ಚಿತ್ರಕಲಾ ಕ್ಷೇತ್ರಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ

KannadaprabhaNewsNetwork |  
Published : Sep 15, 2025, 01:01 AM IST
ಕಾರ್ಯಕ್ರಮದಲ್ಲಿ ಡಾ. ಬಿ.ಎಲ್.ಚವಾಣ ಮಾತನಾಡಿದರು. | Kannada Prabha

ಸಾರಾಂಶ

ಚಿತ್ರಕಲಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಲ್ಲಿ ಕಲಾಭಿರುಚಿ ಬೆಳೆಸಬೇಕು

ಗದಗ: ಚಿತ್ರಕಲೆ ಮನುಷ್ಯನಷ್ಟೇ ಪ್ರಾಚೀನವಾದುದು. ಭಾಷೆ, ದೇಶ, ಗಡಿಗಳನ್ನು ಮೀರಿ ಜನಮನ ಬೆಸೆಯುವ ಶಕ್ತಿ ಚಿತ್ರಕಲೆಗಿದೆ.ರಾಜ್ಯದಲ್ಲಿಯೇ ಹೆಚ್ಚು ಚಿತ್ರಕಲಾ ಮಹಾವಿದ್ಯಾಲಯಗಳನ್ನು ಹೊಂದಿದ ಗದಗ ಚಿತ್ರಕಲಾ ಕ್ಷೇತಕ್ಕೆ ಗಣನೀಯ ಕೊಡುಗೆ ನೀಡಿದೆ ಎಂದು ವಿದ್ಯಾದಾನ ಸಮಿತಿಯ ಜೆ.ಎನ್. ಕಲಾ ಮಹಾವಿದ್ಯಾಲಯದ ಪ್ರಾ.ಡಾ. ಬಿ.ಎಲ್. ಚವ್ಹಾಣ ಹೇಳಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸಂಶೋಧನಾ ಕೃತಿಗಳ ಪರಿಚಯ ಮಾಲಿಕೆಯಲ್ಲಿ ತಮ್ಮ ಸಂಶೋಧನಾ ಗ್ರಂಥದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಅಮೀನಸಾಬ್ ಕಮಡೊಳ್ಳಿ, ಸಿ.ಎನ್.ಪಾಟೀಲ, ಟಿ.ಪಿ.ಅಕ್ಕಿ, ಎಂ.ಎ. ಚೆಟ್ಟಿ.ಎನ್.ಎ.ಹರ್ಲಾಪೂರ, ಎ.ಎ.ಶಿರಹಟ್ಟಿ, ವಸಂತ ಅಕ್ಕಿ, ಅಶೋಕ ಅಕ್ಕಿ. ಕೆ.ವಿ.ಕುಂದಗೋಳ ಮೊದಲಾದವರು ತಮ್ಮ ಕಲಾಕೃತಿಗಳ ಮೂಲಕ ದೇಶದ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.

ಆರ್.ಡಿ. ಕಡ್ಲಿಕೊಪ್ಪ ಮಾತನಾಡಿ, ಚಿತ್ರಕಲಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಶಾಲಾ-ಕಾಲೇಜುಗಳಲ್ಲಿ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಲ್ಲಿ ಕಲಾಭಿರುಚಿ ಬೆಳೆಸಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿರುವದು ಗದುಗಿನ ಹೆಮ್ಮೆಯಾಗಿದೆ. ಈ ಹಿನ್ನೆಲೆಯಲ್ಲಿ 50 ಸಾವಿರ ದತ್ತಿನಿಧಿಯಾಗಿ ಸ್ಥಾಪಿಸುವದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಗರದಲ್ಲಿರುವ ಎಂ.ಎ.ಚೆಟ್ಟಿ ಆರ್ಟ ಗ್ಯಾಲರಿಯನ್ನು ಸುಸಜ್ಜಿತವಾಗಿ ಇಟ್ಟು ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಭೇಟಿ ನೀಡುವ ವಾತಾವರಣ ಇಲಾಖೆ ಮಾಡಬೇಕು. ಕಲಾವಿದರ ಚಿತ್ರ ಪ್ರದರ್ಶನ ನಿರಂತರವಾಗಿ ಏರ್ಪಡಿಸುವ ಮೂಲಕ ಈ ಭಾಗದ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಎ.ಐ ತಂತ್ರಜ್ಞಾನದ ಮೂಲಕ ಚಿತ್ರಗಳ ರಚನೆಯಾಗುತ್ತಿರುವ ಈ ಸಂದರ್ಭದಲ್ಲಿ ಕಲಾವಿದರು ಹೊಸ ಬದಲಾವಣೆ ಸ್ಪಂದಿಸಿ ತಮ್ಮ ಕಲಾಪ್ರತಿಭೆ ಮೆರೆಯುವ ಅನಿವಾರ್ಯತೆ ಉಂಟಾಗಿದೆ ಎಂದು ತಿಳಿಸಿದರು.

ಸಾಹಿತಿ ಬಸವರಾಜ ಗಣಪ್ಪನವರ, ಚಂದ್ರಶೇಖರ ವಸ್ತ್ರದ, ರತ್ನಕ್ಕ ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ಸಿ.ಕೆ. ಎಚ್.ಕಡಣಿಶಾಸ್ತ್ರಿ, ಡಾ. ಜಿ.ಬಿ.ಪಾಟೀಲ, ಭಾಗ್ಯಶ್ರೀ ಹುರಕಡ್ಲಿ, ಕೆ.ಎಸ್. ಗುಗ್ಗರಿ, ಸಿ.ಎಂ. ಮಾರನಬಸರಿ, ರಾಜಶೇಖರ ಕರಡಿ, ಕೆ.ಎಸ್. ಬಾಳಿಕಾಯಿ, ನೀಲಮ್ಮ ಅಂಗಡಿ, ಅಕ್ಕಮ್ಮ ಪಾರ್ವತಿಮಠ, ಯಲ್ಲಪ್ಪ ಹಂದ್ರಾಳ, ಎಸ್.ಎಸ್. ಪತ್ತಾರ, ಪಿ.ವಿ. ಇನಾಮದಾರ, ಚನವೀರಪ್ಪ ದುಂದೂರ, ಗಂಗಪ್ಪ ಮುದಗಲ್, ಬಿ.ಎಸ್. ಹಿಂಡಿ, ಅನ್ನದಾನಿ ಹಿರೇಮಠ, ಡಿ.ಜಿ.ಕುಲಕರ್ಣಿ, ದೇವೇಂದ್ರ ನಾಯಕ, ಪೃಧ್ವಿರಾಜ ಚವ್ಹಾಣ, ಎಸ್.ಎಲ್. ಕುಲಕರ್ಣಿ, ಬಿ.ಬಿ. ಹೊಳಗುಂದಿ, ಎಸ್.ಎಫ್.ಭಜಂತ್ರಿ, ಆರ್.ಕೆ.ಮೋನೆ, ಅಜಿತ ಘೋರ್ಪಡೆ, ಡಿ.ಎಸ್. ಬಾಪುರಿ, ದತ್ತಪ್ರಸನ್ನ ಪಾಟೀಲ ಮೊದಲಾದವರು ಇದ್ದರು. ರಾಹುಲ್‌ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ