ಪುಷ್ಪಗಿರಿ ಮಹಾಸಂಸ್ಥಾನ ಮಠದಲ್ಲಿ ಉಚಿತ ಲಿಂಗಧಾರಣೆ

KannadaprabhaNewsNetwork |  
Published : Jun 01, 2026, 01:30 AM IST
 ಪುಪ್ಪಗಿರಿ ಮಹಾ ಸಂಸ್ಥಾನ  ಮಠದಲ್ಲಿ  240 ವಟುಗಳಿಗೆ ಉಚಿತ ಲಿಂಗಧಾರಣೆ.  | Kannada Prabha

ಸಾರಾಂಶ

ಪುಪ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ. ಲಿಂ. ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಬೆಳಗ್ಗೆ ಪುಷ್ಪಗಿರಿ ಮಠ ಮತ್ತು ವಿಶ್ವ ವೀರಶೈವ, ಲಿಂಗಾಯತ ಮಹಾವೇದಿಕೆ ವತಿಯಿಂದ ದೀಕ್ಷಾ ವಟುಗಳಿಗೆ ಉಚಿತವಾಗಿ ಕರಡಿಗೆ, ಲಿಂಗು, ಶಿವದಾರ, ಪಂಚೆ, ಟವಲ್ ಹಾಗೂ 240 ವಟುಗಳಿಗೆ ಲಿಂಗಧಾರಣೆ, ಇಷ್ಟಲಿಂಗ ಪೂಜೆ ನೆರವೇರಿಸಿ ಮಾತನಾಡಿ, ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರಾಜಪುರ ಮಠದ ಶ್ರೀ ನಟರಾಜ್ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಅವರು ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಇಲ್ಲಿಯವರೆಗೆ 28 ಸಾವಿರಕ್ಕೂ ಅಧಿಕ ದೀಕ್ಷಾ ವಟುಗಳಿಗೆ ಇಷ್ಟಲಿಂಗ ಪೂಜೆ, ಲಿಂಗಧಾರಣೆ ಮತ್ತು ಧಾರ್ಮಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ವೀರಶೈವರಲ್ಲಿ ಲಿಂಗಧಾರಣೆ, ವಿಭೂತಿಧಾರಣೆ, ರುದ್ರಾಕ್ಷಿಧಾರಣೆ‌‌, ಇಷ್ಟಲಿಂಗಪೂಜೆ, ಉಚಿತ ಲಿಂಗಧಾರಣೆ ಕಾಯಕವನ್ನು ಮಾಡಿಸಿಕೊಂಡು ಬರುತ್ತಿರುವ ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆ ಉಚಿತ ಲಿಂಗಧಾರಣೆ ಜೊತೆಯಲ್ಲಿ ಸಮಾಜದ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವ ಮೂಲಕ ಜನ- ಜಾಗೃತಿ ಮೂಡಿಸಬೇಕು ಎಂದು ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪುಪ್ಪಗಿರಿ ಮಹಾ ಸಂಸ್ಥಾನ ಮಠದ ಶ್ರೀ. ಲಿಂ. ಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಬೆಳಗ್ಗೆ ಪುಷ್ಪಗಿರಿ ಮಠ ಮತ್ತು ವಿಶ್ವ ವೀರಶೈವ, ಲಿಂಗಾಯತ ಮಹಾವೇದಿಕೆ ವತಿಯಿಂದ ದೀಕ್ಷಾ ವಟುಗಳಿಗೆ ಉಚಿತವಾಗಿ ಕರಡಿಗೆ, ಲಿಂಗು, ಶಿವದಾರ, ಪಂಚೆ, ಟವಲ್ ಹಾಗೂ 240 ವಟುಗಳಿಗೆ ಲಿಂಗಧಾರಣೆ, ಇಷ್ಟಲಿಂಗ ಪೂಜೆ ನೆರವೇರಿಸಿ ಮಾತನಾಡಿ, ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ರಾಜಪುರ ಮಠದ ಶ್ರೀ ನಟರಾಜ್ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಅವರು ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಇಲ್ಲಿಯವರೆಗೆ 28 ಸಾವಿರಕ್ಕೂ ಅಧಿಕ ದೀಕ್ಷಾ ವಟುಗಳಿಗೆ ಇಷ್ಟಲಿಂಗ ಪೂಜೆ, ಲಿಂಗಧಾರಣೆ ಮತ್ತು ಧಾರ್ಮಿಕ ಕಾರ್ಯ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿ, ಅಲ್ಲದೇ ರಾಜ್ಯ, ತಮಿಳುನಾಡು ಮತ್ತು ಕೇರಳ ಹಾಗೂ ಹೊರ ರಾಜ್ಯಗಳಲ್ಲಿ ಜನ ಜಾಗೃತಿ, ಲಿಂಗಧಾರಣೆ ಮಾಡಿಕೊಂಡು ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪುಷ್ಪಗಿರಿ ಮಹಾ ಸಂಸ್ಥಾನಮಠದ ಪರಮಪೂಜ್ಯ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ

ದಿವ್ಯ ಸಾನ್ನಿಧ್ಯ ವಹಿಸಿ ಅಶಿರ್ವಚನ ನೀಡಿ ನಮಗೆ ಲಿಂಗಪೂಜೆ ಬಹಳ ಶ್ರೇಷ್ಠವಾದುದು, ಗುರುಗಳಿಂದ ಲಿಂಗಧಾರಣೆ ಮಾಡಿಸಿಕೊಳ್ಳಬೇಕು. ಲಿಂಗ ಪೂಜೆ ಮಾಡಿದರೆ ಎಲ್ಲಾ ದೇವರನ್ನು ಪೂಜಿಸಿದಂತಾಗುತ್ತದೆ ಎಂದು ಪುಷ್ಪಗಿರಿ ಮಠದ ಶ್ರೀಗಳು ತಿಳಿಸಿದರು.

ವಿಶ್ವ ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಾಧ್ಯಕ್ಷ ರಾಮನಾಥಪುರ ಎಂ.ಎನ್. ಕುಮಾರಸ್ವಾಮಿ, ಹಾಸನ ಜಿಲ್ಲಾ ಅಧ್ಯಕ್ಷ ಹಳ್ಳಿಮೈಸೂರು ಎಚ್.ಸಿ. ಪ್ರಕಾಶ್, ಹೊಳೆನರಸಿಪುರ ತಾಲೂಕು ಅಧ್ಯಕ್ಷ ಚನ್ನಾಪುರ ಡಾ. ಸಿ.ಅರ್. ಮಹೇಶ್, ಅರಸಿಕೆರೆ ತಾಲೂಕು ಕೆ.ಎನ್. ಪ್ರಕಾಶ್ ಪಟೇಲ್, ಬೇಲೂರು ತಾಲೂಕು ಇ.ಆರ್. ಓಂಕಾರ್ ಪಟೇಲ್, ಅಲೂರು ತಾಲೂಕು ವೈ.ಡಿ. ಪುಟ್ಟಸ್ವಾಮಿ,

ಅರಕಲಗೂಡು ತಾಲೂಕು ಅಧ್ಯಕ್ಷ ಕೊಣನೂರು ಅಮೃತೇಶ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನ- ಸೋಲಾಪುರ ರೈಲು ನಿಲುಗಡೆಗೆ ಸಚಿವ ಸೋಮಣ್ಣ ಚಾಲನೆ
ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂದ ಶಾಸಕ ಬಾಲಕೃಷ್ಣ