿ ಜಾನಪದ ಗೋಷ್ಠಿಯ ಕಾರ್ಯಕ್ರಮ ಶಾಸಕ ವಿಠ್ಠಲ ಕಟಕಧೋಂಡ  ಉದ್ಘಾಟಿಸಿದರು | Kannada Prabha

ಸಾರಾಂಶ

ಜನಪದ ಸಾಹಿತ್ಯ ಜೀವನದ ಉಸಿರಾಗಿದೆ. ದಿನ ನಿತ್ಯ ಬಳಸುವ ಭಾಷೆಯೂ ಜನಪದವಾಗಿದೆ. ಜನಸಾಮಾನ್ಯರ ಸಾಹಿತ್ಯವೇ ಜನಪದ ಸಾಹಿತ್ಯ ಎಂದು ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಡಚಣ

ಜನಪದ ಸಾಹಿತ್ಯ ಜೀವನದ ಉಸಿರಾಗಿದೆ. ದಿನ ನಿತ್ಯ ಬಳಸುವ ಭಾಷೆಯೂ ಜನಪದವಾಗಿದೆ. ಜನಸಾಮಾನ್ಯರ ಸಾಹಿತ್ಯವೇ ಜನಪದ ಸಾಹಿತ್ಯ ಎಂದು ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ನಿವರಗಿ ಗ್ರಾಮದಲ್ಲಿ ಬೆಂಗಳೂರು ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಚಡಚಣ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಾನಪದ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಪದರು ಕನ್ನಡ ನಾಡನ್ನು ಸಾಹಿತ್ಯದ ಮೂಲಕ ಶ್ರೀಮಂತ ಗೊಳಿಸಿದ್ದಾರೆ. ಜಾನಪದ ಸಾಹಿತ್ಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿಯೂ ಇದೆ ಎಂದು ಎಚ್ಚರಿಸಿದರು.ಉಪನ್ಯಾಸಕಿ, ಜಾನಪದ ಚಿಂತಕಿ ಶಿವಲೀಲಾ ಮುರಾಳ ಮಾತನಾಡಿ, ಜಾನಪದ ಮಹಿಳೆ ನಿತ್ಯ ತನ್ನ ಕಾಯಕದ ಜೊತೆಗೆ ಜಾನಪದ ಸಾಹಿತ್ಯವನ್ನು ಹಾಡುತ್ತಾ ಅದನ್ನು ಉಳಿಸಿಕೊಂಡಿದ್ದಾಳೆ. ಮಹಿಳೆ ಹಾಡುವಾಗ, ಬೀಸುವಾಗ, ಕುಟ್ಟುವಾಗ, ಅನೇಕ ಸ್ಥಳೀಯ ಜಾನಪದ ಸಾಹಿತ್ಯವನ್ನು ಉಳಿಸಿದವರು. ಜಾನಪದ ಸಾಹಿತ್ಯ ಮೌಲ್ಯಯುತವಾಗಿದೆ. ಸಮಾಜವನ್ನು ತಿದ್ದುವುದರಲ್ಲಿ ಅಥ೯ಪೂಣ೯ವಾದ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಾಹಿತಿ ರಮೇಶ ಬಸರಗಿ ಮಾತನಾಡಿ, ಜನಪದ ಸಾಹಿತ್ಯ ಜೀವನದ ಮೌಲ್ಯ ಕಾಪಾಡುವ ಸಾಹಿತ್ಯವಾಗಿದೆ. ಜನಪದ ಸಾಹಿತ್ಯವನ್ನು ನಮ್ಮೆಲ್ಲರ ಕುಟುಂಬಸ್ಥರು ಹಾಗೂ ಹಿರಿಯರು ರಚಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಇತಿಹಾಸ ಪ್ರಸಿದ್ಧ ಪ್ರತೀಕವಾಗಿದೆ ಎಂದು ತಿಳಿಸಿದರು.ಮಾಜಿ ಕಸಾಪ ಅಧ್ಯಕ್ಷ ಎಸ್ ಡಿ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಷಡಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ಗ್ರಾಮ ಪಂಚಾಯತ ಅಧ್ಯಕ್ಷೆ ಜಯಶ್ರೀ ಹೂನ್ನೂರ. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಗೌರವ ಕಾರ್ಯದರ್ಶಿ ಮಾಧವ ಗುಡಿ. ಕಸಾಪ ತಾಲೂಕ ಅಧ್ಯಕ್ಷ ಸಿದ್ದಪ್ಪ ಮಾನೆ, ಸುರೇಶ ಜತ್ತಿ. ಬಿ.ಎಸ್‌. ಮಜ್ಜಗಿ. ತಮ್ಮಾರಾಯ ಶ್ರೀಶೈಲ ತೇಲಿ, ಚಂದ್ರಕಾಂತ ಹೂನ್ನೂರ, ಮಹಾದೇವ ಹಿರೇಕುರಬರ, ಪರುಶರಾಮ ಮಾಸ್ತರ, ವಿದ್ಯಾ ಕಲ್ಯಾಣಶೆಟ್ಟಿ, ಎ.ಎಸ್.ಸೊನ್ನಗಿ, ಸಂಜೀವ ದಾಂಡೇಕರ, ಕಾಶಿನಾಥ ಸಂಖ. ಶ್ರೀಮಂತ ಚಿಕ್ಕಲಕಿ, ಸುರೇಶ ಜತ್ತಿ, ಕಸ್ತೂರಿ ಬರಗೂಡಗಿ, ಸಾವಿತ್ರ ಕಾರಾಜನಗಿ, ಲಕ್ಷ್ಮಿಭಾಯಿ ಇಂಗಳೆ, ದೀಪಾ ಕಾಂಬಳೆ, ಲಲಿತಾಬಾಯಿ ದಳವಾಯಿ, ಹಿರಗಣ್ಣ ಪೂಜಾರಿ, ಅಶೋಕ ಕಾರಜನಗಿ, ರವಿಕಾಂತ ಜಹಾಗೀರದಾರ, ಅಮಸಿದ್ದ ಹುಂಬಾಳೆ, ಸುರೇಶ ಏನಪೆ, ಶ್ರವಣಕಮಾರ ಕಾಂಬಳೆ, ಕಲ್ಲಪ್ಪ ತೇಲಿ, ಮಹಾದೇವ ಬಂಡಿ, ರಾಹುಲ ಕಾರಜನಗಿ, ರತ್ನಾಬಾಯಿ, ಶೇಜಾಳ, ಮಮತಾಜ ಮುಲ್ಲಾ, ಮದಗೊಂಡ ತುಪ್ಪದ, ಮಲ್ಲಿಕಾರ್ಜುನ ಪೋಲಾದಿ, ಉಮೇಶ ಹೂನ್ನೂರ, ಮಲ್ಲಿಕಾರ್ಜುನ ಬಿರಾದಾರ, ಸಂತೋಷ ಕಟಗೇರಿ ಸೇರಿದಂತೆ ಸಾಹ ಮುಂತಾದವರು ಇದ್ದರು.

ಗ್ರಾಮೀಣ ಜನರು ಜನಪದ ಸಾಹಿತ್ಯದ ಮೂಲ ಮಾಲಿಕರು. ರೈತಾಪಿ ವರ್ಗ ವಿದ್ಯಾವಂತರಲ್ಲ. ಆದರೂ ಅವರು ವಿದ್ಯೆಯನ್ನು ಅರಿತವರನ್ನು ಮೀರಿಸುವ ಶಕ್ತಿ ಗ್ರಾಮೀಣ ಜನರು ಹೊಂದಿದ್ದಾರೆ. ನಡೆ-ನುಡಿ, ನೆಲ-ಜಲ ಕಾಪಾಡುವ ಜನಪದ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವೇ ಆಗಿದೆ.

ಡಾ.ಸಂಗಮೇಶ ಮೇತ್ರಿ,

ಜಿಲ್ಲಾ ಗೌರವ ಕೋಶಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ