ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ; 40ಕ್ಕು ಹೆಚ್ಚು ಯೂನಿಟ್ ರಕ್ತ ಸಂಗ್ರಹ

KannadaprabhaNewsNetwork |  
Published : Sep 08, 2025, 01:00 AM IST
7ಕೆಎಂಎನ್ ಡಿ22 | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಜನಸಂಖ್ಯೆ ನಾಗಲೊಟದಲ್ಲಿ ಬೆಳೆಯುತ್ತಿದೆ. ಪ್ರತಿನಿತ್ಯ ಅಪಘಾತ, ಅವಘಡಗಳು ಸಂಭವಿಸುತ್ತಿವೆ, ಅಪಘಾತ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಇನ್ನಿತರೆ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇದೆ. ಅಂತವರಿಗೆ ನೀವು ನೀಡುವ ರಕ್ತವು ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಶ್ರೀಸಿದ್ಧಿ ವಿನಾಯಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿರುವ 45ನೇ ವರ್ಷದ ಗಣೇಶೋತ್ಸವದ ಪೆಂಡಾಲ್‌ನಲ್ಲಿ ಉಚಿತ ರಕ್ತದಾನ ಶಿಬಿರಕ್ಕೆ ಲಯನ್ಸ್ ಪ್ರಾಂತ್ಯೀಯ ಅಧ್ಯಕ್ಷ ಟಿ.ಪಿ.ರೇವಣ್ಣ ಚಾಲನೆ ನೀಡಿದರು.

ಲಯನ್ಸ್ ಅಕ್ಷಯ ಪಾಂಡವ ಸಂಸ್ಥೆ ಹಾಗೂ ಜೀವಧಾರೆ ಟ್ರಸ್ಟ್ ಆಶ್ರಯದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಯುವಕರು, ಸಾರ್ವಜನಿಕರು ಹಾಗೂ ಪೊಲೀಸರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. 40 ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಈ ವೇಳೆ ಟಿ.ಪಿ.ರೇವಣ್ಣ ಮಾತನಾಡಿ, ಪ್ರತಿಯೊಬ್ಬ ರೋಗಿಗಳಿಗೂ ರಕ್ತದ ಅವಶ್ಯಕತೆ ಬಹಳ ಮುಖ್ಯ. ರಕ್ತ ಕೊಡುವವರೆಗೂ ರಕ್ತ ಸ್ವೀಕರಿಸುವವರಿಗೂ ಇಬ್ಬರಿಗೂ ಕೂಡ ಅನುಕೂಲವಾಗುವ ದಾನವೇ ರಕ್ತದಾನ ಎಂದರು.

ಪ್ರಸ್ತುತ ದಿನಗಳಲ್ಲಿ ಜನಸಂಖ್ಯೆ ನಾಗಲೊಟದಲ್ಲಿ ಬೆಳೆಯುತ್ತಿದೆ. ಪ್ರತಿನಿತ್ಯ ಅಪಘಾತ, ಅವಘಡಗಳು ಸಂಭವಿಸುತ್ತಿವೆ, ಅಪಘಾತ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಇನ್ನಿತರೆ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇದೆ. ಅಂತವರಿಗೆ ನೀವು ನೀಡುವ ರಕ್ತವು ಅನುಕೂಲವಾಗಲಿದೆ ಎಂದರು.

ರಕ್ತದಾನ ಶ್ರೇಷ್ಠದಾನ. ರಕ್ತಕೊಟ್ಟರೆ ಮತ್ತೊಮ್ಮೆ ಶುದ್ದವಾಗ ರಕ್ತ ಉತ್ಪತ್ತಿಯಾಗುತ್ತದೆ. ಒಬ್ಬ ಮನುಷ್ಯ ವರ್ಷದಲ್ಲಿ ಮೂರುಬಾರಿ ರಕ್ತದಾನ ಮಾಡಬಹುದು, ಹಾಗಾಗಿ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದರು.

ಜೀವಧಾರೆ ಟ್ರಸ್ಟ್‌ನ ನಟರಾಜು ಮಾತನಾಡಿ, ಟ್ರಸ್ಟ್ ಸ್ಥಾಪಿಸಿ ಇಂದಿನ ಯುವಕರಿಗೆ ರಕ್ತದಾನದ ಮಹತ್ವವನ್ನು ತಿಳಿಸುವ ಜೊತೆಗೆ ಹಳ್ಳಿ ಹಳ್ಳಿಗಳಲ್ಲಿ ರಕ್ತದಾನ ಶಿಬಿರಗಳನ್ನ ಆಯೋಜಿಸಿ ಯುವಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗಣಪತಿ ಸೇವಾ ಸಮಿತಿ ಮುಖಂಡರಾದ ಸುಬ್ರಹ್ಮಣ್ಯಂ, ಮನೋಜ್, ಅಕ್ಷಯ್ ಪಾಂಡವ ಲಯನ್ಸ್ ಅಧ್ಯಕ್ಷ ಪ.ಮ. ನಂಜುಂಡಸ್ವಾಮಿ, ಕಾರ್ಯದರ್ಶಿ ಲಯನ್ ಕುಮಾರ್ ಬೀರಶೆಟ್ಟಹಳ್ಳಿ, , ಬಿಜಿಎಸ್ ಆಸ್ಪತ್ರೆ ಆರೋಗ್ಯ ಸಿಬ್ಬಂದಿಗಳು ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌