ಕ್ಷೇತ್ರದ ಮಕ್ಕಳಿಗಾಗಿ ಸಿಬಿ ಟ್ರಸ್ಟ್‌ನಿಂದ ಉಚಿತ ತರಬೇತಿ

KannadaprabhaNewsNetwork |  
Published : Jun 12, 2026, 02:00 AM IST
ಎಸ್‌ಬಿ.ಚಾರಿಟಬಲ್ ಟ್ರಸ್ಟ್ವತಿಯಿಂದ ನಡೆದ ಉಚಿತ ಸಿಇಟಿ ನೀಟರ್ ತರಬೇತಿಯಲ್ಲಿ ತರಬೇತಿಪಡೆದ ವಿದ್ಯಾರ್ಥಿಗಳ ಸಿಇಟಿ ಪಲಿತಾಂಶ ಕುರಿತಂತೆ ಟ್ರಸ್ಟ್ನ ಅಧ್ಯಕ್ಷರು, ಶಾಸಕರು ಆದ ಸಿ.ಬಿ.ಸುರೇಶ್‌ಬಾಬು ಮಾಹಿತಿ ನೀಡಿದರು. | Kannada Prabha

ಸಾರಾಂಶ

ನಮ್ಮ ಕ್ಷೇತ್ರದ ಮಕ್ಕಳಿಗಾಗಿ ಸಮಾಜದ ಸಮಾನ ಮನಸ್ಕರು ಸೇರಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ನೀಟ್ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ನಮ್ಮ ಕ್ಷೇತ್ರದ ಮಕ್ಕಳಿಗಾಗಿ ಸಮಾಜದ ಸಮಾನ ಮನಸ್ಕರು ಸೇರಿ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ ನೀಟ್ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಕುರಿತಂತೆ ಮಾಹಿತಿ ನೀಡಿ ಮಾತನಾಡಿದ ಅವರು, ಪಕ್ಷಾತೀತವಾಗಿ, ಜಾತ್ಯತೀತವಾಗಿ ಕ್ಷೇತ್ರದ ಮಕ್ಕಳ ಭವಿಷ್ಯಕ್ಕಾಗಿ ಏರ್ಪಡಿಸಿರುವಂತಹ ಎಸ್.ಬಿ.ಚಾರಿಟಬಲ್ ಟ್ರಸ್ಟ್‌ ವತಿಯಿಂದ ನಡೆಯುತ್ತಿರುವ ಜ್ಞಾನಕಲ್ಪ ಸಿಇಟಿ, ನೀಟ್, ಜೆಇಇ ತರಬೇತಿಯಲ್ಲಿ ಈ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಕಳೆದ ಬಾರಿಗಿಂತ ಈ ಬಾರಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ. ಈ ತರಬೇತಿಯನ್ನು ನಾವು ಯಾವುದೇ ಸ್ವಾರ್ಥವಿಲ್ಲದೇ ನೀಡಲಾಗುತ್ತಿದ್ದು ಕಳೆದ ವರ್ಷದಿಂದ ಪ್ರಥಮ ಪಿಯುಸಿಯಿಂದಲೂ ತರಬೇತಿ ನೀಡುತ್ತಿದ್ದು ಇದರಿಂದ ಈ ಬಾರಿಯ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮುಂದಿನ ಬಾರಿ ಇನ್ನು ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೋರ್ಸ್‌ಗಳಿಗೆ ಹೋಗುವ ಸಾದ್ಯತೆ ಇದೆ ಎಂದ ಅವರು ಇದರೊಂದಿಗೆ ಬಿ.ಕಾಂ, ಬಿ.ಎ ವಿದ್ಯಾರ್ಥಿಗಳಿಗೂ ಎಸ್‌ಡಿಎ, ಎಫ್‌ಡಿಎ, ಕೆಎಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಉಚಿತ ಸಿಇಟಿ ನೀಟ್ ತರಬೇತಿ ಸಮಿತಿಯ ಅಧ್ಯಕ್ಷ ನಾಗರಾಜು, ಸದಸ್ಯರುಗಳಾದ ಸೋಮಶೇಖರ್, ಜಾಕೀರ್, ಎಂ.ಎಸ್.ರವಿಕುಮಾರ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಕ್ಕೆಜೋಳದ ಬೀಜಕ್ಕೆ ಒಂದೇ ಬೆಲೆ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ
ನಂದಿಪುರ ಚರಂತಪ್ಪಜ್ಜ ಶ್ರೀಗಳ 22ನೇ ಸ್ಮರಣೋತ್ಸವಕ್ಕೆ ಚಾಲನೆ