ವಿಜಯಪುರ: ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಾರ್ಥಕಗೊಳಿಸುವ ಶಕ್ತಿ ನಿಮ್ಮದಾಗಲಿ ಎಂದು ಉಪನ್ಯಾಸಕ ಬಿ.ಪಿ.ಬೈರೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಟೌನ್ ಕಸಾಪ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. ಹೃದಯ ಹಾಗೂ ಮೆದುಳಿನ ನಡುವಿನ ಸಂಘರ್ಷದಲ್ಲಿ ನೀವು ನಿಮ್ಮ ಹೃದಯವನ್ನು ಅನುಸರಿಸಿ ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ನೀವೇ ಮಾತನಾಡಿಕೊಳ್ಳಿ. ಇಲ್ಲದಿದ್ದರೆ ಒಗತ್ತಿನಲ್ಲಿ ಒಬ್ಬ ಅದ್ಭುತ ವ್ಯಕ್ತಿಯನ್ನು ನೀವು ಕಳೆದುಕೊಳ್ಳುತ್ತೀರಿ. ನಿಮ್ಮನ್ನು ನೀವು ನಂಬುವವರೆಗೂ ನಿಮಗೆ ದೇವರ ಮೇಲೆ ನಂಬಿಕೆ ಬಾರದು. ನಾವು ಏನಾಗಿದ್ದೇವೋ ಅದು ನಮ್ಮ ವಿಚಾರಗಳಿಂದಲೇ. ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ ಗಮನ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ನಾಗರಾಜ್ ಮಾತನಾಡಿದರು. ಉಪನ್ಯಾಸಕರಾದ ಶೆಟ್ಟಿ ನಾಯಕ್, ಪುರಸಭಾ ಸದಸ್ಯರಾದ ರಾಜಣ್ಣ, ಸಿ.ಎಂ.ರಾಮನಾರಾಯಣಸ್ವಾಮಿ, ರಬ್ಬನಹಳ್ಳಿ ಕೆಂಪಣ್ಣ. ವಾಸದೇವ ಹೊಸಳ್ಳಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.