ಕನ್ನಡಪ್ರಭ ವಾರ್ತೆ ಮೈಸೂರು
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ (ಐ.ಕ್ಯೂ. ಎ. ಸಿ) ವತಿಯಿಂದ ಮೂಲಮಟ್ಟಿನ ಜನಪದ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಪ್ರಿಯ ದಾಟಿಯ ಸಂಗೀತ ಮತ್ತು ಕಲೆಗಳಿಗೆ ತಾಯಿಬೇರು ಜನಪದ ಎಂಬುದನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ. ಹಾಗಾಗಿ, ಜನಪದ ಕಲೆಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳ ಪುರಾಣಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಜನಪದವು ಆಯಾ ಸಂಸ್ಕೃತಿಯ ಅನುಸಾರ ವಿಕಸನಗೊಳ್ಳುತ್ತದೆ. ಹಾಗಾಗಿ ಸ್ಥಳೀಯ ಜಾನಪದ ಕಲೆಗಳು ಹೆಚ್ಚು ಮಹತ್ವ ಪಡೆದಿವೆ ಎಂದು ಹೇಳಿದರು.
ಮಲೆ ಮಹದೇಶ್ವರ, ಸಿದ್ದಪ್ಪಾಜಿ, ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ ಸೇರಿದಂತೆ ಹಳೆ ಮೈಸೂರು ಭಾಗದ ಹಲವಾರು ಕುಲ ದೇವರುಗಳ ಮೂಲ ಜಾನಪದ ಶೈಲಿಯ ಹಾಡುಗಳನ್ನು ಹಾಡಿ ರಂಜಿಸಿದರು. ಅಷ್ಟೇ ಅಲ್ಲ, ಹಲವಾರು ಪ್ರಸಂಗಗಳನ್ನು ಹಾಡಿ, ಅವುಗಳ ಹಿನ್ನೆಲೆ, ಸಂದರ್ಭ, ಅರ್ಥ, ವ್ಯಾಪ್ತಿ, ಗುಣ ಮತ್ತು ಅವಗುಣ, ಭಾವ, ಸ್ವಭಾವ ಕುರಿತು ಜಾನಪದ ದಾಟಿಯಲ್ಲಿ ಮನ ಮುಟ್ಟುವಂತೆ ವಿವರಿಸಿ ಅರ್ಥೈಸಿದರು.ಸುಮಾರು ಎರಡು ಗಂಟೆಗಳ ಕಾಲ ಜನಪದ ಶೈಲಿಯ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಮನರಂಜನೆಯ ಜೊತೆಗೆ ಜಾನಪದ ಕುರಿತು ಅರಿವು ಮೂಡಿಸಿದರು. ಹಾಡಿನ ಮುಟ್ಟುಗಳು ನೆರೆದಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.
ಕನ್ನಡ ಸಹ ಪ್ರಾಧ್ಯಾಪಕ ಎಸ್. ಸಿದ್ದೇಗೌಡ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಜೆ. ಭೀಮೇಶ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ವಿ. ನಂದಕುಮಾರ್, ವಿಭಾಗದ ಅಧ್ಯಾಪಕ ಎಚ್.ಎಲ್. ರೇಖಾ, ಕೆ.ಎಂ. ಮಂಜುನಾಥ, ಹರೀಶ್, ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಇದ್ದರು.ಸಿಂಚನ ಮತ್ತು ತಂಡ ಪ್ರಾರ್ಥಿಸಿದರು. ಕನ್ನಡ ಸಹ ಪ್ರಾಧ್ಯಾಪಕಿ ಎನ್. ಕಾವೇರಿ ಸ್ವಾಗತಿಸಿದರು, ಎಚ್.ಪಿ. ಚಂದ್ರಕಲಾ ವಂದಿಸಿದರು.