ಭಾರತೀನಗರದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : Apr 06, 2025, 01:49 AM IST
5ಕೆಎಂಎನ್ ಡಿ21 | Kannada Prabha

ಸಾರಾಂಶ

ಡಾ.ಕೆ.ಅನ್ನದಾನಿ ಅವರು ರಾಜಕೀಯವಾಗಿ ಮತ್ತಷ್ಟು ಪ್ರಗತಿ ಸಾಧಿಸಲು ಅವರ ಜತೆ ಜೆಡಿಎಸ್ ಬಳಗ ಸದಾ ಇರುತ್ತದೆ. ಮಳವಳ್ಳಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಅವರಿಗೆ ದೇವರು ಶಕ್ತಿ ನೀಡಲಿ. ಅನ್ನದಾನಿ ಅವರು ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದಾಗ ನೂರಾರು ಜನಪರ ಯೋಜನೆ ಜಾರಿಗೆ ತಂದು ಕೆಲಸ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹುಟ್ಟುಹಬ್ಬವನ್ನು ಅವರ ಕಟ್ಟ ಅಭಿಮಾನಿ ಜೆಡಿಎಸ್ ಯುವ ಘಟಕದ ತಾಲೂಕು ಮಾಜಿ ಅಧ್ಯಕ್ಷ ಅಣ್ಣೂರು ನವೀನ್ ನೇತೃತ್ವದಲ್ಲಿ ಭಾರತೀನಗರದಲ್ಲಿ ಆಚರಿಸಲಾಯಿತು.

ಈ ವೇಳೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹಾರ ಹಾಕಿ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿದರು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಳಿಕ ಮಾತನಾಡಿ ಅಣ್ಣೂರು ನವೀನ್, ಅನ್ನದಾನಿ ಅವರು ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದಾಗ ನೂರಾರು ಜನಪರ ಯೋಜನೆ ಜಾರಿಗೆ ತಂದು ಕೆಲಸ ಮಾಡಿದ್ದಾರೆ ಎಂದರು.

ಡಾ.ಕೆ.ಅನ್ನದಾನಿ ಅವರು ರಾಜಕೀಯವಾಗಿ ಮತ್ತಷ್ಟು ಪ್ರಗತಿ ಸಾಧಿಸಲು ಅವರ ಜತೆ ಜೆಡಿಎಸ್ ಬಳಗ ಸದಾ ಇರುತ್ತದೆ. ಮಳವಳ್ಳಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಅವರಿಗೆ ದೇವರು ಶಕ್ತಿ ನೀಡಲಿ ಎಂದರು.

ಈ ವೇಳೆ ಮುಖಂಡರಾದ ಗುರುದೇವರಹಳ್ಳಿ ಅರವಿಂದ್, ನಗರಕೆರೆ ಸಂದೀಪ್, ಹೊಂಡಾ ಸಿದ್ದೇಗೌಡ, ಅಣ್ಣೂರು ವಿನು, ಸಿದ್ದರಾಮೇಗೌಡ,ಮನೋಹರ್, ಅಣ್ಣೂರು ಸುಂದ್ರ, ಮನು, ರಂಗೋಲಿ ಲೋಕಿ ಸೇರಿದಂತೆ ಮತ್ತಿತರಿದ್ದರು.

ಭಾರೀ ಮಳೆ, ಗಾಳಿ ಮರ ಬಿದ್ದು ಪಾರಂಪರಿಕ ಕಟ್ಟಡಕ್ಕೆ ಹಾನಿ

ಶ್ರೀರಂಗಪಟ್ಟಣ:

ವಿಶ್ವ ವಿಖ್ಯಾತ ಕೆಆರ್‌ಎಸ್ ಬೃಂದಾವನದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ, ಗಾಳಿಗೆ ಗ್ರಾಮದ ನೂರಾರು ವರ್ಷದ ಬೃಹತ್ ಗಾತ್ರ ಮರ ಉರುಳಿ ಬಿದ್ದು ಪಾರಂಪರಿಕ ಕಟ್ಟಡತ್ತೆ ಸಂಪೂರ್ಣವಾಗಿ ಹಾನಿಯಾಗಿದೆ.

ಕೆಆರ್‌ಎಸ್‌ನ ದಕ್ಷಿಣ ಬೃಂದಾವನದ ಉದ್ಯಾನವನದಲ್ಲಿದ್ದ ನೂರಾರು ವರ್ಷದ ಹಳೆಯ ಬೃಹತ್ ಜಾಲಿ ಮರ ಮಳೆ, ಗಾಳಿಯ ರಭಸಕ್ಕೆ ಸಿಲುಕಿ ಬುಡ ಸಮೇತ ಉರುಳಿದ್ದು, ಪಕ್ಕದಲ್ಲೇ ಇದ್ದ ಉದ್ಯಾನವನದ ಸುಂದರ ಪಾರಂಪಿರಿಕ ಕಟ್ಟಡ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಈ ಕಟ್ಟಡವನ್ನು ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಮಾಡುವ ಸಮಯದಲ್ಲಿ ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಿಸಿದ್ದರು ಎನ್ನಲಾಗಿದೆ. ಈ ಕಟ್ಟಡ ಪ್ರವಾಸಿಗರು ಮಳೆಗಾಲದಲ್ಲಿ ಬಂದ ವೇಳೆ ತಂಗುದಾಣವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಇದೀಗ ಆ ಕಟ್ಟಡ ಸಂಪೂರ್ಣ ಹಾನಿಗೊಂಡು ನೆಲಕಚ್ಚಿದೆ.

ಸದ್ಯ ಆ ವೇಳೆ ಕಟ್ಟಡದ ಬಳಿ ಯಾವ ಪ್ರವಾಸಿಗರು ಇಲ್ಲದಿರುವುದರಿಂದ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ಮಾಹಿತಿ ತಿಳಿದ ನೀರಾವರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮರ ಪರಿಶೀಲಿಸಿ, ಮರವನ್ನು ಹರಾಜು ನಡೆಸಿ ತೆರವು ಕಾರ್ಯ ನಡೆಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...