ಸಾಹಿತ್ಯದ ಓದಿನಿಂದ ಜ್ಞಾನ, ಮನೋಬಲ ವೃದ್ಧಿ

KannadaprabhaNewsNetwork |  
Published : May 28, 2025, 12:02 AM IST
‘ಮರೆಯದ ಮಾತುಗಳು’ ಕೃತಿ ಲೋಕಾರ್ಪಣೆ | Kannada Prabha

ಸಾರಾಂಶ

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಅಮೃತ ಪ್ರಕಾಶನದ 44 ನೇ ಸರಣಿ ಕೃತಿ ವಜ್ರರಾವ್ ಅವರ ಲೇಖನಗಳ ಸಂಕಲನ ‘ಮರೆಯದ ಮಾತುಗಳು’ ಕೃತಿ ಲೋಕಾರ್ಪಣೆಗೊಂಡಿತು.

‘ಮರೆಯದ ಮಾತುಗಳು’ ಕೃತಿ ಬಿಡುಗಡೆಗೊಳಿಸಿ ಎಸ್.ಎಸ್ ನಾಯಕ್ ಪ್ರತಿಪಾದನೆ

ಕನ್ನಡಪ್ರಭ ವಾರ್ತೆ ಮಂಗಳೂರು

ಸಾಹಿತ್ಯ ಕೃತಿಗಳ ಓದಿನಿಂದ ಓದುಗರ ಜ್ಞಾನ ಹಾಗೂ ಮನೋಬಲ ವೃದ್ಧಿಯಾಗುತ್ತದೆ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಮಂಗಳೂರು ಮಾಜಿ ಅಧ್ಯಕ್ಷ, ಲೇಖಕ ಎಸ್.ಎಸ್ ನಾಯಕ್ ಹೇಳಿದರು.ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಅಮೃತ ಪ್ರಕಾಶನದ 44 ನೇ ಸರಣಿ ಕೃತಿ ವಜ್ರರಾವ್ ಅವರ ಲೇಖನಗಳ ಸಂಕಲನ ‘ಮರೆಯದ ಮಾತುಗಳು’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಉತ್ತಮ ವ್ಯಕ್ತಿ ಕಾವ್ಯ, ಶಾಸ್ತ್ರ, ಉತ್ತಮ ಕ್ರೀಡೆ, ಓದು, ಸತ್ಸಂಗದಿಂದ ಕಾಲ ಕಳೆಯುತ್ತಾನೆ. ಮೂರ್ಖ ವ್ಯಕ್ತಿ ದೀರ್ಘ ಕಾಲ ನಿದ್ರೆ, ಸೋಮಾರಿತನದಿಂದ ಕಾಲ ದೂಡುತ್ತಾನೆ ಎನ್ನುತ್ತಾರೆ ಬಲ್ಲವರು. ದುರಾದೃಷ್ಟವೆಂದರೆ ಗಂಭೀರ ಓದುಗರ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಸಾಹಿತ್ಯದಲ್ಲೂ ಎಡ- ಬಲ ಎನ್ನುವ ವಾದಗಳು ಕೂಡ ಕಾಣಿಸುತ್ತಿವೆ. ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ಅವರು ಹೇಳಿದ ರೀತಿಯಲ್ಲಿ ಸ್ವಂತ ಬದುಕಿನಲ್ಲಿ ನಮಗೆ ಸರಿಯಾಗಿದೆ ಎಂದು ಮನಸ್ಸು ಹೇಳಿದ್ದನ್ನು ಮಾತ್ರ ಸ್ವೀಕರಿಸಬೇಕು ಎಂದು ಅವರು ಹೇಳಿದರು.80 ವರ್ಷದ ಲೇಖಕಿ ವಜ್ರರಾವ್ ಅವರ ಹೊಸ ಕೃತಿಯನ್ನು ನಾನು ಓದಿದ್ದು, ಅವರ ಸುದೀರ್ಘ ಜೀವನ ಅವಧಿಯ ಅನುಭವ, ಅಧ್ಯಯನವನ್ನು ಕೃತಿಯಲ್ಲಿ ಕಾಣಬಹುದು. ಆದ್ದರಿಂದ ಇದು ಮಹತ್ವದ ಕೃತಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಹರಿಕಥಾ ಪರಿಷತ್ ಮಂಗಳೂರು ಅಧ್ಯಕ್ಷ ಮಹಾಬಲ ಶೆಟ್ಟಿ, ಸಾಹಿತ್ಯ, ಲೇಖನ ಬರೆಯುವುದು ಅಂದರೆ ಒಂದು ಸೃಷ್ಟಿ. ಪ್ರತಿ ಕೃತಿಯಲ್ಲಿ ಒಂದು ಸಂದೇಶವಿರುತ್ತದೆ. ವಜ್ರರಾವ್ ಅವರ ಬದುಕು ಹಾಗೂ ಸಾಹಿತ್ಯದಲ್ಲಿ ಅಪಾರವಾದ ಜೀವನೋತ್ಸಾಹ ಕಾಣಬಹುದು ಎಮದರು.ಪ್ರಕಾಶಕಿ ಡಾ.ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕವಯತ್ರಿ ಸುರೇಖಾ ಯಾಳವಾರ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''