ಕ್ಷಯಮುಕ್ತ ಸಾಧನೆಗಾಗಿ ಗ್ರಾಪಂಗೆ ಬಂಗಾರದ ಪದಕ । ತಾಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷ ಬಿ.ಆರ್ ಬಣ್ಣನೆ
ತಾಲೂಕಿನ ಬೇರಂಬಾಡಿ ಗ್ರಾಮ ಪಂಚಾಯ್ತಿ ಸತತವಾಗಿ ಕಳೆದ 3 ವರ್ಷಗಳಿಂದಲೂ ಕ್ಷಯಮುಕ್ತ ಗ್ರಾಪಂ ಎಂದು ಮಾನ್ಯತೆ ಪಡೆದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷ ಬಿ.ಆರ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಕಗ್ಗಳದಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೇರಂಬಾಡಿ ಗ್ರಾಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಇಲಾಖೆ ಹಾಗೂ ಬೇರಂಬಾಡಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ನೂರು ದಿನಗಳ ಟಿಬಿ ಅಭಿಯಾನದ ಅಂಗವಾಗಿ ಕ್ಷಯ ಮುಕ್ತ ಗ್ರಾಮ ಪಂಚಾಯ್ತಿ ಅಭಿಯಾನದಲ್ಲಿ ಮಾತನಾಡಿ ಚಿನ್ನದ ಪದಕ ಗಳಿಸಿದೆ ಎಂದರು.ತಾಲೂಕಿನ 34 ಗ್ರಾಮ ಪಂಚಾಯ್ತಿಗಳಲ್ಲಿ 19 ಈಗಾಗಲೇ ಕ್ಷಯ ಮುಕ್ತ ಎಂದು ಘೋಷಣೆಯಾಗಿವೆ. ಇನ್ನೂಳಿದ ಗ್ರಾಪಂನಲ್ಲೂ ಕ್ಷಯಮುಕ್ತ ಮಾಡಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದರು.ಪತ್ತೆಯಾಗದ ಕ್ಷಯರೋಗಿಗಳನ್ನು ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಮೂಲಕ ಗುರುತಿಸಿದ ಬಳಿಕ ತ್ವರಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಅಭಿಯಾನ ತಾಲೂಕಿನಾದ್ಯಂತ ನಡೆಸಲಾಗುತ್ತಿದೆ ಎಂದರು.ತಪಾಸಣೆ:ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ನಡೆದ ಕ್ಷಯರೋಗ ತಪಾಸಣೆಯ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ರಕ್ತಹೀನತೆ ತಪಾಸಣೆಗಳನ್ನು ಶಿಬಿರದಲ್ಲಿ 13 ಮಂದಿಗೆ ತಪಾಸಣೆ ಮಾಡಲಾಗಿದ್ದು, 66 ಜನರಿಗೆ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಮೂಲಕ ಎದೆ ಎಕ್ಸ್-ರೇ ಪರೀಕ್ಷೆ ನಡೆಸಲಾಯಿತು ಎಂದರು.ಈ ಅಭಿಯಾನದಲ್ಲಿ ಡಾ. ಅಮೂಲ್ಯ, ಮಹೇಶ್, ದೀಪಶ್ರೀ, ನವೀನ್, ಆರ್‌ಐಒ ವಹೀದ್, ಸಿಎಚ್‌ಒ ನಂಜಮಣಿ, ವಿನಾಯಕ, ಅಶ್ವಿನಿ, ಪೂಜಾ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.--- ೨೪ಜಿಪಿಟಿ೨೪ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿಯಲ್ಲಿ ಕ್ಷಯ ಮುಕ್ತ ಗ್ರಾಪಂ ಅಭಿಯಾನಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಲೀಂ ಪಾಷ ಬಿ.ಆರ್ ಚಾಲನೆ ನೀಡಿದರು.