ಅಜ್ಜಂಪುರ: ಎಲ್ಲ ಜಾತಿ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿ ಜಾನಪದಕ್ಕೆ ಇದೆ ಎಂದು ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜ ಮತ್ತು ಕುಟುಂಬದಲ್ಲಿ ಶಾಂತಿ ಸೌಹಾರ್ದತೆ, ಹೊಂದಾಣಿಕೆಯ ಮನೋಭಾವ ನೆಲೆಸಲು ನಮ್ಮ ಜನಪದರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಜನಪದ ಸಾಹಿತ್ಯ ತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು. ಜನಪದ ಹಾಡುಗಳನ್ನು ಒಗಟು ಗಾದೆಗಳನ್ನು ಕಲಿತು ಹಾಡಬೇಕು. ಜಾನಪದದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ವಿವಿಧ ಆಧುನಿಕ ಸಾಹಿತ್ಯ, ಸಂಗೀತ ಸಂಸ್ಕೃತಿ ಮೂಲ ಬೇರು ಜಾನಪದ. ಜಾನಪದಕ್ಕೆ ಸಮಾಜ ತಿದ್ದುವ ಶಕ್ತಿ ಇದೆ. ಒಬ್ಬ ವ್ಯಕ್ತಿಯನ್ನು ಸುಸಂಸ್ಕೃತನಾಗಿ ಮಾಡುವುದಲ್ಲದೆ, ಸಮಾಜದ ಎಲ್ಲ ವರ್ಗ ಜಾತಿ ಸಮುದಾಯದ ಜನರೊಂದಿಗೆ ಹೇಗೆ ಬದುಕಿ ಬಾಳಬೇಕೆಂದು ತಿಳಿಸಿಕೊಡುವ ಸಾಮರ್ಥ್ಯ ಜಾನಪದಕ್ಕಿದೆ ಎಂದರು.ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ. ಅಪ್ಪಗೆರೆ ತಿಮ್ಮರಾಜ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ, ಕಡ್ಡಾಯವಾಗಿ ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ. ಜಾನಪದವೆಂದರೇನು? ಜಾನಪದದಿಂದ ಆಗುವ ಅನುಕೂಲಗಳೇನು? ಜಾನಪದ ಸಾಹಿತ್ಯವನ್ನು, ಒಗಟು ಗಾದೆಗಳನ್ನು ಚಿಕ್ಕಂದಿನಿಂದಲೇ ತಿಳಿಸಿ ಕೊಡಬೇಕೆಂದರು.
11 ಕೆಕೆಡಿಯು2
ಅಜ್ಜಂಪುರದ ನಂದೀಪುರ ಮಠದಲ್ಲಿ ಚಿಕ್ಕಮಗಳೂರು ಜಿಲ್ಲೆ ಘಟಕದಿಂದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ ಹಾಗೂ ಕಾರ್ತಿಕ ಮಹೋತ್ಸವದ ಅಂಗವಾಗಿ ಜಾನಪದ ಗೀತೋತ್ಸವ ಸಂಭ್ರಮ ವನ್ನು ಹುಣಸಘಟ್ಟದ ಶ್ರೀಗಳು ಉಧ್ಘಾಟಿಸಿದರು.