ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ೨೦೨೨-೨೩ ಹಾಗೂ ೨೦೨೩-೨೪ನೇ ಸಾಲಿನ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಕುಲಪತಿಗಳಾದ ಪ್ರೊ.ಟಿ. ಎಂ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಜರುಗಿತು.
ಕುಲಸಚಿವರಾದ ಪ್ರೊ. ಸಿ.ಟಿ. ಗುರುಪ್ರಸಾದ್ ಅವರು ಕಟ್ಟಡ ಸಮಿತಿ, ಉನ್ನತ ಖರೀದಿ ಸಮಿತಿ, ಕ್ರಿಯಾ ಯೋಜನೆ ಸಲಹಾ ಸಮಿತಿ, ಪ್ರಕಟನಾ ಸಮಿತಿ, ತಜ್ಞರ ಸಲಹಾ ಸಮಿತಿ, ಕನ್ನಡ ಜಾನಪದ ನಿಘಂಟು ತಜ್ಞರ ಸಮಿತಿ, ಗ್ರಾಮ ಚರಿತ್ರೆ ಕೋಶ ಸಮಿತಿ, ಪ್ರಾದೇಶಿಕ ಕೇಂದ್ರಗಳ ಮಾಹಿತಿ ನೀಡಿದರು.ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್ ಅವರು ಅನುವಾದ ವಿಭಾಗದ ಮಾಹಿತಿ ನೀಡಿದರು, ಸಹಾಯಕ ಕುಲಸಚಿವರಾದ ಶಹಜಹಾನ್ ಮುದಕವಿ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಂಡಿಕೇಟ್ ಸಮಿತಿ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರ ಮಾಹಿತಿ, ದತ್ತಿ ಉಪನ್ಯಾಸಗಳು, ಚಿನ್ನದ ಪದಕ ಈ ಕುರಿತು ಮಾಹಿತಿ ನೀಡಿದರು, ಸಹಾಯಕ ಪ್ರಾಧ್ಯಾಪಕ ಹಾಗೂ ಕ್ರೀಡಾ ಸಂಯೋಜಕರಾದ ಡಾ. ವೆಂಕನಗೌಡ ಪಾಟೀಲ ಜನಪದ ಕ್ರೀಡೆಗಳ ಮಾಹಿತಿ, ಗ್ರಂಥಪಾಲಕರಾದ ಡಾ.ರಾಜಶೇಖರ ಕುಂಬಾರ ಅವರು ಗ್ರಂಥಾಲಯ ಸಲಹಾ ಸಮಿತಿ ಮಾಹಿತಿ, ರಾಷ್ಟ್ರೀಯ ಸೇವಾ ಯೋಜನೆ ಕುರಿತು ಡಾ.ಗಿರೇಗೌಡ ಅರಳಿಹಳ್ಳಿ ಮಾಹಿತಿ ನೀಡಿದರು.
ನಿಕಾಯ ಹಾಗೂ ಅಧ್ಯಯನ ವಿಭಾಗಗಳಾದ ಜನಪದ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಿರೇಗೌಡ ಅರಳಿಹಳ್ಳಿ, ಜನಪದ ಸಾಹಿತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕನ್ನಡ ಮತ್ತು ಜಾನಪದ ವಿಭಾಗದ ಸಂಯೋಜಕ ಡಾ. ಬಸವರಾಜ ಸಿ., ಜನಪದ ಕಲೆಗಳ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ದೃಶ್ಯ ಕಲೆ ವಿಭಾಗದ ಸಂಯೋಜಕ ಡಾ. ಚಂದ್ರಪ್ಪ ಸೊಬಟಿ, ಗ್ರಾಮೀಣ ಬುಡಕಟ್ಟು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಅಧ್ಯಯನದ ವಿಭಾಗದ ಸಂಯೋಜಕ ಡಾ. ಗಿರೇಗೌಡ ಅರಳಿಹಳ್ಳಿ, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸಮಾಜಕಾರ್ಯ ವಿಭಾಗದ ಸಂಯೋಜಕರಾದ ಹಣಮಂತರಾಯಗೌಡ, ಎಂ.ಬಿ.ಎ ಆರ್ ಟಿ ಎಂ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ.ಅರುಣಾಬಾಬು ಅಂಗಡಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸಮಾಜಶಾಸ್ತ್ರ ವಿಭಾದ ಸಂಯೋಜಕರಾದ ಡಾ. ವೆಂಕನಗೌಡ ಪಾಟೀಲ, ಜನಪದ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಮಹಿಳಾ ಅಧ್ಯಯನ ವಿಭಾಗ ಹಾಗೂ ಪ್ರದರ್ಶನ ಕಲೆ ವಿಭಾಗದ ಸಂಯೋಜಕ ಡಾ. ವಿಜಯಲಕ್ಷ್ಮೀ ಗೇಟಿಯವರ, ಇಂಗ್ಲಿಷ್ ವಿಭಾಗದ ಸಂಯೋಜಕರಾದ ಬಂಡು ಕೆಂಪವಾಡೆ ಆಯಾ ವಿಭಾಗಗಳ ಸಹಾಯಕ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ನೀಡಿದರು.ಸಹಾಯಕ ಸಂಶೋಧನಾಧಿಕಾರಿ ಡಾ. ಬಸವರಾಜ ಎಸ್.ಜಿ., ಡಾ. ನಾಯಕರ ಹುಲಗಪ್ಪ, ಸಹಾಯಕ ದಾಖಲೀಕರ ಅಧಿಕಾರಿಗಳಾದ ಡಾ. ಸುಮಂಗಲಾ ಅತ್ತಿಗೇರಿ, ಡಾ. ಗೇಮಸಿಂಗ್ ರಾಥೋಡ್ ಸಂಶೋಧನೆ ಚಟುವಟಿಗಳ ಕುರಿತು ಮಾಹಿತಿ ನೀಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್, ಸಹಾಯಕ ದಾಖಲೀಕರಣ ಅಧಿಕಾರಿ ಡಾ. ಸುಮಂಗಲಾ ಅತ್ತಿಗೇರಿ ಕಿರು ಸಂಶೋಧನ ಯೋಜನೆಗಳು, ಡಾ. ಗೇಮಸಿಂಗ್ ರಾಥೋಡ್ ಮುದ್ರಣಗೊಂಡ ಪುಸ್ತಕಗಳ ಮಾಹಿತಿ ನೀಡಿದರು. ಸಹಾಯಕ ಸಂಶೋಧನಾಧಿಕಾರಿ ಡಾ. ನಾಯಕರ ಹುಲಗಪ್ಪ ಅವರು ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯದ ಕುರಿತು ಮಾಹಿತಿ ನೀಡಿದರು, ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದಪ್ಪ ಜೋಗಿ, ಡಾ.ಶಂಕರ್ ಕುಂದಗೋಳ, ಡಾ.ಉತ್ತಮ್ ಕೆ ಹೆಚ್, ಡಾ.ರಜಿಯಾಬೇಗಂ ನಧಾಪ್, ಡಾ. ಅಭಿಲಾಷ ಎಚ್.ಕೆ., ಡಾ. ಶಿಲಿನಾ ಕೋಟೆ, ಅಭಿನಯ ಎಚ್., ಡಾ. ಸುವರ್ಣ ಶೃಂಗೇರಿ, ಡಾ. ಪ್ರವೀಣ ಕರೆಪ್ಪನವರ, ಶಿವಾನಂದ ದೊಡ್ಡಮನಿ, ಅನ್ನಪೂರ್ಣ ಲಿಂಬಿಕಾಯಿ, ಮಂಜುನಾಥ ದೊಡ್ಡಮನಿ, ಲೇಖನ ಸಾಗರ, ಪ್ರೀತಮ್ ಬಾಯರ್, ಶಾಹಿದಾ ಖಾದ್ರಿ, ಮಂಗಳಾ ಹಿರೇಮಠ ವಿಭಾಗಗಳ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.