ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಈ ಹಿನ್ನಲೆಯಲ್ಲಿ ಬಿಜೆಪಿಯ ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಶಾಸಕನಾಗುವ ಅವಕಾಶ ಮಾಡಿ ಕೊಟ್ಟಿದ್ದರಿಂದ ಅಲ್ಲಿಂದ ಇಲ್ಲಿವರೆಗೂ ಕ್ಷೇತ್ರದ ಮುಖಂಡರು ಜೊತೆಗೆ ಮತದಾರರು ಆಶೀರ್ವಾದ ಮಾಡಿದರು. ಆ ದಿನದಿಂದ ಇಲ್ಲಿವರೆಗೂ ಜನರ ಸೇವೆ ಮಾಡಲು ಅವಕಾಶ ದೊರಕಿದೆ ಇದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವುಕರಾಗಿ ಮಾತನಾಡಿದರು.
ಸುಮಾರು 50 ವರ್ಷದ ಹಿಂದೆ ಯುವಕನಾಗಿ ಬಾಗಲಗುಂಟೆಗೆ ಬಂದಾಗ ಗ್ರಾಮದ ಜನತೆ ಎಲ್ಲಾ ರೀತಿ ಸಹಾಯ ಸಹಕಾರ ಕೊಟ್ಟು ಪ್ರೋತ್ಸಾಹಿಸಿದ್ದರಿಂದ ನಾನು ಸಮಾಜದಲ್ಲಿ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ಮೂರು ಭಾರಿ ಶಾಸಕನಾಗಿ ಅಲ್ಲಿಂದ ಇಲ್ಲಿವರೆಗೂ ಕ್ಷೇತ್ರದ ಎಲ್ಲಾ ದೇವಸ್ಥಾನಕ್ಕೆ ಭೇಟಿ ಮಾಡಿ ಆಶೀರ್ವಾದ ಪಡೆದು ಸೇವೆ ಮಾಡುತ್ತೀದ್ದೇನೆ ಎಂದರು.ಸುಜಾತ ಮುನಿರಾಜು ಮಾತನಾಡಿ, ನನ್ನ ಬದುಕಿನ ಆಶ್ರಯದಾತರಾಗಿ, ಮಕ್ಕಳು,ಅಳಿಯಂದಿರು,ಮೊಮ್ಮಕ್ಕಳ ಜೊತೆಗೆ ಎಲ್ಲಾ ಸೌಲಭ್ಯಕ್ಕೆ ಕಾರಣರದವರು ನನ್ನ ಪತಿ ಮುನಿರಾಜು ನಮ್ಮ ಕುಟುಂಬದ ಮನೆ ದೇವರು. ಅವರ ಈ ಬೆಳವಣಿಗೆಗೆ ಕಾರಣರಾದ ನೀವೇ ನಮಗೆ ದೇವರು ಎಂದರು. ನಿಮ್ಮ ಸೇವೆಯನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ನಮ್ಮ ಕುಟುಂಬದವರು ಸದಾ ನಿಮ್ಮ ಸೇವೆ ಮಾಡುವ ಭಾಗ್ಯ ದೊರೆತಿದ್ದಕ್ಕಾಗಿ ಧನ್ಯವಾದಗಳನ್ನು, ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು. ಈ ವೇಳೆ ಬಿಜೆಪಿಯ ಹಿರಿಯ, ಕಿರಿಯ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.