ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಪಡುವಾರಹಳ್ಳಿಯ ವಿನಾಯಕ ಕನ್ವೆಷನ್ ಹಾಲ್ ನಲ್ಲಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಇತರೆ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಹಾಲಿನ ದರ ಹೆಚ್ವಳ ಮಾಡಬಹುದಿತ್ತು. ಆಗಿನ ಸರ್ಕಾರ ಆ ಕೆಲಸಕ್ಕೆ ಮುಂದಾಗಲಿಲ್ಲ. ಸಿದ್ದರಾಮಯ್ಯ ಅವರು ಆಡಳಿತಕ್ಕೆ ಬಂದ ಬಳಿಕ 36 ರೂಪಾಯಿಗೆ ಹೆಚ್ಚಳ ಮಾಡಿ ರೈತರಿಗೆ ನೆರವಾಗಿದ್ದಾರೆ. ಅದು ಮತ್ತಷ್ಟು ಹೆಚ್ಚಳ ಆಗಬೇಕೆಂಬುದು ಎಲ್ಲರ ಒಕ್ಕೊರಲ ಬೇಡಿಕೆಯಾಗಿದೆ. ಅದನ್ನು ಸರ್ಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.ಮರಣ ನಿಧಿಯನ್ನು 15 ಸಾವಿರ ಮಾಡಿದ್ದು, 60 ವರ್ಷ ಮೇಲ್ಪಟ್ಟವರಿಗೆ 20 ಸಾವಿರ ನಿಧಿ ನೀಡಲು ತೀರ್ಮಾನಿಸಲಾಗಿದೆ. ಪ್ರತಿಯೊಬ್ಬರಿಗೂ 1 ಲಕ್ಷ ರೂ. ವಿಮೆ ಮಾಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ರಾಸುಗಳಿಗೂ ವಿಮೆ ಕಡ್ಡಾಯ ಮಾಡಿದ್ದು, ರಾಸುಗಳ ವಿಮೆ ಹೆಚ್ಚಳ ಸಂಬಂಧ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಸದ್ಯ 2 ವರ್ಷಕ್ಕೊಮ್ಮೆ ಇರುವ ವಿಮೆಯನ್ನು ಪ್ರತಿ ವರ್ಷಕ್ಕೊಮ್ಮೆ ಕಡಿತಗೊಳಿಸಿ ಗೋವಿನ ಬೆಲೆಗೆ ಅನುಸಾರ ನೀಡುವ ಬಗ್ಗೆ ಕೈಗೊಳ್ಳಲಾಗುವುದು. ಮ್ಯಾಟ್ ಗಳಿಗೆ ಹೆಚ್ಚಿನ ಬೇಡಿಕೆಗಳಿರುವುದು ಗಮನಕ್ಕೆ ತಂದಿದ್ದೀರಿ, ಸದ್ಯ 2 ಸಾವಿರ ಮ್ಯಾಟ್ ಹಂಚಿದ್ದು, ಉಳಿದ 7 ಸಾವಿರ ಮ್ಯಾಟ್ ಗಳನ್ನು ಶೀಘ್ರ ಹಂಚುವ ಪ್ರಕ್ರಿಯೆ ನಡೆಯಲಿದೆ. ಚಾಪ್ ಕಟ್ಟರ್ ಗಳು ಬಂದಿದ್ದು, ಅವುಗಳನ್ನು ಪಡೆದುಕೊಳ್ಳಿ ಎಂದರು.
ಚೆನ್ನೈ 50 ಸಾವಿರ ಲೀಟರ್ ಮಾರಾಟ ಮಾಡಲಾಗುತ್ತಿದ್ದು, 1 ಲಕ್ಷಕ್ಕೆ ಏರಿಸುವ ಗುರಿ ಹೊಂದಿದ್ದೇವೆ. 17 ಸಾವಿರ ಲೀಟರ್ ಕೇರಳದಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ಮೈಸೂರು ಹೆಚ್ಚಿನ ದರ ಕೊಟ್ಟು ರಾಜ್ಯದಲೇ ನಂಬರ್ ಒನ್ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಪ್ರಶಸ್ತಿಗಳ ವಿವರ
ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಬಂಡಿಪಾಳ್ಯ ಬಸವರಾಜು, ದೇವನೂರು ಸುಹಾಸ್, ತುರಗನೂರು ಡಿ.ಪಿ. ಅಶೋಕ್ ಕುಲಕರ್ಣಿ, ಬಸವನಹಳ್ಳಿ ಸುರೇಶ್ ಬಾಬು, ಗುಳವಿನ ಅತ್ತೀಗುಪ್ಪೆ ಹನುಮಂತೇಗೌಡ, ಇಂದಿರಾನಗರ ಶಿಜೋ ಜಾರ್ಜ್, ನವಿಲೂರು ಪಿಡಿ ಭೂಷಿತ್ ಪ್ರಶಸ್ತಿ ಸ್ವೀಕರಿಸಿದರು.
ಮೈಮುಲ್ ನಿರ್ದೆಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ.ಓಂ. ಪ್ರಕಾಶ್, ಪಿ.ಎಂ. ಪ್ರಸನ್ನ, ಕೆ. ಈರೇಗೌಡ, ಕೆ.ಎಸ್. ಕುಮಾರ್, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ. ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್ ಮೊದಲಾದವರು ಇದ್ದರು.