ಕನ್ನಡಪ್ರಭ ವಾರ್ತೆ ತರೀಕೆರೆ
ಬೆಂಗಳೂರು ಕರ್ನಾಟಕ ಜಾನಪದ ಪರಿಷತ್ತು ತರೀಕೆರೆ ತಾಲೂಕು ವತಿಯಿಂದ ಸಮೀಪದ ತ್ಯಾಗದಬಾಗಿ ಗ್ರಾಮದ ಸಮುದಾಯ ಭವನದಲ್ಲಿ ಭಾನುವಾರ ಬೆಂಗಳೂರು ಕ.ಜಾ.ಪ.ಸಂಸ್ಥಾಪಕರು ನಾಡೋಜ ಡಾ.ಎಚ್.ಎಲ್.ನಾಗೇಗೌಡ, ತ್ಯಾಗದಬಾಗಿ ಜನಪದ ಕಲಾವಿದರು ದಿ.ಶ್ರೀಮತಿ ದಾಕ್ಷಾಯಣಮ್ಮ ಸ್ಮರಣಾರ್ಥ ಏರ್ಪಾಡಾಗಿದ್ದ ಜಾನಪದ ಕಲೋತ್ಸವ, ಜನಪದ ಕಲಾ ಸಾಧಕರು ಮತ್ತು ಕಲಾ ಪೋಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಲೆಮಾರಿನಿಂದ ತಲೆಮಾರಿನವರಿಗೆ ಜನಪದವನ್ನು ಉಳಿಸಿಕೊಂಡು ಬರಲಾಗಿದೆ, ಯುವಕರನ್ನು ಒಗ್ಗೂಡಿಸಬೇಕು, ಜನಪದವನ್ನು ಕಟ್ಟಬೇಕು, ಪ್ರಥಮ ಜನಪದ ಸಮ್ಮೇಳನ ನೆಡೆದ ಸ್ಥಳ ತರೀಕೆರೆ, ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲು ಸಂತೋಷವಾಗುತ್ತದೆ ಎಂದು ತಿಳಿಸಿದ ಅವರು ಸುಶ್ರಾವ್ಯವಾಗಿ ಜನಪದ ಗೀತೆಗಳನ್ನು ಹಾಡಿದರು.ಚಿಕ್ಕಮಗಳೂರು ಜಿಲ್ಲೆ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಜಿ.ಬಿ.ಸುರೇಶ್ ಅವರು ಮಾತನಾಡಿ ಜಾನಪದವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ, ಜಾನಪದದಲ್ಲಿ 250ಕ್ಕೂ ಹೆಚ್ಚು ಕಲಾ ಪ್ರಕಾರಗಳು ಇದೆ, ಎಲ್ಲ ಹಾಡುಗಳಿಗೆ ಮೂಲ ಜಾನಪದವಾಗಿದೆ, ಜಾನಪದ ಕಲೆಯನ್ನು ಮರೆಯಬಾರದು, ನಾಡು ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ, ಜಾನಪದ ಕಲೋತ್ಸವ ವಿಶೇಷವಾದ ಕಾರ್ಯಕ್ರಮವಾಗಿದೆ, ಭಾವೈಕ್ಯತೆ ಮತ್ತು ಸಹೃದಯತೆಯನ್ನು ಬಿಂಬಿಸಿದೆ, ಸಂಘಟನೆ ಮತ್ತು ಸಮುದಾಯದಲ್ಲಿ ನಾವೆಲ್ಲರೂ ಒಗ್ಗೂಡಬೇಕು, ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಹಳ್ಳಿ ಹಳ್ಳಿಗೂ ತಲುಪಬೇಕು ಎಂದು ಹೇಳಿದರು.
ಸಮಾಜ ಸೇವಕರು ಶ್ಯಾಮಲ ಮಂಜುನಾಥ್ ಮಾತನಾಡಿ, ಕಲೆಯನ್ನು ಪ್ರೋತ್ಸಾಹಿಸಬೇಕು, ಜನಪದ ಕಾರ್ಯಕ್ರಮ ಯುವಕರಿಗೆ ತಲುಪುವಂತಾಗಬೇಕು ಎಂದು ಹೇಳಿದರು. ಕ.ಜಾ.ಪ.ತರೀಕೆರೆ ತಾಲೂಕು ಅಧ್ಯಕ್ಷರು ಆರ್.ನಾಗೇಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಡಗನಾಡು ಶ್ರೀ ಹೇಮರೆಡ್ಡಿ ಮಲ್ಲಮ್ಮ, ವೀರಶೈವ ಜನಾಂಗ ಸಂಘ ಅಧ್ಯಕ್ಷರು ರೇವಣಸಿದ್ದಪ್ಪ ಮಾತನಾಡಿದರು.
ಜನಪದ ಕಲಾ ಸಾಧಕರಿಗೆ ಮತ್ತು ಕಲಾ ಫೋಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.