ಬಿಸಿಯೂಟದ ಯೋಜನೆ ಹಿಂದಿನಂತೆ ಮುಂದುವರಿಸಲು ಒತ್ತಾಯ

KannadaprabhaNewsNetwork | Published : Oct 20, 2023 1:00 AM

ಸಾರಾಂಶ

ಬಿಸಿಯೂಟದ ಯೋಜನೆಯನ್ನು ಹಿಂದಿನಂತೆ ಮುಂದುವರಿಸಲು ಒತ್ತಾಯಿಸಿ ಶಿಕ್ಷಕರ ಸಂಘದಿಂದ ಮುಂಡರಗಿ ತಾಪಂ ಇಓ ಹಾಗೂ ಅಕ್ಷರದಾಸೋಹದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮುಂಡರಗಿ: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಗೆ ಬಿಡುಗಡೆಗೊಳ್ಳುವ ಅನುದಾನವನ್ನು ಮೊದಲಿನಂತೆ ಮುಖ್ಯಗುರುಗಳು ಹಾಗೂ ಬಿಸಿಯೂಟದ ಮುಖ್ಯ ಅಡುಗೆದಾರರ ಜಂಟಿ ಖಾತೆಯ ಮೂಲಕ ನಿರ್ವಹಿಸಲಾಗುತ್ತಿತ್ತು. ಆದರೆ ನೂತನ ಆದೇಶದನ್ವಯ ಅನುದಾನವನ್ನು ಶಾಲಾ ಮುಖ್ಯಗುರುಗಳು ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಜಂಟಿ ಖಾತೆಯ ಮೂಲಕ ನಿರ್ವಹಿಸಲು ಸೂಚಿಸಿದ್ದು, ಇದರಿಂದ ತೊಂದರೆಗಳಾಗುತ್ತಿದ್ದು, ಹಿಂದಿನಂತೆಯೇ ಮುಂದುವರಿಸಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ, ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಎಲ್ಲ ಮುಖ್ಯಗುರುಗಳು ಹಾಗೂ ಬಿಸಿಯೂಟದ ಮುಖ್ಯ ಅಡುಗೆಯವರ ಅಭಿಪ್ರಾಯದಂತೆ ಈ ಮೊದಲಿನಂತೆ ಶಾಲಾ ಮುಖ್ಯ ಗುರುಗಳು ಹಾಗೂ ಬಿಸಿಯೂಟದ ಮುಖ್ಯ ಅಡುಗೆಯವರ ಹೆಸರಿನಲ್ಲಿಯೇ ಜಂಟಿ ಖಾತೆ ನಿರ್ವಹಿಸುವಂತೆ ಮರು ಆದೇಶ ಹೊರಡಿಸಬೇಕೆಂದು ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.ಈ ವೇಳೆ ತಾಲೂಕು ಪ್ರಾ. ಶಾ.ಶಿ.ಸಂಘದ ಅಧ್ಯಕ್ಷ ಶಿವಕುಮಾರ್ ಸಜ್ಜನರ, ರವಿ ನಾಯಕ, ಎಚ್.ಜೆ. ಪವಾರ್, ಬಿ.ಕೆ. ಮಾದರ,ಎ.ಡಿ. ಬಂಡಿ, ಮನೋಹರ್, ಎಸ್.ಸಿ. ಹರ್ತಿ,ಎಸ್.ಡಿ. ಬಸೇಗೌಡ್ರ, ವಿ.ಆರ್. ಕುರಡಗಿ, ಮಹಾಂತೇಶ ಕೊನೇರಿ, ಎಂ.ಪಿ. ಶೀರನಹಳ್ಳಿ, ಎಫ್.ಎಂ. ಮಾನಶೆಟ್ಟಿ, ಪಿ.ಆರ್. ಮುನವಳ್ಳಿ, ಶಿವಪುತ್ರಪ್ಪ ಇಟಗಿ, ಬಸವರಾಜ ಹೂಗಾರ, ವಿ.ಬಿ. ಗದಗ, ರವಿ ಕನ್ನಳ್ಳಿ, ಆರ್.ಸಿ. ಪಟ್ಟೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article