ಹಳ್ಳಿಯಿಂದ ದಿಲ್ಲಿ, ದಿಲ್ಲಿಯಿಂದ ಹಳ್ಳಿಯಲ್ಲ

KannadaprabhaNewsNetwork |  
Published : Jun 16, 2025, 03:12 AM IST
ಸಚಿವ ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಯಾವುದೇ ಸಂಸ್ಥೆ ಬೆಳೆಯಬೇಕಾದರೆ ನಿಸ್ವಾರ್ಥತೆ ಇರಬೇಕು. ಇದರಲ್ಲಿ ಯಾವತ್ತು ರಾಜಕಾರಣ ಬೆರಸಬಾರದು. ಅಂತಹ ಸಾಲಿನಲ್ಲಿ ಹೋರ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವೂ ಒಂದು. ನಿಸ್ವಾರ್ಥ ಮನೋಭಾವದಿಂದ ಆಡಳಿತ ಮಂಡಳಿಯೂ ಸೇವೆ ಸಲ್ಲಿಸುತ್ತಿದೆ. ಆದ್ದರಿಂದಲೇ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಯಾವುದೇ ಸಂಸ್ಥೆ ಬೆಳೆಯಬೇಕಾದರೆ ನಿಸ್ವಾರ್ಥತೆ ಇರಬೇಕು. ಇದರಲ್ಲಿ ಯಾವತ್ತು ರಾಜಕಾರಣ ಬೆರಸಬಾರದು. ಅಂತಹ ಸಾಲಿನಲ್ಲಿ ಹೋರ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವೂ ಒಂದು. ನಿಸ್ವಾರ್ಥ ಮನೋಭಾವದಿಂದ ಆಡಳಿತ ಮಂಡಳಿಯೂ ಸೇವೆ ಸಲ್ಲಿಸುತ್ತಿದೆ. ಆದ್ದರಿಂದಲೇ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಹೊರ್ತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ 50ನೇ ವರ್ಷದ ಸವಿ ನೆನಪಿಗಾಗಿ ನಿರ್ಮಿಸಿದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಹಿಳೆಯರು ಎಲ್ಲರೂ ಸೇರಿ ಅತಿ ಹೆಚ್ಚು ಲಾಭ ಮಾಡಿದ ಸಂಘ ಇದಾಗಿದೆ. ಬಸ್ ಟಿಕೆಟ್, ವಿಮಾನ, ರೈಲ್ವೆ ಟಿಕೆಟ್‌, ಸಾರ್ವಜನಿಕ ಕುಡಿಯುವ ನೀರು ವ್ಯವಸ್ಥೆ ಜನರಿಗೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸುವ ಹೊರ್ತಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಂಘ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.ಸಂಸ್ಥೆಗಳು ಉಳಿಬೇಕಾದರೆ ಪ್ರಾಮಾಣಿಕತೆಯಿಂದ ಅಲ್ಲಿನ ಸಿಬ್ಬಂದಿಗಳು ಕೆಲಸ ಮಾಡಬೇಕು. ರೈತರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಸಹಕಾರಿ ಬ್ಯಾಂಕ್‌ಗಳು ಮಾಡುತ್ತವೆ. ಹಳ್ಳಿಯಿಂದ ದಿಲ್ಲಿಯೇ ವಿನಹಃ, ದಿಲ್ಲಿಯಿಂದ ಹಳ್ಳಿ ಯಾವತ್ತೂ ಆಗಲಾರದು. ರೈತ ದೇಶದ ಬೆನ್ನೆಲುಬು ಅನ್ನೋದು ನಾವು ಯಾವತ್ತೂ ಪಾಲಿಸೋದು ನಮ್ಮ ಆದ್ಯ ಕರ್ತವ್ಯ. ದಿ.ಪಾಂಡುರಂಗ ದೇಸಾಯಿ 1919ರಲ್ಲಿ ಡಿ.ಸಿ.ಸಿ ಬ್ಯಾಂಕ್‌ ಪ್ರಾರಂಭ ಮಾಡಿದ್ದು, ಇವತ್ತು ಹೆಮ್ಮರವಾಗಿ ಬೆಳೆದಿದೆ. ಸ್ವಸಹಾಯ ಗುಂಪುಗಳು, ರೈತರಿಗೆ ಬಡ್ಡಿರಹಿತ ಸಾಲ ನೀಡುವುದು ನಮ್ಮ ಸಂಘದ ಮುಖ್ಯ ಉದ್ದೇಶ ಎಂದನ್ನು ತಿಳಿಸಿದರು.ಇಡೀ ದೇಶದಲ್ಲಿ ಬಡ್ಡಿರಹಿತ ಸಾಲ ನೀಡುವ ರಾಜ್ಯ ಕೇವಲ ಕರ್ನಾಟಕ ರಾಜ್ಯ ಮಾತ್ರ. ಒಂದು ದಿನದಲ್ಲಿ ಒಂದು ಕೋಟಿ ಒಂದು ಲಕ್ಷ ಹಾಲು ಉತ್ಪಾದನೆ ಮಾಡಿರುವುದು ನಮ್ಮ ರಾಜ್ಯ. ಆದರೆ ರೈತ ಬೆಳೆದ ಬೆಳೆಗೆ ಸರಿಯಾದ, ಯೋಗ್ಯ ಬೆಲೆ ಇದುವರೆಗೂ ಸಿಗುತ್ತಿಲ್ಲ. ಇದನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳು ತೀಕ್ಷಣವಾಗಿ ವಿಚಾರ ಮಾಡಬೇಕು ಎಂದು ತಿಳಿಸಿದರು.ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ರೈತ ಅಭಿವೃದ್ಧಿಗೆ ನಾವು ಬದ್ಧರಾಗಿದ್ದು, ಯಾವುದೇ ಸರಕಾರ ಇದ್ದರೂ ನಾನು ರೈತರ ಪರವಾಗಿ ನಿಲ್ಲುತ್ತೇನೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಸಂಪೂರ್ಣವಾದರೆ ನಮ್ಮ ರೈತರ ಬಾಳು ಬಂಗಾರ ವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ರೈತ ದುಡಿಯದೆ, ಬಿತ್ತನೆ ಮಾಡದೇ ಹೋದರೆ ದೇಶ ಬಿಕ್ಕುವುದು ಸತ್ಯ. ಅದೇ ರಾಜಕಾರಣಿ, ಅಧಿಕಾರಿಗಳು, ತಮ್ಮ ಕೆಲಸ ನಿಲ್ಲಿಸಿದರೆ ದೇಶಕ್ಕೆ ತೊಂದರೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ರೈತ ತನ್ನ ಕೆಲಸ ನಿಲ್ಲಿಸದರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ಈ ಕಾರ್ಯಕ್ರಮದಲ್ಲಿ ಡಾ.ಮಂಹಾಂತಪ್ರಭು ಮಹಾಸ್ವಾಮಿಗಳು ವಿರಕ್ತ ಮಠ ಶೆಗುಣಸಿ ಸಾನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಮಾಹದೇವ ಪೂಜಾರಿ, ಆರ್.ಬಿ.ಗುಡದಿನ್ನಿ, ಈರಣ್ಣ ಕರಿಗೌಡರ, ಸಿದ್ದರಾಯ ಭೋಸಗಿ, ಎಮ್.ಆರ್.ಪಾಟೀಲ, ಶ್ರೀಮಂತ ಇಂಡಿ, ಕಲ್ಲನಗೌಡ ಪಾಟೀಲ, ಅರವಿಂದ ಪೂಜಾರಿ, ಸಂತೋಷ ಪಾಟೀಲ, ಎಸ್.ಕೆ.ಭಾಗ್ಯಶ್ರೀ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-------

ಕೋಟ್‌

ಸಂಸ್ಥೆಗಳು ಉಳಿಬೇಕಾದರೆ ಪ್ರಾಮಾಣಿಕತೆಯಿಂದ ಅಲ್ಲಿನ ಸಿಬ್ಬಂದಿಗಳು ಕೆಲಸ ಮಾಡಬೇಕು. ರೈತರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ಸಹಕಾರಿ ಬ್ಯಾಂಕ್‌ಗಳು ಮಾಡುತ್ತವೆ. ಹಳ್ಳಿಯಿಂದ ದಿಲ್ಲಿಯೇ ವಿನಹಃ, ದಿಲ್ಲಿಯಿಂದ ಹಳ್ಳಿ ಯಾವತ್ತೂ ಆಗಲಾರದು. ರೈತ ದೇಶದ ಬೆನ್ನೆಲುಬು ಅನ್ನೋದು ನಾವು ಯಾವತ್ತೂ ಪಾಲಿಸೋದು ನಮ್ಮ ಆದ್ಯ ಕರ್ತವ್ಯ.ಶಿವಾನಂದ ಪಾಟೀಲ, ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ