ನಿಪ್ಪಾಣಿ ಕ್ಷೇತ್ರದ ಮಾಜಿ ಶಾಸಕ ಕಾಕಾಸಾಹೇಬ್‌ ಇನ್ನಿಲ್ಲ

KannadaprabhaNewsNetwork |  
Published : Jun 19, 2025, 12:35 AM IST
ಕಕಕಕಕ | Kannada Prabha

ಸಾರಾಂಶ

ನಿಪ್ಪಾಣಿ ಕ್ಷೇತ್ರದ ಮಾಜಿ ಶಾಸಕ, ಕ್ಷೇತ್ರದ ಹಸಿರು ಕ್ರಾಂತಿಯ ಶಿಲ್ಪಿ ಕಾಕಾಸಾಹೇಬ್ ಪಾಂಡುರಂಗ ಪಾಟೀಲ್ (70) ಅನಾರೋಗ್ಯ ನಿಮಿತ್ತ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಅಸುನೀಗಿದರು. ಮೃತರು ಪುತ್ರ ಸುಜಯ್, ಸೊಸೆ ಉಮಾ, ಮೊಮ್ಮಗ, ಮೊಮ್ಮಗಳು, ಮಗಳು ಸುಪ್ರಿಯಾ, ಅಳಿಯ ದತ್ತಕುಮಾರ್, ಇಬ್ಬರು ಸಹೋದರರು, ಸೋದರ ಮಾವ, ಮೂವರು ಸಹೋದರಿಯರು ಇದ್ದಾರೆ.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ನಿಪ್ಪಾಣಿ ಕ್ಷೇತ್ರದ ಮಾಜಿ ಶಾಸಕ, ಕ್ಷೇತ್ರದ ಹಸಿರು ಕ್ರಾಂತಿಯ ಶಿಲ್ಪಿ ಕಾಕಾಸಾಹೇಬ್ ಪಾಂಡುರಂಗ ಪಾಟೀಲ್ (70) ಅನಾರೋಗ್ಯ ನಿಮಿತ್ತ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಅಸುನೀಗಿದರು. ಮೃತರು ಪುತ್ರ ಸುಜಯ್, ಸೊಸೆ ಉಮಾ, ಮೊಮ್ಮಗ, ಮೊಮ್ಮಗಳು, ಮಗಳು ಸುಪ್ರಿಯಾ, ಅಳಿಯ ದತ್ತಕುಮಾರ್, ಇಬ್ಬರು ಸಹೋದರರು, ಸೋದರ ಮಾವ, ಮೂವರು ಸಹೋದರಿಯರು ಇದ್ದಾರೆ.

ಅವರ ನಿಧನದಿಂದ ನಿಪ್ಪಾಣಿ ತಾಲೂಕಿನಲ್ಲಿ ಶೋಕದ ಅಲೆ ಹರಡಿದೆ. ಅವರ ಪಾರ್ಥಿವ ಶರೀರವನ್ನು ಬುಧವಾರ ನಿಪ್ಪಾಣಿ ನಗರಕ್ಕೆ ಕರೆ ತರಲಾಯಿತು. ನಗರದ ಮುನ್ಸಿಪಲ್‌ ಹೈಸ್ಕೂಲ್ ಮೈದಾನದಿಂದ ಬಸವೇಶ್ವರ ವೃತ್ತದವರೆಗೆ ಸಾಗಿದ ಅಂತಿಮ ಯಾತ್ರೆ ಅಲ್ಲಿಂದ ಅವರ ಹುಟ್ಟೂರು ವಾಳಕಿ ಗ್ರಾಮಕ್ಕೆ ಸಾಗಿಸಲಾಯಿತು. ಸಾರ್ವಜನಿಕರ ದರ್ಶನದ ನಂತರ ಸಂಜೆ ವಾಳಕಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂರು ತಿಂಗಳ ಹಿಂದೆ, ಕೊಲ್ಹಾಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಕುತ್ತಿಗೆ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಮಯದಲ್ಲಿ, ನ್ಯುಮೋನಿಯಾದಿಂದಾಗಿ ಅವರ ಆರೋಗ್ಯ ಹದಗೆಟ್ಟಿತು. ಇದರಿಂದಾಗಿ, ಕಳೆದ ತಿಂಗಳು ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರ ಇಹಲೋಕ ತ್ಯಜಿಸಿದರು.

ಕಣಗಲಾ ಜಿಪಂ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅವರು ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಈ ಚುನಾವಣೆಯಲ್ಲಿ ಅವರು ಬಹುಮತದಿಂದ ಆಯ್ಕೆಯಾದರು. ನಂತರ, ಅವರು ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಸೋಲುಂಡರು. ಅವರು ಕಾಂಗ್ರೆಸ್‌ನಿಂದ 1999, 2004 ಮತ್ತು 2008ರಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು. ಅವರ ಅವಧಿಯಲ್ಲಿ ಕಾಳಮ್ಮವಾಡಿ ಅಂತಾರಾಜ್ಯ ಜಲ ಒಪ್ಪಂದವನ್ನು ಪೂರ್ಣಗೊಳಿಸಿದರು. ವೇದಗಂಗಾ ನದಿಯನ್ನು ಶಾಶ್ವತ ನೀರಿಗೆ ಲಭ್ಯವಾಗುವಂತೆ ಮಾಡಿದರು. ನಿಪ್ಪಾಣಿ ಪ್ರದೇಶದಲ್ಲಿ ಹಸಿರು ಕ್ರಾಂತಿಯ ಕನಸನ್ನು ನನಸಾಗಿಸಿದರು.ಕುಲದೀಪ್ ಸಿಂಗ್ ಆಯೋಗದ ಮುಂದೆ ತಮ್ಮ ವಾದವನ್ನು ಬಲವಾಗಿ ಮಂಡಿಸುವ ಮೂಲಕ ನಿಪ್ಪಾಣಿ ಕ್ಷೇತ್ರದ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರನ್ನು ಮರಾಠಾ ಸಮುದಾಯದ ವಿಶ್ವಾಸಾರ್ಹ ಮುಖವಾಗಿ ನೋಡಲಾಗುತ್ತಿತ್ತು. ಗಮನಾರ್ಹವಾಗಿ, ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರ ನಿಧನದಿಂದ ಕಾಂಗ್ರೆಸ್ ಪಕ್ಷದ ನಾಯಕರು ಕಂಬನಿ ಮಿಡಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ