ಜನಪದ ಜಗತ್ತಿನ ಅತ್ಯಂತ ಪ್ರಾಚೀನ ಸಾಹಿತ್ಯ

KannadaprabhaNewsNetwork |  
Published : Jun 25, 2025, 11:47 PM IST
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜನಪದ ಸಾಹಿತ್ಯ ಅತ್ಯಂತ ಪ್ರಾಚೀನ ಸಾಹಿತ್ಯವಾಗಿದ್ದು, ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲ. ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ, ಬದುಕಿಗೆ ಬೇಕಾದ ಪಾಠ ಅಡಕವಾಗಿದೆ ಎಂದು ಜಾನಪದ ವಿದ್ವಾಂಸ ಪ್ರೊ.ಬಿ.ಎನ್.ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜನಪದ ಸಾಹಿತ್ಯ ಅತ್ಯಂತ ಪ್ರಾಚೀನ ಸಾಹಿತ್ಯವಾಗಿದ್ದು, ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲ. ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ, ಬದುಕಿಗೆ ಬೇಕಾದ ಪಾಠ ಅಡಕವಾಗಿದೆ ಎಂದು ಜಾನಪದ ವಿದ್ವಾಂಸ ಪ್ರೊ.ಬಿ.ಎನ್.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಹಲಸಂಗಿ ಗೆಳೆಯರ ಬಳಗದ ಕೊಡುಗೆ ಅಪಾರ. ಹೀಗಾಗಿ ಇಂದು ಜಾನಪದ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದರು.

ಚೇತನಾ ಶಿಕ್ಷಣ ಸಂಸ್ಥೆಯ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಡಿವೇಶ ಕೊಳಮಲಿ ಮಾತನಾಡಿ, ಜಾನಪದ ಸಾಹಿತ್ಯ ಜೀವನ ಮೌಲ್ಯಗಳನ್ನು ಕಲಿಸಿ ಕೊಡುತ್ತದೆ. ಇಂದಿನ ಯುವಪೀಳಿಗೆ ಜಾನಪದ ಸಾಹಿತ್ಯದ ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ಜಾನಪದ ಗೀತೆ, ಗಾದೆ, ಒಗಟುಗಳನ್ನು ಸಂಗ್ರಹಿಸುವ ಕಾರ್ಯ ಇಂದು ಯುವ ಮಿತ್ರರಿಂದ ಆಗಬೇಕು ಎಂದು ತಿಳಿಸಿದರು.

ಬಸವನ ಬಾಗೇವಾಡಿ ತಾಲೂಕಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಕ್ರಿಯಾಶೀಲವಾಗಿರುವ ಸಾಹಿತ್ಯವೆಂದರೆ ಜಾನಪದ ಸಾಹಿತ್ಯ. ಜಗತ್ತಿನ ಎಲ್ಲ ಸಾಹಿತ್ಯದ ಮೂಲ ಜಾನಪದ ಸಾಹಿತ್ಯದಲ್ಲಿ ಅಡಗಿದೆ ಜನಪದ ನಮ್ಮ ಸಂಸ್ಕೃತಿಯ ತವರೂರು ಎಂದು ಪ್ರತಿಪಾಧಿಸಿದರು.

ಉಪನ್ಯಾಸಕಿ ಡಾ.ಸವಿತಾ ಝಳಕಿ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಎಂ.ಬಿ.ಮಮದಾಪೂರ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಿಶ್ರಾಂತ ವ್ಯವಸ್ಥಾಪಕ ಜಿ.ಡಿ.ಮಲ್ಲಿಗವಾಡ, ಮಾಜಿ ಸೈನಿಕ ಸಿದ್ರಾಮ ಬೀಳಗಿ, ಸಿಂಧೂ ಜಾಧವ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ವಿಜಯಲಕ್ಷ್ಮಿ ಹಳಕಟ್ಟಿ, ಭಾಗೀರಥಿ ಸಿಂಧೆ, ಸುಖದೇವಿ ಅಲಬಾಳಮಠ, ಜಿ.ಎಸ್ ಬಳ್ಳೂರ, ವೈ.ಎಚ್.ಲಂಬೂ, ಎನ್.ಆರ್.ಕುಲಕರ್ಣಿ, ಎಸ್.ಎಂ.ಕಣಬೂರ, ವಿ.ಎಸ್.ಖಾಡೆ, ಶ್ರೀಕಾಂತ ನಾಡಗೌಡ, ಶಿವಾನಂದ ಬಸೆಟ್ಟಿ, ಯಶಸ್ ಮಿರಜಕರ, ಬಿ.ಪಿ.ಖಂಡೇಕಾರ, ಭಾಗ್ಯಶ್ರೀ ಪಾಟೀಲ, ಶಿವಾನಂದಗೌಡ ಪಾಟೀಲ, ಅಮೋಘಸಿದ್ಧ ಪೂಜಾರ, ಟಿ.ಆರ್.ಹಾವಿನಾಳ, ಕೆ.ಎಸ್.ಹಣಮಾಣಿ, ಸಿದ್ಧಲಿಂಗ ಶೆಟ್ಟೆಣ್ಣವರ, ಎನ್.ಎಂ. ಹರನಾಳ, ಎಂ.ಎನ್.ನಂದ್ಯಾಳ, ಬಿ.ವಿ.ಪಟ್ಟಣಶೆಟ್ಟಿ, ಅಹಮ್ಮದ ವಾಲೀಕಾರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಾಂತಾ ವಿಭೂತಿ, ತೇಜಸ್ವಿನಿ ವಾಂಗಿ, ಎನ್.ಕೆ.ಕುಂಬಾರ, ಎಸ್.ಎಸ್ ಮಾನೆ, ರಾಹುಲ ಚವ್ಹಾಣ, ಮುಂತಾದವರು ಉಪಸ್ಥಿತರಿದ್ದರು. ಶಿಲ್ಪಾ ಭಸ್ಮೆ ಸ್ವಾಗತಿಸಿ ಗೌರವಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ನಿರೂಪಿಸಿದರು. ಮಮತಾ ಮುಳಸಾವಳಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ