ಆಹಾರ ಮೇಳದಲ್ಲಿ ಹಳಸಲು ವಾಸನೆ

KannadaprabhaNewsNetwork |  
Published : Feb 14, 2026, 02:45 AM IST
Hampi

ಸಾರಾಂಶ

ವಿಶ್ವವಿಖ್ಯಾತ ಹಂಪಿಯ ಭವ್ಯ ಪರಂಪರೆ, ಸಾಂಸ್ಕೃತಿಕ ಆಚರಣೆಗಳನ್ನು ಜೀವಂತವಾಗಿರಿಸಲು ಹಂಪಿ ಉತ್ಸವ ಆರಂಭಿಸಲಾಗಿದೆ. ಈ ಉತ್ಸವ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನಾಕರ್ಷಣೆಗೊಳ್ಳುತ್ತಾ ಸಾಗಬೇಕಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹಂಪಿ: ವಿಶ್ವವಿಖ್ಯಾತ ಹಂಪಿಯ ಭವ್ಯ ಪರಂಪರೆ, ಸಾಂಸ್ಕೃತಿಕ ಆಚರಣೆಗಳನ್ನು ಜೀವಂತವಾಗಿರಿಸಲು ಹಂಪಿ ಉತ್ಸವ ಆರಂಭಿಸಲಾಗಿದೆ. ಈ ಉತ್ಸವ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನಾಕರ್ಷಣೆಗೊಳ್ಳುತ್ತಾ ಸಾಗಬೇಕಿದೆ. ಆದರೆ ಇಲ್ಲಿಯ ಮಾತಂಗ ಪರ್ವತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ "ಆಹಾರ ಮೇಳ " ಯಾವುದೇ ವಿಶೇಷತೆ ಇಲ್ಲದೇ ಕಳಾಹೀನವಾಗಿದೆ. ಎಲ್ಲವೂ ಹಳಸಲು ಹಳಸಲಾಗಿದೆ.

ಆಹಾರ ಮೇಳದಲ್ಲಿ 75 ಸ್ಟಾಲ್‌ ಗಳಲ್ಲಿ ಹೋಟೆಲ್‌ ಆರಂಭ

ಆಹಾರ ಮೇಳದಲ್ಲಿ 75 ಸ್ಟಾಲ್‌ ಗಳಲ್ಲಿ ಹೋಟೆಲ್‌ ಆರಂಭಿಸಲಾಗಿದೆ. ಅದರಲ್ಲಿ ಒಂದೆರೆಡು ಬಿಟ್ಟರೆ ಬಹುತೇಕ ಸ್ಟಾಲ್‌ ಗಳಲ್ಲಿ ಗಿರ್ಮಿಟ್‌, ಮಿರ್ಚಿ, ದೋಸೆ, ಪಲಾವು, ಒಗ್ಗರಣೆ, ಇಡ್ಲಿ, ವಡಾ ಹೀಗೆ ಮಾಮೂಲು ಸಣ್ಣ ಹೋಟೆಲ್‌ಗಳಲ್ಲಿ ಮಾಡುವಂತೆ ಆಹಾರ ತಯಾರಿಸಿ ಗ್ರಾಹಕರಿಗಾಗಿ ಕಾಯುತ್ತಿದ್ದಾರೆ.

ಮುನಿರಾಬಾದ್‌ನಿಂದ ಆಗಮಿಸಿದ ಹೋಟೆಲ್‌ನವರು ಸಿರಿಧಾನ್ಯದ ಗಿರ್ಮಿಟ್, ಮಿರ್ಚಿ, ರಾಗಿ, ಸಜ್ಜೆ, ಜೋಳದ ಮಂಡಕ್ಕಿ, ಧಾನ್ಯಶ್ರೀ ಹೋಟೆಲ್‌ ನ ಸಿರಿಧಾನ್ಯ ಕಿಚಡಿ, ಸೌಮ್ಯ ಮೊಸರನ್ನ, ವಿಜಯನಗರ ಟಿಫಿನ್‌ ಸೆಂಟರ್‌ನ ಸ್ಪೈರಲ್‌ ಪೊಟ್ಯಾಟೋ , ಮೈಸೂರಿನ ಮಶ್ರೂಮ್‌ ಪ್ಯಾಲೇಸ್ ನ ವೆಜಿಟೇಬಲ್‌ ಬಿರಿಯಾನಿ ಸ್ವಲ್ಪ ಮಟ್ಟಿನ ವಿಶೇಷತೆ ಎನ್ನಬಹುದು ಅಷ್ಟೆ.

ಹೋಟೆಲ್‌ಗಳಲ್ಲಿ ಮಾಡುವ ತಿಂಡಿ

ಉಳಿದ ಎಲ್ಲ ಸ್ಟಾಲ್‌ ಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಹೋಟೆಲ್‌ಗಳಲ್ಲಿ ಮಾಡುವ ತಿಂಡಿಗಳನ್ನು ಮಾಡಲಾಗಿದೆ. ಸ್ವಚ್ಛತೆ ಇಲ್ಲ; ಡಸ್ಟ್‌ ಬಿನ್‌ ನೀಡಿಲ್ಲ. ಅಂಗಡಿಯವರೇ ಕೆಲವರು ಮಾತ್ರ ಸ್ವತಃ ಡಸ್ಟ್‌ ಬಿನ್‌ ಇಟ್ಟುಕೊಂಡಿದ್ದಾರೆ. ಸಮರ್ಪಕ ನೀರಿನ ಸೌಲಭ್ಯ, ಸಮರ್ಪಕ ವಿದ್ಯುತ್‌ ನೀಡಿಲ್ಲ ಎಂಬುದು ಇಲ್ಲಿಯ ಹೋಟೆಲ್‌ ತೆರೆದಿರುವವರ ಆರೋಪವಾಗಿದೆ.

ಆಹಾರ ಮೇಳದಲ್ಲಿ ಯಾವುದೇ ವಿಶೇಷತೆಯ ಆಹಾರವಿಲ್ಲ. ಅದಕ್ಕೆ ತಕ್ಕಂತೆ ಜನರೂ ಆ ಕಡೆ ಹೋಗಲು ಆಸಕ್ತಿ ತೋರಿದಂತೆ ಕಾಣುವುದಿಲ್ಲ. ಪ್ರತಿ ಸ್ಟಾಲ್‌ ಗೂ ₹3 ಸಾವಿರದಂತೆ ದರ ವಿಧಿಸಲಾಗಿದೆ. ಆದರೆ ಮೂಲ ಸೌಕರ್ಯ ಮರೀಚಿಕೆಯಾಗಿದೆ.

ನಾವು ನಾಲ್ಕು ಬಾರಿ ಈ ಆಹಾರ ಮೇಳದಲ್ಲಿ ಹೋಟೆಲ್‌ ತೆರೆದಿದ್ದೇವೆ. ಈ ಬಾರಿ ಚಿಕ್ಕ ಸ್ಟ್ಲಾಲ್‌ ಗಳನ್ನು ನೀಡಿದ್ದಾರೆ. 2 ಚೇರ್, 2 ಟೇಬಲ್‌ ಮಾತ್ರ ಕೊಟ್ಟಿದ್ದಾರೆ. ಡಸ್ಟ್‌ ಬಿನ್‌ ಇಟ್ಟಿಲ್ಲ. ಅವ್ಯವಸ್ಥೆ ಇದೆ ಎನ್ನುತ್ತಾರೆ ಆರಾಧ್ಯ ಹೋಟೆಲ್‌ ಹಾಲಮ್ಮ.

ನಾವು ಗೋಬಿ ಮಂಚೂರಿ ಅಂಗಡಿ ತೆರೆದಿದ್ದೇವೆ. ನಮ್ಮ ಅಕ್ಕ ಪಕ್ಕದವರಿಗೂ ಗೋಬಿ ಮಂಚೂರಿ ಅಂಗಡಿಗಳಿಗೆ ಅವಕಾಶ ನೀಡಿದ್ದಾರೆ. ಹೀಗಾದರೆ ವ್ಯಾಪಾರ ಹೇಗೆ ಆಗುತ್ತದೆ? ₹3 ಸಾವಿರ ಬಾಡಿಗೆ ತೆಗೆದುಕೊಂಡರೂ ಸೌಲಭ್ಯ ಸರಿಯಾಗಿಲ್ಲ ಎನ್ನುತ್ತಾರೆ ಗೋಬಿ ಮಂಚೂರಿ ಅಂಗಡಿ ಅನಿತಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹೆಚ್ಚು ತೆರಿಗೆ ಕಟ್ಟಿದ್ದಕ್ಕೆ ಹೆಚ್ಚಿನ ಅನುದಾನ ಸಿಗದು: ನಿರ್ಮಲಾ
ಬಿಡದಿ ಟೌನ್‌ಶಿಪ್‌ : ರಾಹುಲ್‌ ಗಾಂಧಿಗೆ ಬಿವೈವಿ, ನಿಖಿಲ್‌ ಕುಮಾರಸ್ವಾಮಿ ಪತ್ರ