ಕೂಡ್ಲಿಗಿ: ಮಹಾಮಾನವತವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮೌಲ್ಯಗಳು, ಆದರ್ಶಗಳು ಜಗತ್ತಿಗೆ ಆದರ್ಶವಾಗಿವೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ದಲಿತರ ನೋವು- ನಲಿವು ಕಂಡುಂಡವರು. ಹೀಗಾಗಿ ಎಲ್ಲ ವರ್ಗಗಳ ಜನತೆಗೆ ಮೀಸಲಾತಿ ಪಡೆದು ಸಹಬಾಳ್ವೆ ನಡೆಸಲು ಅಂಬೇಡ್ಕರ್ ಕಾರಣರಾಗಿದ್ದಾರೆ ಎಂದರು.
ಅಂಬೇಡ್ಕರ್ ಕೇವಲ ದಲಿತರಿಗೆ ಸೀಮಿತರಾದವರಲ್ಲ ಎಲ್ಲ ಧರ್ಮದ ಜನರಿಗೆ ಮಹಿಳೆಯರಿಗೆ ಅನ್ವಯವಾಗುವ ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್ ಅವರ ಆದರ್ಶಗಳು ನಮಗೆ ದಾರಿದೀಪವಾಗಿದೆ. ಕತ್ತಲೆ ಬದುಕನ್ನು ಬಿಟ್ಟು ಶಿಕ್ಷಣ ಪಡೆದು ಬೆಳಕಿನೆಡೆಗೆ ಸಾಗಿಸಲು ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಾಪಂ ಇಒ ಕೆ.ನರಸಪ್ಪ, ಪಪಂ ಅಧ್ಯಕ್ಷ ಕೆ.ಶಿವಪ್ಪ ನಾಯಕ, ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪರ ವೆಂಕಟೇಶ್, ಸದಸ್ಯರಾದ ಎಸ್. ದುರುಗೇಶ್, ಸಿಪಿಐಗಳಾದ ಪ್ರಹ್ಲಾದ್ ಚನ್ನಗಿರಿ, ಸಿಪಿಐ ದುರುಗಪ್ಪ, ಪಿಎಸ್ಐ ಸಿ.ಪ್ರಕಾಶ್, ವಕೀಲರಾದ ಡಿ.ಎಚ್. ದುರುಗೇಶ್, ಪಪಂ ಸದಸ್ಯರಾದ ಸಿರಿಬಿ ಮಂಜು, ಜಯಮ್ಮರ ರಾಘವೇಂದ್ರ, ನಿವೃತ್ತ ಇಒ ಬಸಣ್ಣ, ದಲಿತ ಮುಖಂಡರಾದ ಗುಣಸಾಗರ ಕೖಷ್ಣಪ್ಪ, ಹಿರೇಕುಂಬಳಗುಂಟೆ ಉಮೇಶ್, ಬಿ.ಮಹೇಶ್, ಅಜ್ಜಯ್ಯ, ಎಂ.ಬಿ. ಶಿವರಾಜ, ಎಚ್.ಪರಶುರಾಮ್, ಕುಮಾರ್ ಮಾಕನಡಕು, ಜಿತೇಂದ್ರ, ಬಂಡೆ ರಾಘವೇಂದ್ರ, ಡಿ.ಸಂತೋಷಕುಮಾರ್, ಸಾಸಲವಾಡ ಶಿವಣ್ಣ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ವಸತಿ ನಿಲಯದ ವಾರ್ಡನ್ ಗಳು ಭಾಗವಹಿಸಿದ್ದರು.