ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ವೆಂಕಟರಮಣಪ್ಪ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಾಹ್ನ 3ಗಂಟೆ ಸಮಯದಲ್ಲಿ ತಾಲೂಕಿನ ಹನುಮಂತನಹಳ್ಳಿ ತೋಟದಲ್ಲಿ ಸಾವಿರಾರು ಸಂಖ್ಯೆಯ ಜನರ ಮಧ್ಯೆ ಸರ್ಕಾರಿ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರೆವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಪಾವಗಡ
ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ವೆಂಕಟರಮಣಪ್ಪ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಾಹ್ನ 3ಗಂಟೆ ಸಮಯದಲ್ಲಿ ತಾಲೂಕಿನ ಹನುಮಂತನಹಳ್ಳಿ ತೋಟದಲ್ಲಿ ಸಾವಿರಾರು ಸಂಖ್ಯೆಯ ಜನರ ಮಧ್ಯೆ ಸರ್ಕಾರಿ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರೆವೇರಿಸಲಾಯಿತು.ಹಂಗಾಮಿ ಸಿಎಂ ಸಿದ್ದರಾಮಯ್ಯ ಸಚಿವರಾದ ಕೆ.ಜೆ.ಜಾರ್ಜ್ ಜಮೀರ್ ತಾಲೂಕಿನ ಹನುಮಂತನಹಳ್ಳಿಯ ತೋಟದ ಮನೆಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ವಾಪಸ್ಸಾದ ಬಳಿಕ ತೋಟದ ಮನೆಯಿಂದ ಸಂಪ್ರಾದಾಯ ಬದ್ಧವಾಗಿ ಪಾರ್ಥಿವ ಶರೀರವನ್ನು ಹೊತ್ತು ತಂದು,ತೋಟದಲ್ಲಿ ವಿಧಿವಿಧಾನಗಳೊಂದಿಗೆ ಶವಸಂಸ್ಕಾರ ನೆರೆವೇರಿಸಲಾಯಿತು. ಪುತ್ರರಾದ ಎಚ್.ವಿ.ಕುಮಾರಸ್ವಾಮಿ,ಶಾಸಕ ಎಚ್.ವಿ.ವೆಂಕಟೇಶ್ ಸೇರಿದಂತೆ ಅನೇಕರು ಶವದ ಚಟ್ಟಕ್ಕೆ ಹೆಗಲುಕೊಟ್ಟರು. ಈ ವೇಳೆ ಸೇರಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ವೆಂಕಟರಮಣಪ್ಪ ಪರ ಜೈಕಾರ ಮೊಳಗಿಸಿ, ಮತ್ತೆ ಹುಟ್ಟಿ ಬನ್ನಿ ಎಂದು ಘೋಷಣೆ ಕೂಗಿ,ನಮ್ಮ ನೆಚ್ಚಿನ ನಾಯಕ ಇನ್ನಿಲ್ಲ ಎಂದು ಕಂಬನಿ ಮಿಡಿದರು.
ಮಾಜಿ ಸಚಿವರಾದ ಕೆ.ಎನ್.ರಾಜಣ್ಣ,ಶಾಂತಲರಾಜಣ್ಣ,ಪುತ್ರ ವಿಧಾನ ಪರಿಷತ್ ಸದಸ್ಯ,ಆರ್.ರಾಜೇಂದ್ರ,ಮಾಜಿ ಸಚಿವ ರಘುವೀರರೆಡ್ಡಿ, ಪುತ್ರಿ ಪದ್ಮಾವತಮ್ಮ , ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು, ಎಸ್‌ಎಸ್‌ಕೆ ಸಂಘದ ಅಧ್ಯಕ್ಷರಾದ ಅನಿಲ್‌ಕುಮಾರ್, ಮುಖಂಡರಾದ ಎ.ಶಂಕರರೆಡ್ಡಿ, ಬತ್ತಿನೇನಿ ನಾಗೇಂದ್ರರಾವ್, ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ, ಶೇಷಗಿರಿ, ಗುಮ್ಮಘಟ್ಟ ಆದಿನಾರಾಯಣಪ್ಪ, ಶ್ರೀನಿವಾಸಲು, ಪುರಸಭೆ ಮಾಜಿ ಅಧ್ಯಕ್ಷ ಪಿ.ರಾಜೇಶ್, ಕಲ್ಪ ವೃಕ್ಷ ರವಿ, ವೆಂಕಟಮ್ಮನಹಳ್ಳಿ ಚನ್ನಕೇಶವ, ಬೊಮ್ಮಯ್ಯ, ಐ.ಜಿ.ನಾಗರಾಜ್,ಗುತ್ತಿಗೆದಾರ ಹನುಮಂತರಾಯಪ್ಪ, ಬಾಲಸುಬ್ರಮಣ್ಯಂ, ಷಾಬಾಬು, ರಿಜ್ವಾನ್ ಉಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸುಜಿತ್, ಪದಾಧಿಕಾರಿಗಳಾದ ಚಿತ್ತಗಾನಹಳ್ಳಿ ಚಂದ್ರು, ವಿ.ಎಚ್.ಪಾಳ್ಯ ಪಾಪಣ್ಣ, ಮಣಿ,ಕೆ.ರಾಮಪುರ ರಮೇಶ್, ಭಾಸ್ಕರ್, ವಿ.ಎಚ್.ಪಾಳ್ಯ ಹರೀಶ್, ಹನುಮೇಶ್ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.