ಉಚಿತ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

KannadaprabhaNewsNetwork |  
Published : Apr 30, 2025, 12:30 AM IST
ಉಚಿತ ಕುಡಿಯುವ ನೀರಿನ ಘಟಕ ಉದ್ಘಾಟನೆ | Kannada Prabha

ಸಾರಾಂಶ

ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಉಚಿತ ಕುಡಿಯುವ ನೀರನ್ನು ಒದಗಿಸಲು ನೀರಿನ ಘಟಕಕ್ಕೆ ನಗರದ ಸಂತೇಪೇಟೆ ವೃತ್ತದಲ್ಲಿ ಸಫಾ ಬೈತಲ್ ಮಾಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪೊಲೀಸ್ ಅಧಿಕಾರಿ ಕೃಷ್ಣ ನಾಯಕ್ ಬೆಳಿಗ್ಗೆ ಚಾಲನೆ ನೀಡಿದರು. ಮೆಡಿಕಲ್ ಕ್ಯಾಂಪ್ ಮಾಡುವುದು ಸೇರಿದಂತೆ ಹಲವಾರು ಸೇವಾ ಚಟುವಟಿಕೆಗಳನ್ನು ಯಾವ ಜಾತಿ ಬೇಧ ನೋಡದೇ ಜನಸೇವೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ಉಚಿತ ಕುಡಿಯುವ ನೀರನ್ನು ಒದಗಿಸಲು ನೀರಿನ ಘಟಕಕ್ಕೆ ನಗರದ ಸಂತೇಪೇಟೆ ವೃತ್ತದಲ್ಲಿ ಸಫಾ ಬೈತಲ್ ಮಾಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪೊಲೀಸ್ ಅಧಿಕಾರಿ ಕೃಷ್ಣ ನಾಯಕ್ ಬೆಳಿಗ್ಗೆ ಚಾಲನೆ ನೀಡಿದರು.ಇದೇ ವೇಳೆ ಟ್ರಸ್ಟ್ ಕಾರ್ಯಕರ್ತ ಅಮೀರ್ ಜಾನ್ ಮಾಧ್ಯಮದೊಂದಿಗೆ ಮಾತನಾಡಿ, ಟ್ರಸ್ಟ್ ವತಿಯಿಂದ ನಿರಂತರವಾಗಿ ಸುಮಾರು 14 ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಹಾಸನ ನಗರದ ನಮ್ಮ ನಾಗರೀಕ ಬಾಯಾರಿಕೆಯಿಂದ ಬಳಲಿ ಬಂದವರಿಗೆ, ಹಾಗೂ ಪ್ರಯಾಣಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಉಚಿತ ಕುಡಿಯುವ ನೀರನ್ನು ಕೊಡಿಸಲಾಗುತ್ತಿದೆ. ಈ ವರ್ಷ ಕೂಡ ಉಚಿತ ಶುದ್ಧ ಕುಡಿಯುವ ನೀರನ್ನು ನಮ್ಮ ಸಂಘಟನೆಯಿಂದ ಕೊಡಿಸಲಾಗುತ್ತಿದೆ. ಒಂದು ಸಂತೇಪೇಟೆ ವೃತ್ತ ಮತ್ತೊಂದು ಸರ್ಕಾರಿ ಆಸ್ಪತ್ರೆ ಬಳಿ ಉಚಿತ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ ಎಂದರು.

ಇದರ ಜೊತೆಗೆ ಚಳಿಗಾಲದಲ್ಲಿ ಬಡವರಿಗೆ ಬೆಚ್ಚನೆಯ ಬೆಡ್‌ಶೀಟ್, ಪ್ರತಿ ತಿಂಗಳು 65 ಜನ ವಿಧವೆಯರಿಗೆ 500 ರು. ಮಾಶಾಸನ ಕೊಡಲಾಗುತ್ತದೆ. ಅನೇಕರಿಗೆ ರೇಷನ್ ಕೊಡಲಾಗುವುದು, ಅಂಗವಿಕಲರಿಗೆ ಸಹಾಯ ಮಾಡುವುದು, ಮೆಡಿಕಲ್ ಕ್ಯಾಂಪ್ ಮಾಡುವುದು ಸೇರಿದಂತೆ ಹಲವಾರು ಸೇವಾ ಚಟುವಟಿಕೆಗಳನ್ನು ಯಾವ ಜಾತಿ ಬೇಧ ನೋಡದೇ ಜನಸೇವೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಫಾ ಬೈತುಲ್ ಮಾಲ್ ಚಾರಿಟಬಲ್ ಟ್ರಸ್ಟ್ ಹಾಸನ ಘಟಕದ ಅಧ್ಯಕ್ಷ ಮುಕ್ತಾರ್ ಅಹಮದ್, ಜಾಫರ್ ಸಾದೀಕ್, ಅಬ್ದೂಲ್ ಮಾದಿದ್, ಆದಿಲ್ ಪಾಷಾ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!