ಕೂಡ್ಲಿಗಿ: ಸಮಾಜದ ಅಸಮಾನತೆ, ಮೂಢನಂಬಿಕೆ ಜಾತೀಯತೆಯನ್ನು ಹೋಗಲಾಡಿಸಲು ಶರಣರಿಂದ ರಚಿತವಾಗಿರುವ ವಚನ ಸಾಹಿತ್ಯ ಸಾರವನ್ನು ಎಲ್ಲರೂ ಅರ್ಥೈಸಿಕೊಂಡು ಜೀವನ ನಡೆಸಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ಅಭಿಪ್ರಾಯಪಟ್ಟರು.
ಡಾ. ಎ. ಕರಿಬಸಪ್ಪ ಮಾತನಾಡಿ, ಸಾಹಿತ್ಯದ ಪ್ರಕಾರಗಳಲ್ಲಿ ವಚನ ಸಾಹಿತ್ಯ ತುಂಬಾ ಗಮನ ಸೆಳೆಯುವಂತ ಪ್ರಾಮುಖ್ಯತೆ ಹೊಂದಿದೆ. ತಂತ್ರಜ್ಞಾನ ಮತ್ತು ಎಐ ಯುಗದಲ್ಲಿ ವಚನಗಳ ಓದುಗರ ಸಂಖ್ಯೆ ಕ್ಷೀಣವಾಗಿದೆ. ವಚನಗಳನ್ನು ಓದುವ ಮೂಲಕ ಪ್ರತಿಯೊಬ್ಬರು ಅವುಗಳ ಮಹತ್ವ ತಿಳಿದುಕೊಳ್ಳಬೇಕಿದೆ ಎಂದರು.
ನಿವೃತ್ತ ಉಪನ್ಯಾಸಕ ವಸಂತ ಸಜ್ಜನ್ ಮಾತನಾಡಿ, ಬಸವಣ್ಣನವರು ಅಲ್ಲಮಪ್ರಭುಗಳು ಸರ್ವಜ್ಞ ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರು ಬರೆದಿರುವ ಪ್ರತಿಯೊಂದು ವಚನ ಸಹ ತನ್ನದೇ ಆದ ಮಹತ್ವವನ್ನು ಹೊಂದಿದೆ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿ ವಚನಗಳ ವಾಚನಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.ಪ್ರಾಸ್ತಾವಿಕವಾಗಿ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್. ವೀರೇಶ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಎಚ್.ಕೆ. ವೆಂಕಟೇಶ್ವರ ರಾವ್, ಪ್ರಗತಿಪರ ರೈತ ಪೂಜಾರಹಳ್ಳಿ ತಿಪ್ಪೇಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಸ್. ವೀರೇಶ, ಕದಳಿ ಮಹಿಳಾ ವೇದಿಕೆ ಘಟಕದ ಅಧ್ಯಕ್ಷೆ ತಿಪ್ಪೀರಮ್ಮ ಸಕಲಪುರದ ಹಟ್ಟಿ, ಕೆ.ಎಸ್. ಸ್ನೇಹಾ, ಶರಣಗೌಡ, ಎನ್.ಎಸ್ ತಿಪ್ಪೇಸ್ವಾಮಿ, ಅಕ್ಕಮಹಾದೇವಿ, ಸಿದ್ದನಗೌಡ ಸೇರಿದಂತೆ ಇತರರ ಸಾರ್ವಜನಿಕರು ಉಪಸ್ಥಿತರಿದ್ದರು.
ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಂ. ರವಿಕುಮಾರ್ ಉದ್ಗಾಟಿಸಿದರು.