ಕೃಷಿ, ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮ ಅನುಸರಿಸಿ: ಬಿ.ಡಿ.ಜಯರಾಮ

KannadaprabhaNewsNetwork |  
Published : Jun 27, 2025, 12:54 AM IST
46 | Kannada Prabha

ಸಾರಾಂಶ

ಪ್ರಮುಖ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳ ತಳಿ ಆಯ್ಕೆ, ಬೇಸಾಯ ಕ್ರಮಗಳು ಮತ್ತು ಕೊಟ್ಟಿಗೆ ಗೊಬ್ಬರದ ಬಳಕೆಯ ಮಹತ್ವ ಮತ್ತು ಸದರಿ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ ವತಿಯಿಂದ 2025- 26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೈಸೂರು ತಾಲೂಕಿನ ವರುಣ ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮಗಳು ಮತ್ತು ಕೀಟ ರೋಗಗಳ ನಿರ್ವಹಣೆ ಕುರಿತು ಗುರುವಾರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ತರಬೇತಿ ಉದ್ಘಾಟಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಡಿ. ಜಯರಾಮ ಅವರು, ಕೃಷಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನ ಹಾಗೂ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಬಾಳೆ, ತೆಂಗು, ಮಾವು ಮತ್ತು ತರಕಾರಿ ಬೆಳೆಗಳಲ್ಲಿ ತಳಿ ಆಯ್ಕೆ, ಕಂದುಗಳ ಬೀಜೋಪಚಾರ, ಅಳವಡಿಸಬೇಕಾದ ಬೇಸಾಯ ಕ್ರಮಗಳು ಮತ್ತು ರೋಗ, ಕೀಟ ನಿರ್ವಹಣೆ ಬಗ್ಗೆ ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಿ.ಎಂ. ವಿನಯ್ ಅವರು ಮಾಹಿತಿ ನೀಡಿದರು. ಮತ್ತು ಮಣ್ಣು ಮಾದರಿ ಸಂಗ್ರಹಿಸುವ ವಿಧಾನ ಹಾಗೂ ಶಿಫಾರಸಿನಂತೆ ರಸಗೊಬ್ಬರ ಬಳಕೆ ತಿಳಿಸಿಕೊಟ್ಟರು.

ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ಅವರು, ಈ ಭಾಗದ ಪ್ರಮುಖ ಬೆಳೆಗಳಾದ ರಾಗಿ ಮತ್ತು ದ್ವಿದಳ ಧಾನ್ಯಗಳ ತಳಿ ಆಯ್ಕೆ, ಬೇಸಾಯ ಕ್ರಮಗಳು ಮತ್ತು ಕೊಟ್ಟಿಗೆ ಗೊಬ್ಬರದ ಬಳಕೆಯ ಮಹತ್ವ ಮತ್ತು ಸದರಿ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪಿಡಿಒ ಚಂದ್ರಕಾಂತ್, ಸಹಾಯಕ ತೋಟಗಾರಿಕಾ ಅಧಿಕಾರಿ ದರ್ಶನ್, ಕೃಷಿ ಅಧಿಕಾರಿ ಎ. ಆನಂದ್ ಕುಮಾರ್, ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ. ಹೇಮಂತ್, ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕಿ ಎಚ್.ಸಿ. ಅಮೃತವಾಣಿ, ಕೃಷಿಸಖಿ ಚಂದ್ರಗೌರಿ ಮತ್ತು 70 ಹೆಚ್ಚು ಜನ ರೈತರು ಭಾಗವಹಿಸಿದ್ದರು. ಕೃಷಿ ಅಧಿಕಾರಿ ಗೌರವ್ವ ಅಗಸೀಬಾಗಿಲ ವಂದಿಸಿದರು.

ಶೋಟೋಕನ್‌ ಕರಾಟೆ ಶಾಲೆ ಸ್ಪರ್ಧಿಗಳು ರಾಷ್ಟ್ರಮಟ್ಟಕ್ಕೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿವಿ ಆಯೋಜಿಸಿದ್ದ 17ನೇ ಕರ್ನಾಟಕ ರಾಜ್ಯ ಕಿಕ್‌ಬಾಕ್ಸಿಂಗ್‌ಚಾಂಪಿಯನ್‌ಶಿಪ್‌ನಲ್ಲಿ ಶೋಟೋಕನ್‌ಕರಾಟೆ ಮತ್ತು ಸಮರ ಕಲೆಗಳ ಶಾಲೆ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.

ಒಟ್ಟು ನಾಲ್ಕು ಚಿನ್ನ, ಮೂರು ಬೆಳ್ಳಿ ಪದಕ ಗೆದ್ದಿದ್ದಾರೆ. ಆ ಮೂಲಕ ಛತ್ತೀಸಘಡದ ರೈಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಿಕ್‌ಬಾಕ್ಸಿಂಗ್‌ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅತ್ರಿಪ್ರಿಯಾ ಕೆ. ಪೂಜಾರಿ, ಶರತ್‌ ಚಂದ್ರ, ಎಂ. ವಿಕಾಸ್‌, ನಿಥಿನ್‌ನಿಕ್ಸನ್‌ ಅವರು ಚಿನ್ನದ ಪದಕ ಪಡೆದರೆ, ಚೆರಿಷ್‌ ಚೆಂಗಪ್ಪ, ಎಂ. ಪವನ್‌, ಎಂ.ಕೆ. ಕಿಶೋರ್‌ಕುಮಾರ್‌ಬೆಳ್ಳಿ ಪದಕ ಪಡೆದಿದ್ದಾರೆ. ಇವರಿಗೆ ಚೇತನ್‌ಸಿ. ಗೌಡ ಮುಖ್ಯ ತರಬೇತುದಾರರಾಗಿದ್ದು, ಗ್ರಾಂಡ್‌ ಮಾಸ್ಟರ್‌ ನಾಗರಾಜ್‌ ಜೆಟ್ಟಿ ಇದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ