ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪರಿಶಿಷ್ಟ ಜಾತಿ ರೈತ ಸಂಘದ ಕರ್ನಾಟಕ ಚಂದಕವಾಡಿ ಹೋಬಳಿ ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ೨೫ ಮಂದಿ ರೈತರನ್ನು ನಿರ್ದೇಶಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿಕೊಳ್ಳಲಾಯಿತು.ತಾಲೂಕಿನ ಚಂದಕವಾಡಿ ಡಾ.ಅಂಬೇಡ್ಕರ್ ಭವನದಲ್ಲಿ ರವಿವಾರ ನಡೆದ ಚಂದಕವಾಡಿ ಹೋಬಳಿ ವ್ಯಾಪ್ತಿಯ ೨೫ ಗ್ರಾಮಗಳಿಂದ ಆಗಮಿಸಿದ್ದ ಪರಿಶಿಷ್ಟ ಜಾತಿ ರೈತ ಮುಖಂಡರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರು. ಸಭೆಯಲ್ಲಿದ್ದ ಪ್ರಮುಖ ಚಂದಕವಾಡಿ ಹೋಬಳಿ ವ್ಯಾಪ್ತಿಯ೨೫ ಗ್ರಾಮಗಳಿಂದ ರೈತ ಮುಖಂಡರು, ಯಜಮಾನರು ಆಗಮಿಸಿದ್ದಾರೆ. ಅವರ ಕಡೆಯಿಂದ ಒಬ್ಬೊಬ್ಬರು ನಿರ್ದೇಶಕರನ್ನು ನೇಮಕ ಮಾಡಿಕೊಂಡು ಪೂರ್ಣ ಪ್ರಮಾಣದಲ್ಲಿ ಸಂಘ ರಚನೆ ಮಾಡಿ ಮುಂದಿನ ಕಾರ್ಯಯೋಜನೆ ರೂಪಿಸಿಕೊಳ್ಳಲು ಸೂಚನೆ ಕೊಟ್ಟರು. ಅಟ್ಟುಗುಳಿಪುರ ಗ್ರಾಪಂ ಉಪಾಧ್ಯಕ್ಷ ಸಿದ್ದಯ್ಯನಪುರ ಸೋಮಣ್ಣ ಮಾತನಾಡಿ, ಮೊದಲು ನಮ್ಮ ಗ್ರಾಮದ ೨೫ ರೈತರು ಸೇರಿ ರೈತ ಸಂಘ ರಚನೆ ಮಾಡಬೇಕೆಂಬ ನಮ್ಮ ಚರ್ಚೆ ಹುಟ್ಟಿ ಹಾಕಿದೆವು. ಈ ಸಂಘ ರಚನೆಗೆ ಸಿದ್ದಯ್ಯನಪುರ ಗ್ರಾಮದಲ್ಲಿಯೇ ಆರಂಭವಾಗಲಿ ಎಂಬ ಉದ್ದೇಶದಿಂದ ಆಸಕ್ತ ೨೦ಕ್ಕೂ ಹೆಚ್ಚು ರೈತರು ವಿವಿಧ ಗ್ರಾಮಗಳಿಗೆ ತೆರೆಳಿ ಕರ ಪತ್ರಗಳನ್ನು ನೀಡಿ, ನಮ್ಮ ಧ್ಯೇಯ ಉದ್ದೇಶಗಳನ್ನು ಹೇಳಿದ ಬಳಿಕ ಕಳೆದ ಅ.೨೦ ರಂದು ದಡದಹಳ್ಳಿಯಲ್ಲಿ ಎಲ್ಲರೂ ಸೇರಿ ಸಭೆ ಮಾಡಿ, ದಿನಾಂಕ ನಿಗದಿ ಪಡಿಸಿ, ಇಂದು ಪೂರ್ಣ ಪ್ರಮಾಣದಲ್ಲಿ ರೈತ ಸಂಘ ಅಸ್ತಿತ್ವಕ್ಕೆ ಬಂದಿದೆ. ಮುಂದೆ ಚಂದಕವಾಡಿಯಿಂದ ಆರಂಭವಾಗಿರುವ ಸಂಘಟನೆಯು ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ವಿಸ್ತರಣೆಗೊಂಡು ನಮ್ಮ ಸಮುದಾಯದ ರೈತ ಬಂಧುಗಳಿಗೆ ಸವಲತ್ತು ಗಳು ದೊರೆಯಲಿ ಎಂದು ಆಶಿಸಿದರು. ಗ್ರಾಮದ ಯಜಮಾನ ನಾಗರಾಜು ನೂತನ ನಿರ್ದೇಶಕರಿಗೆ ಹಸಿರು ಶಾಲು ಹೊದಿಸಿ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. ಪ್ರತಿ ಗ್ರಾಮದಲ್ಲಿ ೧೦ ಮಂದಿ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕು. ತಲಾ ೫೦೦ರು.ನಂತೆ ಸದಸ್ಯತ್ವ ಶುಲ್ಕ ಪಡೆದು ಸಂಘಟನೆಯಲ್ಲಿ ತೊಡಗಿಸಿಕೊಂಡು ಈ ಭಾಗ ರೈತರಿಗೆ ಸರ್ಕಾರದಿಂದ ದೊರೆಯುವ ಸವಲತ್ತು ಹಾಗೂ ಇತರೇ ಕುಂದುಕೊರತೆ ಬಗೆಹರಿಸಲು ತಮ್ಮ ಹಸಿರು ಪಡೆ ಸರ್ವ ಸನ್ನದ್ಧವಾಗಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.ಸಿದ್ದಯ್ಯನಪುರ ಗೋವಿಂದರಾಜು ಮಾತನಾಡಿ, ಎಸ್ಸಿ ರೈತ ಸಂಘಟನೆ ಚಂದಕವಾಡಿ ಹೋಬಳಿ ವ್ಯಾಪ್ತಿಯಲ್ಲಿ ರಚನೆಗೊಂಡಿದ್ದು, ಇಂದಿನಿಂದ ತಾವೆಲ್ಲರೂ ರೈತ ಸಂಘಟನೆಯ ಪ್ರತಿನಿಧಿಗಳು ಹಸಿರು ಶಾಲು ಹಾಕುವ ಮೂಲಕ ನಿಮ್ಮೆಲ್ಲರಿಗೂ ಸಂಘಟನೆ ಶಕ್ತಿ ನೀಡಿದೆ. ಹಸಿರು ಉಸಿರು, ರೈತರ ಹಕ್ಕುಗಳ ಹೋರಾಟಕ್ಕೆ ನಾವು ಬದ್ಧ ಎಂಬ ಶಪಥದೊಂದಿಗೆ ಹಸಿರು ಟವಲ್ ಹೆಗಲಿಗೇರಿಸಿಕೊಂಡು ರೈತರ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
೨೫ ಮಂದಿ ನಿರ್ದೇಶಕರಾಗಿ ಆಯ್ಕೆ:ಸಿದ್ದಯ್ಯನಪುರ ಡಾ.ಶಿವಕುಮಾರ್, ದಡದಹಳ್ಳಿ ಮೂರ್ತಿ, ಕುಂಬೇಶ್ವರ ಕಾಲೋನಿ ಸ್ವಾಮಿ, ಹೆಬ್ಬಸೂರು ಆರ್. ಮಹೇಶ್, ಅಯ್ಯನಪುರ ನಾಗೇಂದ್ರ, ಅರಳೀಪುರ ಚಂದ್ರಶೇಖರ್, ಮಲ್ಲದೇವನಹಳ್ಳಿ ವಿಜಯಕುಮಾರ್, ಹೊಂಡರಬಾಳು ಕುಮಾರಸ್ವಾಮಿ, ನಲ್ಲೂರು ಎ ನಂಜಯ್ಯ, ನಾಗವಳ್ಳಿ ರಂಗಸ್ವಾಮಿ, ಜ್ಯಿಜ್ಯೋತಿಗೌಡನಪುರ ಲಿಂಗರಾಜು, ಕಾಗಲವಾಡಿ ರುದ್ರೇಶ್, ಅಮ್ಮನಪುರ ರಂಗಸ್ವಾಮಿ,ಅಲೂರು ಎ.ಎಚ್. ಮಲ್ಲಣ್ಣ, ಕರಿಯನಕಟ್ಟೆ ಮಹದೇವಸ್ವಾಮಿ, ಹುರಳಿನಂಜನಪುರ ನಾಗರಾಜು, ಬಸಪ್ಪನಪಾಳ್ಯ ಚಿನ್ನಸ್ವಾಮಿ, ಚೆಕ್ಕಪೋಸ್ಟ್ ರಾಜೇಂದ್ರ, ಸರಗೂರು ಬಿ. ಸೋಮಶೇಖರ್, ಚಿಕ್ಕಮೂಡಹಳ್ಳಿ ಮಹದೇವಸ್ವಾಮಿ, ಕುಳ್ಳೂರು ಮಹದೇವಯ್ಯ, ಹೊಂಗಲವಾಡಿ ಗುರುಸಿದ್ದಯ್ಯ, ಹೊಂಗಲವಾಡಿ೨ ನಾರಾಯಣಸ್ವಾಮಿ, ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಮುಖಂಡರಾದ ದಡದಹಳ್ಳಿ ಗೋವಿಂದರಾಜು, ಗೋವಿಂದರಾಜು, ಗ್ರಾಪಂ ಸದಸ್ಯರಾದ ಮಂಜು, ಬಸವಣ್ಣ, ಮಹದೇವಸ್ವಾಮಿ, ಮಂಡ್ಯ ಮಹದೇವಯ್ಯ, ಶಿವಬಸವಣ್ಣ, ಮಧು, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾದ್ಯಕ್ಷ ಚನ್ನಂಜಯ್ಯ, ಮಹೇಶ್, ಕೆಂಪಣ್ಣ, ಶಿವಣ್ಣ, ಸಿ.ಎಸ್.ಮಹದೇವಸ್ವಾಮಿ, ಯ. ನಾಗರಾಜು, ಸೋಮಣ್ಣ, ಬಸವಣ್ಣ, ಶಿವಬಸಯ್ಯ, ಮಹದೇವಸ್ವಾಮಿ, ರಂಗಸ್ವಾಮಿ, ಪ್ರಭುಸ್ವಾಮಿ, ಕುಂಬಯ್ಯ, ನಾಗರಾಜು, ಮುದ್ದಮಲ್ಲಯ್ಯ, ಹೆಬ್ಬಸೂರು ಸೋಮಣ್ಣ, ಮರಿಸ್ವಾಮಿ, ಗೌತಮ ಕಾಲೋನಿಯ ಗುರುಸ್ವಾಮಿ, ಮಹದೇವಯ್ಯ ಸೇರಿದಂತೆ ಚಂದಕವಾಡಿ ಸುತ್ತಲಿನ ಗ್ರಾಮಗಳ ಮುಖಂಡರು, ಯಜಮಾನರು ಭಾಗವಹಿಸಿದ್ದರು.