ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಣ್ಯ, ಕೈಗಾರಿಕೆ ನಿಗಮ ಅಧ್ಯಕ್ಷರಾದ ಬಳಿಕ ಬಾರಿಗೆ ಜಿಲ್ಲೆಗೆ ಆಗಮಿಸಿದ ಬೇಳೂರು ಗೋಪಾಲಕೃಷ್ಣ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.ಬೆಂಗಳೂರಿನಿಂದ ಬಂದ ಬೇಳೂರು ಅವರನ್ನು ನಗರದ ಹೊರವಲಯದ ನಿದಿಗೆ ಕೆರೆ ಸಮೀಪ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೇಳೂರು ಅಭಿಮಾನಿಗಳು ಅವರನ್ನು ಬೃಹತ್ ರ್ಯಾಲಿ ಮೂಲಕ ಸ್ವಾಗತಿಸಿದರು. ನಗರಾದ್ಯಂತ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು.
ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಸಮೀಪ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವ ಕಾಂಗ್ರೆಸ್‍ನಿಂದ ಬೃಹತ್ ಸೇಬಿನ ಹಾರ ಹಾಕಲಾಯಿತು.ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಖಾನ್, ಯುವನಾಯಕ ಎಚ್.ಸಿ.ಯೋಗೇಶ್, ದೇವೇಂದ್ರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್, ಕೆ.ರಂಗನಾಥ್, ರೇಖಾ ರಂಗನಾಥ್, ಪ್ರವೀಣಕುಮಾರ್, ಕುಮಾರೇಶ್, ಪುಷ್ಪಕ್ ಕುಮಾರ್, ರಾಜೀವ್, ವಿನಯ್, ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕಲಗೋಡು ರತ್ನಾಕರ್, ಆರ್.ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಬೃಹತ್ ಹಾರ ಹಾಕಿ ಸನ್ಮಾನಿಸಿದರು.- - - -3ಎಸ್‌ಎಂಜಿಕೆಪಿ05:
ಶಿವಮೊಗ್ಗ ನಗರಕ್ಕೆ ಶನಿವಾರ ಆಗಮಿಸಿದ್ದ ಅರಣ್ಯ ಕೈಗಾರಿಕೆ ನಿಗಮ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.- - - ವರಿಷ್ಠರು ಲೋಕಸಭೆಗೆ ನಿಲ್ಲಬೇಡ ಎಂದಿದ್ದಾರೆ, ನಿಲ್ಲಲ್ಲ: ಬೇಳೂರು ಹೇಳಿಕೆಕನ್ನಡಪ್ರಭ ವಾರ್ತೆ ಶಿವಮೊಗ್ಗ ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯ್ಕೆ ಮಾಡಿದ ಯಾರೇ ಅಭ್ಯರ್ಥಿಯಾದರೂ, ಅವರ ಗೆಲುವಿಗಾಗಿ ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ನನಗೆ ನಿಲ್ಲಬೇಡ ಎಂದು ವರಿಷ್ಠರು ಹೇಳಿದ್ದಾರೆ. ಶಾಸಕನಾಗಿ ಇದ್ದೀಯಾ, ಶಾಸಕನಾಗಿ ಇರು ಅಂದಿದ್ದಾರೆ. ನಾನು ನಿಲ್ಲಲ್ಲ, ಶಾಸಕನಾಗಿ ಇರುತ್ತೇನೆ ಎಂದರು. ನನಗೆ ಪಕ್ಷ ನಿಗಮ ಮಂಡಳಿ ಸ್ಥಾನಮಾನ ನೀಡಿ, ಗೌರವಿಸಿದೆ. ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಪಕ್ಷ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ನನಗೆ ನೀಡಿದ ನಿಗಮದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಡಿಕೆಸು ಹೇಳಿಕೆ ವೈಭವೀಕರಣ ಬೇಡ: ಡಿ.ಕೆ.ಸುರೇಶ್ ಹೇಳಿಕೆ ಅವರ ವೈಯಕ್ತಿಕ. ಆ ಹೇಳಿಕೆಗೆ ನನ್ನ ಸಹಮತವಿಲ್ಲ. ಅದೇ ಹೇಳಿಕೆಯನ್ನು ವೈಭವೀಕರಿಸುವುದು ಬೇಡ. ಬಿಜೆಪಿಯವರು ಅನಾವಶ್ಯಕವಾಗಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸಂಸದ ಅನಂತ್‍ಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತನ್ನಾಡಿದ್ದರು. ಶಾಸಕ ಯತ್ನಾಳ್ ಪಕ್ಷದ ನಾಯಕರ ಮೇಲೆ ₹40 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ್ದರು. ಬಿಜೆಪಿ ಅವರಿಬ್ಬರನ್ನು ಪಕ್ಷದಿಂದ ಹೊರಕ್ಕೆ ಹಾಕಿಲ್ಲ ಏಕೆ? ಅವರಿಗೇನಾದರೂ ನೈತಿಕತೆ ಇದ್ದರೆ ಮೊದಲು ಪಕ್ಷದಿಂದ ಅವರಿಬ್ಬರನ್ನು ಉಚ್ಛಾಟಿಸಲಿ ಎಂದು ಕಿಡಿಕಾರಿದರು. ಪಕ್ಷದ ಶಿಸ್ತಿನ ಸಿಪಾಯಿ: ಖರ್ಗೆಯವರು ಬಾಯಿತಪ್ಪಿ ರಾಜ್ಯ ಸಭೆಯಲ್ಲಿ ಬಿಜೆಪಿಗೆ 400 ಸ್ಥಾನ ಎಂದು ಹೇಳಿದ್ದಾರೆ. ಅದನ್ನು ದೊಡ್ಡದು ಮಾಡುವುದು ಬೇಡ. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರು ಮುಖ್ಯಮಂತ್ರಿ ಆಗಬಹುದು. ನಾನು ಕೂಡ ಆಗಲು ಅವಕಾಶವಿದೆ. 20 ತಿಂಗಳು ಮಾತ್ರ ಒಬ್ಬರಿಗೆ ಮಂತ್ರಿಗಿರಿ ಕೊಡಬೇಕು ಎಂಬ ಯಾವುದೇ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ. ಪಕ್ಷದ ಶಿಸ್ತಿನ ಶಿಫಾಯಿ. ನನಗೆ ಯಾವುದೇ ಅಸಮಧಾನವಿಲ್ಲ ಎಂದರು. ಬಂಡೆ ಹೊಡೆಯುವವರು ಸಂಸದರಾಗಿದ್ದಾರೆ ಎಂಬುವುದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಅಪ್ಪನ ಹೆಸರಿನಲ್ಲಿ ಬೆಳಕಿಗೆ ಬಂದವರು. ಬಂಡೆ ಹೊಡೆಯುವವರು, ಕೂಲಿ ಕಾರ್ಮಿಕರು. ಅವರು ಮಂತ್ರಿಗಳು, ಸಂಸದರಾದರೆ ತಪ್ಪೇನು? ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಪಕ್ಷದ ನಾಯಕರು ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಚ್.ಸಿ.ಯೋಗೀಶ್, ದೇವೇಂದ್ರಪ್ಪ, ಪಿ.ಎಸ್. ಗಿರೀಶ್‍ರಾವ್, ವಿಶ್ವನಾಥ್ ಕಾಶಿ ಮತ್ತಿತರರು ಇದ್ದರು. - - - ಬಾಕ್ಸ್‌ಅರಣ್ಯ, ಕೈಗಾರಿಕಾ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಾಗರ: ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶುಕ್ರವಾರ ಶುಭ ಮುಹೂರ್ತದಲ್ಲಿ ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಕಚೇರಿ ಪೂಜೆ ನಡೆಸಿದರು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್, ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ್ ಗೌಡ, ನಟ ಶ್ರೀನಗರ ಕಿಟ್ಟಿ, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಸುರೇಶ್ ಬಾಬು, ಹೊಳೆಯಪ್ಪ, ದಿನೇಶ, ಆನಂದ, ಅಶೋಕ ಬೇಳೂರು, ಅನಿತಾಕುಮಾರಿ, ಪ್ರಫುಲ್ಲಾ ಮಧುಕರ್ ಸೇರಿದಂತೆ ಹತ್ತಾರು ಸ್ಥಳೀಯ ಮುಖಂಡರು, ಗಣ್ಯರು ಹಾಜರಿದ್ದು ಶಾಸಕರಿಗೆ ಶುಭ ಕೋರಿದರು.- - - ಕೋಟ್‌ಮಾಜಿ ಉಪ ಪ್ರಧಾನಿ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ದೊರೆತಿದೆ. ರಾಮ ಮಂದಿರವನ್ನು ಮೋದಿ ಉದ್ಘಾಟನೆ ಮಾಡಿ ಭಾರತ ರತ್ನ ಅವರಿಗೆ ಕೊಟ್ಟಿದ್ದಾರೆ. ಹೋರಾಟ ಅಡ್ವಾಣಿ ಅವರದ್ದು, ಕಿರೀಟ ಮೋದಿ ಅವರದ್ದು- ಗೋಪಾಲಕೃಷ್ಣ ಬೇಳೂರು, ಶಾಸಕ - - - -3ಎಸ್‌ಎಂಜಿಕೆಪಿ02: ಶಾಸಕ ಬೇಳೂರು ಗೋಪಾಲಕೃಷ್ಣ-3ಕೆ.ಎಸ್.ಎ.ಜಿ.2: ಅರಣ್ಯ, ಕೈಗಾರಿಕಾ ನಿಗಮ ಅಧ್ಯಕ್ಷರಾಗಿ ಬೇಳೂರು ಅವರು ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಸ್ವೀಕರಿಸಿ, ಪೂಜೆ ಸಲ್ಲಿಸಿದರು.
- - - -3ಎಸ್‌ಎಂಜಿಕೆಪಿ06: