ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ

KannadaprabhaNewsNetwork |  
Published : Feb 19, 2026, 04:30 AM IST
(ಫೋಟೊಬಿಕೆಟಿ7, ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಬೀಜ ಸಂಸ್ಕರಣಾ ಘಟಕದಿಂದ ಹೊರ ಬರುವ ಶಬ್ಧವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿರುವ ಮನವಿಯನ್ನು ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ) | Kannada Prabha

ಸಾರಾಂಶ

ವಿವಿಧ ಆಹಾರ ಪದಾರ್ಥಗಳ ಅವಧಿ ಪೂರ್ಣಗೊಂಡ ಪ್ರಕರಣ ಹಾಗೂ ಆಹಾರ ಪದಾರ್ಥಗಳ ತಯಾರಿಸುವ ಸ್ಥಳ ಅಸ್ವಚ್ಛತೆ ಸೇರಿದಂತೆ ಒಟ್ಟು 9 ಪ್ರಕರಣಗಳಿಗೆ ಜಿಲ್ಲಾ ಅಂಕಿತ ಅಧಿಕಾರಿಗಳ ನ್ಯಾಯಾಲಯದಲ್ಲಿ ₹1.30 ಲಕ್ಷ ದಂಡ ವಿಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿವಿಧ ಆಹಾರ ಪದಾರ್ಥಗಳ ಅವಧಿ ಪೂರ್ಣಗೊಂಡ ಪ್ರಕರಣ ಹಾಗೂ ಆಹಾರ ಪದಾರ್ಥಗಳ ತಯಾರಿಸುವ ಸ್ಥಳ ಅಸ್ವಚ್ಛತೆ ಸೇರಿದಂತೆ ಒಟ್ಟು 9 ಪ್ರಕರಣಗಳಿಗೆ ಜಿಲ್ಲಾ ಅಂಕಿತ ಅಧಿಕಾರಿಗಳ ನ್ಯಾಯಾಲಯದಲ್ಲಿ ₹1.30 ಲಕ್ಷ ದಂಡ ವಿಧಿಸಲಾಗಿದೆ.

ಇಳಕಲ್ಲ ನಗರದ ಕಂಠಿ ಸರ್ಕಲ್ ಬಳಿ ಇರುವ ಅಯೋಧ್ಯೆ ಬೇಕರಿ, ಬಸ್ ನಿಲ್ದಾಣದಲ್ಲಿರುವ ಶ್ರೀ ದುರ್ಗಾ ರಿಪ್ರೇಶಮೆಂಟ್ ಕೆಎಸ್ಆರ್ಟಿಸಿ ಕ್ಯಾಂಟೀನ್, ಬಾಗಲಕೋಟೆಯ ಕೇಕ್ ಡಿಲೈಟ್, ಸಿಗೀಕೇರಿ ಎಸ್.ಎಲ್.ಜೆ ಅಯ್ಯಂಗಾರ ಬೇಕರಿ, ಬಾದಾಮಿ ಬಸ್ ನಿಲ್ದಾಣದ ಎದುರಿಗಿರುವ ಹೋಟೆಲ್ ಉಡುಪಿ ಕಿಚನ್, ಸಾನ್ವಿ ಕೇಕ್ ಕಾರ್ನರ್, ವಿಶಿಷ್ಟ ಇಂಡಸ್ಟ್ರೀಸ್ ಬಳ್ಳಾರಿ, ಮುಧೋಳ ಹೋಟೆಲ್ ನಿವ್ ಶಬರಿಗಳಿಗೆ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿಗಳು ಆಗಿರುವ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.

ಜಿಲ್ಲಾ ಅಂಕಿತ ಅಧಿಕಾರಿಗಳು ಪ್ರಕರಣ ಪರಿಶೀಲಿಸಿ ದಂಡ ವಿಧಿಸಿ, ಪುನಃ ಈ ತಪ್ಪು ಮರುಕಳಿಸಸದಂತೆ ಎಚ್ಚರಿಕೆ ನೀಡಿ ಪ್ರಕರಣ ಇತ್ಯರ್ಥಪಡಿಸಲಾಯಿತು. ಆಹಾರ ಪದಾರ್ಥ ತಯಾರಿಸುವ ಸ್ಥಳ ಸ್ವಚ್ಛತೆಯಿಂದ ಇರಬೇಕು. ಯಾವುದೇ ರೀತಿಯ ಕಲಬೆರಕೆ, ಕಳಪೆ ಗುಣಮಟ್ಟದ ಆಹಾರ ಬಳಕೆ ಕಂಡು ಬಂದಲ್ಲಿ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು. 8 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದರು. ಆಹಾರ ಸುರಕ್ಷತೆ ಅಧಿಕಾರಿಗಳಾದ ಇ.ಎಚ್. ಫಾರೂಕಿ, ಆರ್.ಎಂ. ಸಾಳಗುಂದಿ, ಸದಾಶಿವ ಹಡಪದ, ಸಂದೀಪ್ ತಿಡಗುಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆನ್‌ಲೈನ್‌ ಆಟದಲ್ಲಿ ದಿವಾಳಿ; ಹಣಕ್ಕೆ ವ್ಯಕ್ತಿಯ ಅಪಹರಣ ಸಂಚು ರೂಪಿಸಿದ