ಉಡುಪಿ ಮಾಜಿ ಶಾಸಕರ ಏಕಾಂಗಿ ಧರಣಿ!

KannadaprabhaNewsNetwork |  
Published : Mar 25, 2026, 02:45 AM IST
23ರಘುಪತಿ | Kannada Prabha

ಸಾರಾಂಶ

ಉಡುಪಿ: ಇಲ್ಲಿನ ಬಡನಿಡಿಯೂರು ಗ್ರಾಮದ ಕಡಲತೀರದಲ್ಲಿ ತಮಗೆ ರೆಸಾರ್ಟ್ ನಿರ್ಮಿಸಲು ಸಿಂಗಲ್ ಲೇಔಟ್ ಪತ್ರ ನೀಡದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸತಾಯಿಸುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಸೋಮವಾರ ಪ್ರಾಧಿಕಾರದ ಮುಂದೆ ಧರಣಿ ಆರಂಭಿಸಿದ್ದಾರೆ.

ಉಡುಪಿ: ಇಲ್ಲಿನ ಬಡನಿಡಿಯೂರು ಗ್ರಾಮದ ಕಡಲತೀರದಲ್ಲಿ ತಮಗೆ ರೆಸಾರ್ಟ್ ನಿರ್ಮಿಸಲು ಸಿಂಗಲ್ ಲೇಔಟ್ ಪತ್ರ ನೀಡದೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸತಾಯಿಸುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಸೋಮವಾರ ಪ್ರಾಧಿಕಾರದ ಮುಂದೆ ಧರಣಿ ಆರಂಭಿಸಿದ್ದಾರೆ.

ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ತೊಡಕಿಲ್ಲದಿದ್ದರೂ ವಿನಾಕಾರಣ ಸಿಂಗಲ್ ಲೇಔಟ್ ಅನುಮತಿ ಪತ್ರ ನಿರಾಕರಿಸಲಾಗುತ್ತಿದೆ. ಇದರ ಹಿಂದೆ ಉಡುಪಿಯ ಶಾಸಕರ ಕೈವಾಡ ಇದೆ. ಈ ಬಗ್ಗೆ ಕೋರ್ಟಿನಿಂದ ಆದೇಶ ತಂದರೂ ಬೆಲೆ ನೀಡುತ್ತಿಲ್ಲ. ನ್ಯಾಯ ಸಿಗುವರೆಗೂ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಧರಣಿ ನಡೆಸುತ್ತೇನೆ. ಅನುಮತಿ ಪತ್ರ ನೀಡುವುದಿಲ್ಲ ಎಂದಾದರೆ ಹಿಂಬರಹ ನೀಡಲಿ ಎಂದರು.ನಂತರ ಸ್ಥಳಕ್ಕೆ ಬಂದ ನಗರಾಭಿವೃದ್ಧಿ ಆಯುಕ್ತ ಮಹೇಶ್, ರೆಸಾರ್ಟ್‌ಗೆ ಸಿಂಗಲ್ ಲೇಔಟ್ ಪ್ರಮಾಣ ಪತ್ರ ನೀಡುವ ಬಗ್ಗೆ ಎರಡು ದಿನದೊಳಗಡೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಾಕಿ ಇದೆ: ತಮ್ಮನ್ನುಕಲೆಕ್ಷನ್ ಮಾಸ್ಟರ್ ಎಂದು ಮಾಜಿ ಶಾಸಕರ ಆರೋಪವನ್ನು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹೇಶ್ ತಳ್ಳಿ ಹಾಕಿದ್ದಾರೆ. ನಾನು ಭ್ರಷ್ಟಾಚಾರ ಮಾಡಿಲ್ಲ ಕಲೆಕ್ಷನ್ ಮಾಡಿಲ್ಲ, ನನಗೆ ಶಾಸಕ ಯಶ್‌ಪಾಲ್ ಸುವರ್ಣರಿಂದ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಜಿ ಶಾಸಕರು ಹೇಳಿದಂತೆ ಸಿಂಗಲ್ ಲೇಔಟಿಗೆ ಅರ್ಜಿ ಹಾಕಿ ಎರಡು ವರ್ಷ ಆಗಿಲ್ಲ, ಅವರ ರೆಸಾರ್ಟ್‌ಗೆ ಸಿಂಗಲ್ ಲೇಔಟ್ ಅನುಮತಿ ನೀಡುವುದಕ್ಕೆ ನ್ಯಾಯಾಲಯದಲ್ಲಿ ಸ್ಥಳೀಯರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಾಕಿ ಇದೆ. ವಕೀಲರನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದು ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ಪ್ರಾಧಿಕಾರದ ಒಮ್ಮತದ ತೀರ್ಮಾನ ಇದೆ: ಪ್ರಾಧಿಕಾರದ ಅಧ್ಯಕ್ಷ, ಕಾಂಗ್ರೆಸ್ ನಾಯಕ ದಿನಕರ ಹೇರೂರು, ಆಯುಕ್ತರು ನನ್ನ ಮಾತು ಕೇಳುವುದಿಲ್ಲ, ಪ್ರತಿಯೊಂದಕ್ಕೂ ಕಾನೂನಿನ ಅಡ್ಡಿ ತರುತ್ತಾರೆ, ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ, ಅವರನ್ನು ವರ್ಗಾವಣೆ ಮಾಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಶಾಸಕರು ಪ್ರಾಧಿಕಾರದ ಸಮಿತಿಯಲ್ಲಿದ್ದಾರೆ, ಅವರು ಮತ್ತು ಸ್ಥಳೀಯ ಯುವಕ ಮಂಡಲದವರು ಮಾಜಿ ಶಾಸಕರ ರೆಸಾರ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಸಮಿತಿಯಲ್ಲಿ ಅನುಮತಿ ನೀಡಲು ಒಮ್ಮತದ ತೀರ್ಮಾನ ನೀಡಿದ್ದೇವೆ, ಆದರೆ ಆಯುಕ್ತರು ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ. 29, 30ರಂದು ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
ಕರಿಕೆ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ