ಸಮಾಜಮುಖಿ ಸೇವೆ ಸಲ್ಲಿಸಿದ ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ: ಟಿ.ಎಸ್.ರಮೇಶ್

KannadaprabhaNewsNetwork | Published : Mar 12, 2025 12:50 AM

ಸಾರಾಂಶ

ತರೀಕೆರೆ, ಜನಪ್ರಿಯ ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಹೇಳಿದ್ದಾರೆ.

ಜನಪ್ರಿಯ ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪನವರ ಪ್ರಥಮ ವರ್ಷದ ಪುಣ್ಯ ಸ್ಮರಣೆ-ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ, ತರೀಕೆರೆ

ಜನಪ್ರಿಯ ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಹೇಳಿದ್ದಾರೆ.

ಮಂಗಳವಾರ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ತರೀಕೆರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಯಿಂದ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಟಿ.ಎಚ್.ಶಿವಶಂಕರಪ್ಪನವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿ.ಎಚ್.ಶಿವಶಂಕರಪ್ಪ ಸುಧೀರ್ಘ ಸಮಯ ಕುರುಬ ಸಮಾಜದ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ನಾನು ಅವರ ಗರಡಿಯಲ್ಲೇ ಬೆಳೆದವನು. ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಾದ್ಯಂತ ಎಲ್ಲ ಹಳ್ಳಿ ಹೋಬಳಿಗಳಲ್ಲೂ ಸಂಚರಿಸಿ ನಿರಂತರ ಜನಸಂಪರ್ಕ ಹೊಂದಿದ್ದರು ಎಂದು ತಿಳಿಸಿದರು.

ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ಶಿವಶಂಕರಪ್ಪಅವರದು ಬಹಳ ದೊಡ್ಡ ವ್ಯಕ್ತಿತ್ವ. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಹೊಂದಿದ್ದರು. ಪುರಸಭೆ ಸದಸ್ಯರಾಗಿ ಛಾಪು ಮೂಡಿಸಿದ್ದ ಅವರು ಪಟ್ಟಣದಲ್ಲಿ ಶ್ರೀ ಸರ್ಜಾ ಹನುಮಪ್ಪನಾಯಕರ ಬಸ್ ನಿಲ್ದಾಣ ನಿರ್ಮಿಸಿದರು. ಓದಿರಾಯನ ಹಳ್ಳ ಪಥ ಪರಿವರ್ತನೆಯಲ್ಲಿ ಸಲ್ಲಿಸಿದ ಸೇವೆ ಅನನ್ಯ. ಶ್ರೀ ಗುರು ರೇವಣಸಿದ್ದೇಶ್ವರ ಮಾಂಗಲ್ಯ ಮಂದಿರ ನಿರ್ಮಾಣದ ಕಾರಣಕರ್ತರಾದ ಅವರ ಶ್ರಮದಿಂದ ಪಟ್ಟಣದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ರುದ್ರಭೂಮಿ ನಿರ್ಮಾಣವಾಯಿತು. ಅಹಿಂದ ಚಳುವಳಿ ಬಹ ದೊಡ್ಡ ಶಕ್ತಿಯಾಗಿ ಬೆಳೆದು ರಾಜಕೀಯದ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಿದರು.ಪುರಸಭಾ ಮಾಜಿ ಅಧ್ಯಕ್ಷ ಡಿ.ವಿ.ಪದ್ಮರಾಜು ಮಾತನಾಡಿ ಶಿವಶಂಕರಪ್ಪ ಚಿಕ್ಕವಯಸ್ಸಿನಿಂದಲೇ ಹೋರಾಟ ಮನೋಭಾವ ಬೆಳೆಸಿಕೊಂಡು ಕೊಡುಗೈ ದಾನಿಗಳಾಗಿದ್ದರು. ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಅವರ ಪುಣ್ಯಸ್ಮರಣೆಯನ್ನು ದೊಡ್ಡ ಮಟ್ಟದಲ್ಲಿ ಮಾಡೋಣ ಎಂದು ಹೇಳಿದರು. ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ಮಾಜಿ ಶಿವಶಂಕರಪ್ಪ ಅತ್ಯಂತ ಸರಳ ವ್ಯಕ್ತಿ. ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಒಳ್ಳೆಯ ಕಾರ್ಯ, ಸಾಮೂಹಿಕ ಆರೋಗ್ಯ ಶಿಬಿರಗಳನ್ನು ಸಂಘಟಿಸಬೇಕು ಎಂದು ಸಲಹೆ ನೀಡಿದರು.

ಪುರಸಭಾ ಸದಸ್ಯ ಟಿ.ಜಿ.ಶಶಾಂಕ, ಹಿರಿಯ ಸಮಾಜ ಸೇವಕ ಟಿ.ಜಿ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು. ಫಾರೂಕ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಕನ್ನಡ ಶ್ರೀ ಬಿ.ಎಸ್.ಭಗವಾನ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮತ್ತಿತರರು ಮಾತನಾಡಿದರು. ಹಿರಿಯರಾದ ಗೋವಿಂದಪ್ಪ, ವಗ್ಗಪ್ಪರ ಮಂಜುನಾಥ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಟಿ.ಸಿ. ದರ್ಶನ್, ಧನಲಕ್ಷ್ಮಿ ಟಿ.ಎಚ್.ಶಿವಶಂಕರಪ್ಪ ಸಮಾಜದ ಬಂಧುಗಳು ಮತ್ತಿತರರು ಭಾಗವಹಿಸಿದ್ದರು.11ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ತರೀಕೆರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಯಿಂದ ಜನಪ್ರಿಯ ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿದರು. ಹಿರಿಯರಾದ ಗೋವಿಂದಪ್ಪ, ವಗ್ಗಪ್ಪರ ಮಂಜುನಾಥ್, ಧನಲಕ್ಷ್ಮಿ ಟಿ.ಎಚ್.ಶಿವಶಂಕರಪ್ಪ ಇದ್ದರು.

Share this article