ಕನ್ನಡಪ್ರಭ ವಾರ್ತೆ ಪಾಂಡವಪುರ
ದಿ.ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಚಿನಕುರಳಿ ಸಿ.ಎಸ್.ಚಿಕ್ಕರಾಮೇಗೌಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಅಣ್ಣೇಗೌಡರ ಸ್ಮರಣಾರ್ಥ ಲಯನ್ಸ್ ಕ್ಲಬ್ ಆಫ್ ಫ್ರೆಂಚ್ ರಾಕ್ಸ್, ಭಗವಾನ್ ಮಹಾವೀರ ದರ್ಶನ ನೇತ್ರ ಆಸ್ಪತ್ರೆ, ಬಾಲ ಭೈರವೇಶ್ವರ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ನಡೆದ ಶಿಬಿರಕ್ಕೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಾತನಾಡಿ, ಸಂಸ್ಥೆ ಉಚಿತ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಣೆ ಮಾಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದೆ. ತೊಂದರೆ ಇರುವವವರಿಗೆ ಉಚಿತ ಶಿಬಿರಗಳು ಅನುಕೂಲವಾಗುತ್ತವೆ ಎಂದರು.ಅಧ್ಯಕ್ಷ ಲ.ಕೆ.ಆರ್.ಸ್ವಾಮೀಗೌಡ ಮಾತನಾಡಿ, ನಮ್ಮ ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಹಲವಾರು ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಸಿ ತೊಂದರೆ ಇರುವವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದರು.
ವಕೀಲರ ಸಂಘದಲ್ಲಿ ಎಸ್.ಎಂ.ಕೃಷ್ಣ ಪುಣ್ಯಸ್ಮರಣೆ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಾಡು ಕಂಡ ಅದ್ವಿತೀಯ ನಾಯಕ ಎಂದು ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಹೇಳಿದರು.
ಸರಳತೆ, ಶಾಂತಿ ಮತ್ತು ಶಿಸ್ತಿನ ಪ್ರತೀಕವಾಗಿದ್ದ ಎಸ್.ಎಂ.ಕೃಷ್ಣ ಅವರು ಕರ್ನಾಟಕದ ಅಭಿವೃದ್ಧಿಗೆ ಹೊಸ ಮಾನದಂಡ ಸ್ಥಾಪಿಸಿದರು. ಅವರ ಪುಣ್ಯಸ್ಮರಣೆಯಂದು ಅವರ ಅದ್ಭುತ ಸೇವೆಯನ್ನು ಕೃತಜ್ಞತೆಯಿಂದ ನೆನೆದು ಅವರ ದೂರದೃಷ್ಟಿ, ಆಧುನಿಕ ಆಡಳಿತದ ಮಾದರಿ ಮತ್ತು ಜನಪ್ರಿಯ ನಾಯಕತ್ವ ಯುವ ಪೀಳಿಗೆಗೆ ಸೂರ್ತಿ ನೀಡುತ್ತದೆ ಎಂದರು.