ಅಲಕ್ಷಿತ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ

KannadaprabhaNewsNetwork |  
Published : Jul 17, 2026, 02:00 AM IST
ಅಣ್ಣಿಗೇರಿಯ ನಿಂಗಮ್ಮ ಹೂಗಾರ ಪಪೂ ಕಾಲೇಜಿನಲ್ಲಿ ಗುರುವಾರ ಕೌದಿ ನಾಟಕ ಪ್ರಸ್ತುತಪಡಿಸಿದ ಭಾಗ್ಯಶ್ರೀ ಬಿ‌. ಪಾಳಾ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಗದಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಶ್ರೀಗಳ ಆಶಯದಂತೆ ಪೌರಕಾರ್ಮಿಕರು, ಭೋವಿ, ಹರಣಶಿಕಾರಿ ಹೀಗೆ ಅಲಕ್ಷಿತ ಸಮುದಾಯದ ಜತೆಗೆ ಅನಾಥೆಯಾದ ಬಾಲಕಿಗೆ 1ನೇ ತರಗತಿಯಿಂದ ಪಿಯುಸಿ ವರೆಗೆ ನಿಂಗಮ್ಮ ಹೂಗಾರ ಪದವಿಪೂರ್ವ ಕಾಲೇಜಿನಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ.

ಅಣ್ಣಿಗೇರಿ:

ಅಲಕ್ಷಿತ ಸಮುದಾಯದ ಮಕ್ಕಳಿಗೆ ಕಳೆದ ಆರು ವರ್ಷಗಳಿಂದ ಸಂಸ್ಥೆಯ ಮೂಲಕ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಗದಗ ತೋಂಟದಾರ್ಯ ವಿದ್ಯಾಪೀಠದ ನಿಂಗಮ್ಮ ಹೂಗಾರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಎಸ್‌. ಹರ್ಲಾಪುರ ಹೇಳಿದರು.

ಅ‍ರು ಪಟ್ಟಣದ ನಿಂಗಮ್ಮ ಹೂಗಾರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮೈಸೂರಿನ ಕವಿತಾ ಕಲಾ ತಂಡದ ''''''''ಕೌದಿ'''''''' ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು. ಗದಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಶ್ರೀಗಳ ಆಶಯದಂತೆ ಪೌರಕಾರ್ಮಿಕರು, ಭೋವಿ, ಹರಣಶಿಕಾರಿ ಹೀಗೆ ಅಲಕ್ಷಿತ ಸಮುದಾಯದ ಜತೆಗೆ ಅನಾಥೆಯಾದ ಬಾಲಕಿಗೆ 1ನೇ ತರಗತಿಯಿಂದ ಪಿಯುಸಿ ವರೆಗೆ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಕೌದಿ ಹೊಲಿಯುವ ಅಲಕ್ಷಿತ ಸಮುದಾಯದ ಗೊಂದಲಿಗರು, ದಲಿತರು ಬವಣೆಯ ಬದುಕನ್ನು ಈ ನಾಟಕ ಅನಾವರಣಗೊಳಿಸಿದೆ. ಜತೆಗೆ ಪರಿಣಾಮಕಾರಿಯಾಗಿತ್ತು ಎಂದು ವಿಶ್ಲೇಷಿಸಿದರು. ವೀರೇಶ ಶಾನುಭೋಗರ, ಎಸ್.ವಿ. ಕುರಡಗಿ, ಕಿರಣ ಬೂದಿಹಾಳ ಹಾಜರಿದ್ದರು.

ಕೌದಿ ಹೊಲ್ಯಾಕ್ ಬಂದೀನ್ರಿ:

ಇದಕ್ಕೂ ಮೊದಲು ಗಣೇಶ ಅಮೀನಗಡ ಅವರ ಕೌದಿ ನಾಟಕವನ್ನು ಪ್ರದರ್ಶಿಸಿದ ಕಲಬುರಗಿ ರಂಗಾಯಣದ ಕಲಾವಿದೆ ಭಾಗ್ಯಶ್ರೀ ಬಿ‌. ಪಾಳಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಜಗದೀಶ್ ಆರ್. ಜಾಣಿ ಸಂಗೀತ ನೀಡಿ ನಿರ್ದೇಶಿಸಿದರೆ, ಅಭಿಷೇಕ್ ಸಂಗೀತ ಹಾಗೂ ಬೆಳಕು ನಿರ್ವಹಣೆ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಂ ವಾಂಗ್ಚೂಕ್ ಹೋರಾಟಕ್ಕೆ ಗದುಗಿನಲ್ಲಿ ಬೆಂಬಲ
ಬೆಳೆವಿಮೆ ಯೋಜನೆ: ರೈತರಿಗೆ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ