- ಸಮ್ಮೇಳನಾಧ್ಯಕ್ಷೆ ಜಯಮ್ಮ ನೇತೃತ್ವದಲ್ಲಿ ಸಮ್ಮೇಳನ । ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್ ಅಲಂಕಾರ । ರಾರಾಜಿಸುತ್ತಿವೆ ಬಾವುಟಗಳು । 2 ಸಾವಿರ ಸಾಹಿತ್ಯಾಭಿಮಾನಿಗಳೀಗೆ ಪೆಂಡಾಲ್ ವ್ಯವಸ್ಥೆ
ಚಿಕ್ಕಮಗಳೂರು ಜಿಲ್ಲೆಯ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಡೂರಿನಲ್ಲಿ ಇದೇ ಪ್ರಪ್ರಥಮವಾಗಿ ಮೂರು ದಿನಗಳ ಕಾಲ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮ್ಮೇಳನಕ್ಕಾಗಿ ಭರದ ಸಿದ್ಧತೆ ಅಂತಿಮಗೊಂಡು ಸಾಹಿತ್ಯ ಮತ್ತು ಕನ್ನಡಾ ಭಿಮಾನಿಗಳಿಗೆ ಭವ್ಯ ಸ್ವಾಗತಕೋರಲು ಡಾ. ಬಿ.ಆರ್. ಅಂಬೇಡ್ಕರ್ ಮಹಾದ್ವಾರ ಸಜ್ಜುಗೊಂಡಿದೆ.
ಕಡೂರಿನ ಜ್ಯೂನಿಯರ್ ಕಾಲೇಜಿನ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 3 ದಿನ ನಡೆಯುವ ಅದ್ಧೂರಿ ಜಿಲ್ಲಾ ಸಮ್ಮೇಳನಕ್ಕೆ ಈಗಾಗಲೇ ಪಟ್ಟಣದ ಪ್ರಮುಖ ರಸ್ತೆಗಳು ಆಕರ್ಷಕ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿವೆ. ಬ್ಯಾನರ್‌ಗಳು ರಾರಾಜಿಸುತ್ತಿವೆ. ಕನ್ನಡದ ಬಾವುಟಗಳಿಂದ, ಬಂಟಿಂಗ್ಸ್ ಮತ್ತು ತಳಿರು ತೋರಣಗಳಿಂದ ಸಿಂಗಾರಗೊಳಿಸಿದ್ದು, ಇಡೀ ಪಟ್ಟಣ ವಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ಈಗಾಗಲೇ ಸಮ್ಮೇಳನದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಹಾದ್ವಾರ, ಕಡೂರಿನ ಹಿರಿಮೆ ಹೆಚ್ಚಿಸಿದ ನಾಟ್ಯಪ್ರವೀಣೆ ಪದ್ಮಭೂಷಣ ಡಾ. ವೆಂಕಟಲಕ್ಷ್ಮಮ್ಮ ಹೆಸರಿನ ಸುಮಾರು 2 ಸಾವಿರ ಜನ ಆಸೀನರಾಗಲು ಪೆಂಡಾಲ್ ವ್ಯವಸ್ಥೆ ಮಹಾ ಮಂಟಪ ನಿರ್ಮಿಸಲಾಗಿದೆ.ಸಮ್ಮೇಳನದ ವೇದಿಕೆಗೆ ಜಿಲ್ಲೆಯ ಹಿರಿಯ ಸಾಹಿತಿ ದಿ. ಅಜ್ಜಂಪುರ ಜಿ.ಸೂರಿ ಹೆಸರು ನಾಮಕರಣ ಮಾಡಲಾಗಿದೆ.
ಶ್ರೀ ಚಂದ್ರಮೌಳೇಶ್ವರ ದೇಗುಲದಿಂದ ಚಾಲನೆ: ಏ.10ರ ಶುಕ್ರವಾರ ಬೆಳಿಗ್ಗೆ 8.30ಕ್ಕೆ ತಾಲೂಕು ದಂಡಾಧಿಕಾರಿ ಸಿ.ಎಸ್. ಪೂರ್ಣಿಮಾ ರಾಷ್ಟ್ರ ಧ್ವಜ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಪರಿಷತ್ತಿನ ಧ್ವಜ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ನಾಡ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಸಂಜೆ 4ಕ್ಕೆ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇಗುಲದಿಂದ ಕೆಎಲ್ವಿ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ್ ಕ್ರೀಡಾಂಗಣದ ಸಮ್ಮೇಳನದ ವೇದಿಕೆಯವರೆಗೆ ಸಮ್ಮೇಳನಾಧ್ಯಕ್ಷೆ ಎಂ. ಜಯಮ್ಮ ಅವರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 4- 6 ರವರೆಗೆ ನಡೆಯುವ 2ನೇ ಗೋಷ್ಠಿ ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ. ಎ.ಎಸ್. ಶಂಕರನಾರಯಣ ಉದ್ಘಾಟಿಸಲಿದ್ದಾರೆ. 3ನೇ ಗೋಷ್ಠಿ ಸಂಜೆ ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಯುವಗೋಷ್ಠಿ ನಡೆಯಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಚ್.ಸಿ. ಲೋಕೇಶ್ ಉದ್ಘಾಟಿಸಲಿದ್ದು, ಯುವ ಕರ್ನಾಟಕ- ಹೊಸತಲೆಮಾರಿನ ಮನಸ್ಥಿತಿ ಕುರಿತಾಗಿ ರೋಹನ್ ಭಾರ್ಗವಪುರಿ ಉಪನ್ಯಾಸ ನೀಡಲಿದ್ದಾರೆ. ಸಂಜೆ 7 ರಿಂದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಕಲರವ ಅನಾವರಣಗೊಳ್ಳಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಉದ್ಘಾಟಿಸಲಿದ್ದಾರೆ. ಸ್ಥಎರಡನೇ ದಿನ ಏ.12ರ ಭಾನುವಾರ ಜಾನಪದ ಗೋಷ್ಠಿ ವೇಳೆ ಯುಗಧರ್ಮ ರಾಮಣ್ಣ ಅವರಿಂದ ಜಾನಪದ ಗೀತಗಾಯನ ನಡೆಯಲಿದೆ. ಸಂಸ್ಕೃತಿ ಚಿಂತಕ ಡಾ. ಜಿ.ಪಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕಜಾಪ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್ ಉದ್ಘಾಟಿಸಲಿದ್ದಾರೆ. 5ನೇ ಗೋಷ್ಠಿ ‘ಧರ್ಮ ಸಾಮರಸ್ಯ ಸಾಹಿತ್ಯ ದೃಷ್ಠಿ’ ಎಂಬ ವಿಚಾರ ಕುರಿತು ನಡೆಯಲಿದ್ದು ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಸಾಹಿತಿ ಕನ್ನಡಶ್ರೀ ಭಗವಾನ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ವಾಗ್ಮಿ ಚಟ್ನಳ್ಳಿ ಮಹೇಶ್ ಸಾಹಿತ್ಯದ ಕಣ್ಣಲ್ಲಿ ಧರ್ಮದ ಸ್ವರೂಪ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1ರಿಂದ ನಡೆಯುವ ಮಹಿಳಾ ಗೋಷ್ಠಿಯಲ್ಲಿ ಜಿಪಂ ಸಿಇಒ ಡಾ. ಎಚ್.ಎಸ್. ಕೀರ್ತನಾ ಭದ್ರಾಬಾಲ್ಯ ಕುರಿತು, ಪೂರ್ಣಿಮಾ ಸ್ತ್ರೀ ಎಂದರೆ ಅಷ್ಟೇ ಸಾಕೇ ವಿಷಯ ಮಂಡಿಸಲಿದ್ದಾರೆ. ಪುರಸಭೆ ಮಾಜಿ ಉಪಾಧ್ಯಕ್ಷೆ ಮಂಜುಳಾ ಚಂದ್ರು ಅಧ್ಯಕ್ಷತೆ, ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್ ಉದ್ಘಾಟಿಸ ಲಿದ್ದಾರೆ. ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕಸಾಪ ಜಿಲ್ಲಾ ಘಟಕದಿಂದ ಬಹಿರಂಗ ಅಧಿವೇಶನ ನಡೆಯಲಿದೆ. ಜಿಲ್ಲೆಯ ಸಾಧಕರು ಹಾಗೂ ಹಿರಿಯ ಸಾಹಿತಿಗಳಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡುವರು. ಸಮಾರೋಪ ಸಮಾರಂಭದಲ್ಲಿ ಸಂಸದ ಕೋಟಾ ಶ್ರೀನಿವಾಸಪೂಜಾರಿ, ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಕೆ.ಎಸ್.ಆನಂದ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ಡಾ. ಧನಂಜಯ್ ಸರ್ಜಿ, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ವೈ.ಎಸ್.ವಿ. ದತ್ತ, ಡಾ.ಬಿ.ಎಲ್. ಶಂಕರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಪ್ರಶಸ್ತಿ ಪ್ರದಾನ: ಹಂಪಿ ವಿವಿ ಪ್ರಾಧ್ಯಾಪಕ ಡಾ. ಬಿ.ಎಂ. ಪುಟ್ಟಯ್ಯ, ತರೀಕೆರೆ ಸಾಹಿತಿ ಡಾ. ಗಂಗಾನಾಯ್ಕ್ (ಕರ್ನಾಟಕ ಸಾಹಿತ್ಯಶ್ರೀ ಪ್ರಶಸ್ತಿ ), ಚಿಕ್ಕಮಗಳೂರಿನ ರಮೇಶ್ ಬೊಂಗಾಳೆ, ಸಿಂಗಟಗೆರೆ ಸಿದ್ಪಪ್ಪ, ಪ್ರಿಯದರ್ಶಿನಿ, ಮೇಕನಗದ್ದೆ ಲಕ್ಷ್ಮಣ ಗೌಡ ಮೂಡಿಗೆರೆ (ಸಾಹಿತ್ಯ ಸಿರಿ ಪ್ರಶಸ್ತಿ ), ಕವಿತಾ ಗೋಪಾಲ್, ಇಮ್ರಾನ್ ಅಹಮದ್ ಬೇಗ್, ಶೃಂಗೇರಿ ಸುಬ್ಬಣ್ಣ (ಕನ್ನಡ ಶ್ರೀ ಪ್ರಶಸ್ತಿ , ನಾ.ಸು. ಶಿವಸ್ವಾಮಿ, ಕುಂದೂರು ಅಶೋಕ್ ಸೇರಿದಂತೆ 11 ಜನರಿಗೆ ಕನ್ನಡ-ಕನ್ನಡಿಗ ಸಂಭ್ರಮಿಸುವ ಸಿರಿ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 70 ಜನ ಸಾಧಕರಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
-- ಬಾಕ್ಸ್-- ಡಾ. ಬರಗೂರು ರಾಮಚಂದ್ರಪ್ಪರಿಂದ ಸಮ್ಮೇಳನ ಉದ್ಘಾಟನೆ:
-- ಬಾಕ್ಸ್--
ಮೂಲತಃ ಎನ್.ಆರ್.ಪುರ ತಾಲೂಕಿನವರಾದ ಸಾಹಿತಿ ಎಂ. ಜಯಮ್ಮ ಲಕ್ಕವಳ್ಳಿ, ಎನ್.ಆರ್.ಪುರದಲ್ಲಿ ಬಾಲ್ಯ ಶಿಕ್ಷಣ ಮುಗಿಸಿ ತಮ್ಮ 18ನೆ ವಯಸ್ಸಿನಲ್ಲಿ ಮೊಟ್ಟಮೊದಲು ಬರವಣಿಗೆಯಲ್ಲಿ ತೊಡಗಿಸಿಕೊಂಡ ಅವರು ವಾರಪತ್ರಿಕೆಯಲ್ಲಿ ಕಾದಂಬರಿ ಪ್ರಕಟಗೊಂಡ ಬೆನ್ನಲ್ಲೇ ಸಾಹಿತ್ಯ ಲೋಕದ ಒಂದು ಮೈಲಿಗಲ್ಲಾಯಿತು. ಬಿಇಎಡ್ ತರಬೇತಿ ಪಡೆದು 1970ರಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. ಮಿತ ಭಾಷಿ, ಕೊಂಚ ಸಂಕೋಚದ ಪ್ರವೃತ್ತಿಯ ಎಂ.ಜಯಮ್ಮ ಕಥೆ, ಕಾದಂಬರಿ, ಚರ್ಚೆ, ಚಿತ್ರಕಲೆ, ಎಂಬ್ರಾಯಿಡರಿ, ಟೈಲರಿಂಗ್, ಪೇಪರ್ ಕಟಿಂಗ್ ಕೃತಕ ಹೂಗಳ ತಯಾರಿಕೆ, ಕೊಬ್ಬರಿ ಕೆತ್ತನೆ, ಗೊಂಬೆ ತಯಾರಿಕೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು.
9 ಬೀರೂರು 2ಕಡೂರು ಪಟ್ಟಣದ ಕನ್ನಡಭವನದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಸಮ್ಮೇಳನದ ಅಂತಿಮ ಸಿದ್ದತೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಸೂರಿಶ್ರೀನಿವಾಸ್, ಯರದಕೆರೆ ರಾಜಪ್ಪ, ಆಸಂಧಿಕಲ್ಲೇಶ್, ಚಿಕ್ಕನಲ್ಲೂರು ಪರಮೇಶ್, ಕೃಷ್ಣಸ್ವಾಮಿ, ಕೆ.ಎಚ್. ಮಂಜುನಾಥ್, ಕೆ.ಜಿ.ಲೋಕೇಶ್ವರ್ ಮತ್ತಿತರಿದ್ದರು.